Tuesday, April 16, 2024

ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ 63 ನೇ ವಾರ್ಷಿಕ ಮಹಾಸಭೆ ಜರುಗಿತು.

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ತಾಲೂಕಿನ ಎಂ.ಕೆ. ಹುಬ್ಬಳ್ಳಿ ಶ್ರೀ ಕಲ್ಮೇಶ್ವರ ಪ್ರೌಡಶಾಲೆ ಆವರಣದಲ್ಲಿ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ 63 ನೇ ವಾರ್ಷಿಕ ಮಹಾಸಭೆ ಜರುಗಿತು.
ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಿಕ ವೀರೇಶ ಹುಲಿಕಟ್ಟಿ ನಡುವಳಿಯನ್ನು ಓದಿ ಕಾರ್ಖಾನೆ ಅಭಿವೃದ್ಧಿಗೆ ಯಾವ ಯಾವ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂಬುವುದನ್ನು ಸವಿಸ್ಥಾರವಾಗಿ ತಿಳಿಸಿ ನಡುವಳಿ ಅನುಮೋದನೆ ಪಡೆದುಕೊಳ್ಳುವ ವೇಳೆ ರೈತರಾದ ಬಸನಗೌಡ ಸಿದ್ರಾಮನಿ, ಆನಂದ ಹುಚಗೌಡ್ರÀ, ರುದ್ರಪ್ಪ ಕೊಡ್ಲಿ, ಸುನೀಲ ತಿಪ್ಪಣ್ಣವರ, ಪಡೆಪ್ಪ ಬೋಗುರು, ಪುಂಡಲೀಕ ನೀರಲಕಟ್ಟಿ, ಬಸನಗೌಡ ಪಾಟೀಲ, ಅಜ್ಜಪ್ಪ ಮೋದಗಿ ಸೇರಿದಂತೆ ಅನೇಕರು ತಾವು ನಡುವಳಿಗೆ ಅನುಮೋದನೆ ಪಡೆದುಕೊಳ್ಳುವ ಮೊದಲು ೨೦೧೭-೧೮ ಸಾಲಿನ ರೈತರ ಬಾಕಿ, ಕಳೆದ ಸಾಲಿನ ಮಹಾಸಭೆಯಲ್ಲಿ ಪ್ರತಿ ರೈತರಿಗೆ ೫೦ ಕೆ.ಜಿ. ಸಕ್ಕರೆ ನೀಡು ಬಗ್ಗೆ ಹಾಗೂ ಕೇಂದ್ರ ಸರಕಾರ ರೈತರಿಗೆ ೫.೫೦ ಕೋಟಿ ಸಬ್ಸಿಡಿ ಹಣ ನೀಡಿತ್ತು ಈ ಹಣ ರೈತರಿಗೆ ಕೊಡದೆ ಯಾವುದಕ್ಕೆ ಬಳಕೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಬೇಕು ಎಂದು ಪಟ್ಟು ಹಿಡಿದು ರೈತರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು ಇದರಿಂದ ಸುಮಾರು ಗಂಟೆಯ ವರೆಗೆ ಆಡಳಿತ ಮಂಡಳಿ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ಕಾರ್ಖಾನೆ ಅಧ್ಯಕ್ಷ ಮೋಹನ ಸಂಬರಗಿ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಕಾರ್ಖಾನೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಕಾರ್ಖಾನೆಗೆ 2017-18 ಸಾಲಿನಲ್ಲಿ ಕಬ್ಬು ಪೂರೈಸಿದ ರೈತರ ಬಾಕಿ ೫೯೪ ರೂ ಹಾಗೂ ಕಳೆದ ಸಾಲಿನ ಮಹಾಸಭೆಯಲ್ಲಿ ಷೇರುದಾರರಿಗೆ ೫೦ ಕೆ.