Tuesday, April 16, 2024

ಉಸಿರುಗಟ್ಟಿಸಿ ಯುವತಿಯ ಕೊಲೆ ಮಾಡಿ ಶವಸಂಭೋಗ: ಮೂವರ ಆರೋಪಿಗಳ ಬಂಧನ.

ಕರೀಂಗಂಜ್: ಹದಿಹರೆಯದ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಶವಸಂಭೋಗ ನಡೆಸಿದ ಆರೋಪದಲ್ಲಿ ರೈಲ್ವೆ ಸಿಬ್ಬಂದಿ ಸೇರಿದಂತೆ ಮೂವರನ್ನು ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.ಈ ಘಟನೆ ಸೆಪ್ಟೆಂಬರ್ 9ರಂದು ನಡೆದಿದ್ದು ಕರೀಂಗಂಜ್ ಪಟ್ಟಣದ ಬೈಪಾಸ್ ನಲ್ಲಿ ಹತ್ಯೆ ನಡೆದ ದಿನವೇ ಅಪ್ರಾಪ್ತ ವಯಸ್ಸಿನ ಯುವತಿಯ ಮೃತದೇಹ ಪತ್ತೆಯಾಗಿತ್ತು.

ಶವಸಂಭೋಗ ನಡೆದಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದ್ದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕರೀಂಗಂಜ್ ಎಸ್ಪಿ ಪಾರ್ಥ ಪ್ರತೀಂ ದಾಸ್ ಹೇಳಿದ್ದಾರೆ.

ತನಿಖೆಯ ವೇಳೆ ಯುವತಿಯ ಡೈರಿಯಲ್ಲಿ ಪತ್ತೆಯಾದ ಫೋನ್ ನಂಬರ್ ಆಧಾರದಲ್ಲಿ ತನಿಖೆ ಮುಂದುವರಿ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.”ಹೊಸದಾಗಿ ಉದ್ಯೋಗಕ್ಕೆ ಸೇರಿದ ರೈಲ್ವೆ ಸಿಬ್ಬಂದಿಯೊಬ್ಬ ಈ ಯುವತಿ ಜತೆ ಪ್ರೇಮಸಂಬಂಧ ಹೊಂದಿದ್ದ ಹಾಗೂ ದೈಹಿಕ ಸಂಪರ್ಕಕ್ಕಾಗಿ ಒತ್ತಾಯಿಸುತ್ತಿದ್ದ. ಆದರೆ ಲೈಂಗಿಕತೆಯನ್ನು ಆಕೆ ನಿರಾಕರಿಸುತ್ತಾ ಬಂದಿದ್ದಳು ಎನ್ನುವುದು ತನಿಖೆಯಿಂದ ತಿಳಿ ಬಂದಿದೆ ಎಂದು ವಿವರಿಸಿದ್ದಾರೆ.

ಸೆಪ್ಟೆಂಬರ್ 9ರಂದು ಯುವತಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆಕೆಯ ಪ್ರಿಯಕರ ತನ್ನ ಇಬ್ಬರು ಸ್ನೇಹಿತರ ಜತೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಯುವತಿಯನ್ನು ಉಸಿರುಗಟ್ಟಿಸಿ ಸಾಯಿಸಿ ಒಬ್ಬರ ಮೇಲೆ ಒಬ್ಬರಂತೆ ಶವದ ಜತೆ ಲೈಂಗಿಕ ಚಟುವಟಿಕೆ ನಡೆಸಿದರು ಎಂದು ಹೇಳಿದ್ದಾರೆ. ಆರೋಪಿಗಳು ಮೃತದೇಹವನ್ನು ಹೆದ್ದಾರಿ ಬದಿ ಬಿಸಾಕಿ ಹೋಗಿದ್ದು ಪತ್ತೆಯಾದ ಶವವನ್ನು ಯುವತಿಯ ಪೋಷಕರು ಗುರುತಿಸಿದ್ದಾರೆ.

 

 

 

 

ಕೃಪೆ:ವಾರ್ತಾಭಾರತಿ

ಜಿಲ್ಲೆ

ರಾಜ್ಯ

error: Content is protected !!