Friday, April 19, 2024

ಮಾವೋವಾದಿಗಳ ಬಾಂಬ್‌ಗೆ ಓರ್ವ ಸಿಆರ್‌ಪಿಎಫ್‌ ಯೋಧ ಬಲಿ.

ರಾಂಚಿ: ಮಾವೋವಾದಿಗಳು ಇರಿಸಿದ್ದ ಸುಧಾರಿತ ಬಾಂಬ್‌ ಸಾಧನ ಐಇಡಿ ಸ್ಫೋಟಗೊಂಡು ಓರ್ವ ಸಿಆರ್‌ಪಿಎಫ್‌ ಯೋಧ ಹುತಾತ್ಮನಾಗಿ ಮತ್ತೋರ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಜಾರ್ಖಂಡಿನ ಕೊಲ್ಹಾನ್‌ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ 209 ಕೋಬ್ರಾ ತುಕಡಿ, ಜಾರ್ಖಂಡ್‌ ಜಾಗ್ವಾರ್‌ ಪಡೆ ಹಾಗೂ ರಾಜ್ಯ ಸಶಸ್ತ್ರಪಡೆಗಳು ಮಾವೋವಾದಿಗಳಿಗಾಗಿ ಶೋಧಕಾರ್ಯ ನಡೆಸುತ್ತಿತ್ತು. ಈ ವೇಳೆ ಇಬ್ಬರು ಸಿಆರ್‌ಪಿಎಫ್‌ ಸಿಬ್ಬಂದಿ ನೆಲದಲ್ಲಿ ಅವಿತಿಟ್ಟಿದ್ದ ಐಇಡಿಯನ್ನು ಮೆಟ್ಟಿದ ಪರಿಣಾಮ ಸ್ಫೋಟಗೊಂಡಿತು. ಇದರಿಂದಾಗಿ ತೀವ್ರವಾಗಿ ಗಾಯಗೊಂಡ ಯೋಧ ರಾಜೇಶ್‌ ಕುಮಾರ್‌  ಅವರನ್ನು ರಾಂಚಿಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. 

ಆದರೆ ರಾಜೇಶ್‌ ಕುಮಾರ್‌ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು. ಭೂಪೇಂದ್ರ ಕುಮಾರ್‌ ಎಂಬ ಮತ್ತೋರ್ವ ಯೋಧರಿಗೆ ತೀವ್ರಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

ಕೃಪೆ:ಸುವರ್ಣಾ

ಜಿಲ್ಲೆ

ರಾಜ್ಯ

error: Content is protected !!