ಜಿ. ಸಕ್ಕರೆ ನೀಡುವುದ್ದಾಗಿ ತಿರ್ಮಾಣ ತೆಗೆದುಕೊಂಡಿದ್ದು ನಿಜ ಇವುಗಳನ್ನು ನೀಡಬೇಕು ಎಂದು ತಾವು ಕೇಳುತ್ತಿರುವುದು ಸರಿ ಇದೆ ಎಂದು ಮಾತು ಆರಂಭಸಿದ ಸಂಬರಗಿಯವರು ಈಗಾಗಲೇ 2017-18 ನೇ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಟನ್‌ಗೆ ಎರಡುನೂರು ರೂಪಾಯಿ ನೀಡಲು ಎಲ್ಲ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎರಡು ದಿನದಲ್ಲಿ ಕಬ್ಬು ಪೂರೈಸಿದ ಎಲ್ಲ ರೈತರಿಗೂ ಹಣ ಜಮಾ ಮಾಡಲಾಗುವುದು ಮತ್ತು ಉಳಿದ ಬಾಕಿ ಹಣವನ್ನು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಆದಷ್ಟು ಬೇಗನೆ ನೀಡಲಾಗುವುದು ಎಂದ ಅವರು ಕಳೆದ ಮಹಾ ಸಭೆಯಲ್ಲಿ 50 ಕೆ.ಜಿ. ಸಕ್ಕರೆ ನೀಡಲು ಬರವಸೆ ನೀಡಲಾಗಿತ್ತು ಆದರೆ ಕಳೆದ ಸಾಲಿನಲ್ಲಿ ಸಮರ್ಪಕವಾಗಿ ಕಬ್ಬು ನುರಿಸಲಾಗದೆೆ ಇರುವುದರಿಂದ 50 ಕೆ.ಜಿ ಸಕ್ಕರೆ ಕೊಡಲು ಸಾಧ್ಯವಾಗಿಲ್ಲ. ಮುಂಬರುವ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಯ ಪ್ರತಿ ಷೇರುದಾರರು ಕನಿಷ್ಠ 20 ಟನ್ ಕಾರ್ಖಾನೆಗೆ ಕಬ್ಬು ಪೂರೈಸಿದರೆ ನಮ್ಮ ಆಡಳಿತ ಮಂಡಳಿ ತಾವುಗಳು ಕೇಳುವಷ್ಟು ಸಕ್ಕರೆ ಕೊಡಲು ತಯಾರಿದೆ ಎಂದರು.
ಕೆಲ ಬಂಡವಾಳ ಶಾಹಿಗಳು ಕಾರ್ಖಾನೆಯನ್ನು ತಮ್ಮ ತೆಕ್ಕೆಗೆ ಪಡೆಯಲು ಹೊನ್ನಾರ ನಡೆಸುತ್ತಿದ್ದಾರೆ. ಈ ಕಾರ್ಖಾನೆ ಕಟ್ಟಲು ಅನೇಕ ಹಿರಿಯ ಜೀವಿಗಳು ಶ್ರಮಿಸಿದ್ದಾರೆ. ಅವರ ಶ್ರಮ ವ್ಯರ್ಥವಾಗದಂತೆ ಕಾಳಜಿವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಇದನ್ನು ಅರಿತು ನಾವುಗಳು ಕಾರ್ಖಾನೆ ಉಳುವಿಗಾಗಿ ಶ್ರಮಿಸಬೇಕಾಗಿದೆ. ಇದಕ್ಕೆ ತಮ್ಮೆಲ್ಲರ ಸಾಹಕಾರಬೇಕು ಎನ್ನುತ್ತಿದಂತೆ ಕಾರ್ಖಾನೆ ಷೇರು ಸದಸ್ಯ ಬಸನಗೌಡ ಸಿದ್ರಾಮನಿ ಹಾಗೂ ಇನ್ನು ಅನೇಕ ರೈತರು ಅಧ್ಯಕ್ಷರ ಭಾಷಣ ತಡೆದು ಅಧ್ಯಕ್ಷರೆ ತಮ್ಮ ಆಶೆಯಾದಂತೆಯೇ ನಾವು ನಡೆದುಕೊಳ್ಳುತ್ತೇವೆ ಕಾರ್ಖಾನೆಗೆ ತಾವು ಹೇಳಿದಕ್ಕಿಂತ ಹೆಚ್ಚು ಕಬ್ಬು ಪೂರೈಸಲು ಎಲ್ಲ ಷೇರುದಾರರು ತಯಾರಿದ್ದಾರೆ ಕಾರ್ಖಾನೆ ಆಡಳಿತ ಮಂಡಳಿ ರೈತರಿಗೆ ಕಬ್ಬು ಕಟಾವು ಮಾಡುವ ಗ್ಯಾಂಗ್ ಹಾಗೂ ವ್ಯವಸ್ಥಿತವಾಗಿ ಕಬ್ಬು ಸಾಗಿಸಲು ವಾಹನಗಳ ವ್ಯವಸ್ಥೆಯನ್ನು ಕಾರ್ಖಾನೆಯವರು ಮಾಡಿಕೊಳ್ಳಿ ಎಂದು ಆಡಳಿತ ಮಂಡಳಿಯನ್ನು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು ಮತ್ತು ಎಫ್‌ಆರ್‌ಪಿ ನಿಗಧಿ ಮಾಡಿದ ಪ್ರಕಾರ ಬಿಲ್ ನೀಡಲಾಗುವುದು ಎಂದರು.
ಕಾರ್ಖಾನೆ ಮಾಜಿ ಅಧ್ಯಕ್ಷರು, ಮಾಜಿ ಸಚಿವರಾದ ದಿವಂಗತ ಡಿ.ಬಿ.ಇನಾಮದಾರ (ಧಣಿ) ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಎರಡು ನಿಮಿಷ ಮೌನಾಚಾರಣೆ ಮಾಡಿ ಸಂತಾಪ ಸೂಚಿಸಿದ ಬಳಿಕ ಮಹಾಸಭೆ ಪ್ರಾರಂಭವಾಯಿತು.
ಈ ವೇಳೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ತೋಲಗಿ ಗ್ರಾಮದ ಸುನೀತಾ ದೋಂಡಪ್ಪನವರ ಅವರನ್ನು ಸನ್ಮಾನಿಸಲಾಯಿತು.
ಕಾರ್ಮಿಕ ಸಂಘದ ಅಧ್ಯಕ್ಷ ರಾಜೇಶ ರೂಮೋಜಿ ಮಹಾಸಭೆ ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಕಾರ್ಖಾನೆ ಅಧ್ಯಕ್ಷ ಮೋಹನ ಸಂಬರಗಿ, ಉಪಾಧ್ಯಕ್ಷೆ ಲಕ್ಷ್ಮೀ ಅರಳಿಕಟ್ಟಿ, ನಿರ್ದೇಶಕರಾದ ಲಕ್ಷ್ಮಣ ಎಮ್ಮಿ, ಶಂಕರಗೌಡ ಪಾಟೀಲ, ಮಂಜುನಾಥ ಪಾಟೀಲ, ಸಿದ್ದಪ್ಪ ದುರಪ್ಪನವರ, ಅಶೋಕ ಬೆಂಡಿಗೇರಿ, ಬಸವರಾಜ ಪುಂಡಿ, ಭರತೇಶ ಶೇಬಣ್ಣವರ, ಜ್ಯೋತಿಬಾ ಹೈಭತ್ತಿ, ಬಸವರಾಜ ಬೆಂಡಿಗೇರಿ, ಸಂಜೀವ ಹುಬಳೆಪ್ಪನವರ, ಸಾವಂತ ಕಿರಬನವರ, ಮೀನಾಕ್ಷಿ ನೆಲಗಳಿ, ಸರ್ಇವ ಸದಸ್ಯರು ಹಾಗೂ ರೈತರು ಇದ್ದರು.

 

ಜಿಲ್ಲೆ

ರಾಜ್ಯ

error: Content is protected !!