Saturday, July 27, 2024

ಕಾವೇರಿ ವಿವಾದ ಬಗೆಹರಿಸಲು ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಬೇಕು: ಮಾಜಿ ಸಿಎಂ ಬೊಮ್ಮಾಯಿ.

ಬೆಂಗಳೂರು: ಕಾವೇರಿ ವಿವಾದ ಬಗೆಹರಿಸಲು ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಬೆಂಗಳೂರು ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ” ‌ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ. ಬದಲಾಗಿ ಸೋನಿಯಾ ಗಾಂಧಿ ಮಧ್ಯಪ್ರದೇಶ ಮಾಡಿ ತಮಿಳುನಾಡಿಗೆ ಬುದ್ದಿವಾದ ಹೇಳಬೇಕು. ಸೋನಿಯಾ ಗಾಂಧಿ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕಿ. ಅವರಿಗೆ ಅಧಿಕಾರ ಇದೆ ” ಎಂದರು.

ಕರ್ನಾಟಕಕ್ಕೆ ಕರಾಳ ಆಡಳಿತ ಇದಾಗಿದೆ. ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಜನತೆಗೆ ಸರಿಯಾದ ನೀರು ಕೊಡಲು ಯೋಗ್ಯತೆ ಇಲ್ಲ. ಅಭಿವೃದ್ಧಿ ಸಂಪೂರ್ಣ ನಿಂತುಹೋಗಿದೆ. ಕರ್ನಾಟಕ ರಾಜ್ಯದ ನೆಲ ಜಲ ರಕ್ಷಣೆ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ವಿಚಾರವಾಗಿ ಪ್ರಾರಂಭದಲ್ಲೇ ಸರ್ಕಾರದ ಎಡವಿದೆ ಹಾಗೂ ನಿರ್ಲಕ್ಷ್ಯ ಮಾಡಿದೆ. ಬದ್ಧತೆಯಿಂದ ಕೆಲಸ‌ ಮಾಡಿಲ್ಲ. ಇದರಿಂದ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಕುಡಿಯುವ ನೀರಿಗೆ ಕೊರತೆ ಆದರೆ ಅದಕ್ಕೆ ಸರ್ಕಾರ ಹೊಣೆ ಎಂದು ವಾಗ್ದಾಳಿ ನಡೆಸಿದರು.

ಅಕ್ರಮವಾಗಿ ತಮಿಳುನಾಡಿಗೆ ನೀರು

ಆಜ್ಞೆ ಮಾಡುವ ಮೊದಲೇ ನೀರು ಬಿಟ್ಟಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿ ಎಂದು ಹೇಳಿದ್ದರೂ ಹಾಕಿಲ್ಲ. ತಮಿಳುನಾಡಿಗೆ ಅರ್ಜಿಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಅಷ್ಟೇ. ಅಕ್ರಮವಾಗಿ ತಮಿಳುನಾಡು ನೀರು ಬಳಕೆ ಮಾಡಿದೆ. ಇದನ್ನು ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತರಲಾಗಿಲ್ಲ ಎಂದರು.

ಕರ್ನಾಟಕ 75 ವರ್ಷದ ಇತಿಹಾಸದಲ್ಲಿ ಇಂತಹ ಬೇಜವಾಬ್ದಾರಿ ಸರ್ಕಾರವನ್ನು ನಾವು ನೋಡಿಲ್ಲ. ಬೆಂಗಳೂರು ಅಂತರಾಷ್ಟ್ರೀಯ ಮಟ್ಟದ ನಗರ. ಇಲ್ಲಿ‌ ನೀರಿಲ್ಲ ಎಂದರೆ ದೇಶಕ್ಕೆ ಅವಮಾನ. ಡಿಕೆಶಿ ಬ್ರಾಂಡ್ ಬೆಂಗಳೂರು ಅಂತಾರೆ, ಆದರೆ ಕುಡಿಯಲು ನೀರಲ್ಲ ಎಂದರೆ ಹೇಗೆ?

ಸರ್ಕಾರದಲ್ಲಿ ತಾಳ ಮೇಳ ಇಲ್ಲ. ಸಿಎಂ ನೀರು ಬಿಡಲ್ಲ ಅಂದರೆ ಡಿಕೆಶಿ ನೀರು ಬಿಡುತ್ತೇವೆ ಅಂತಾರೆ. ತಮಿಳುನಾಡಿನ ಹಿತಾಸಕ್ತಿಯನ್ನು ಕಾಪಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರ ಕೋಡಿ:

ಈ ಸರ್ಕಾರದ ವಿರುದ್ದ ಈ ಪ್ರತಿಭಟನೆ ಅಗತ್ಯವಿತ್ತು ಬೆಂಗಳೂರಿನಲ್ಲಿ ನಮ್ಮವರು ಹೆಚ್ಚು ಶಾಸಕರಿದ್ದಾರೆ. ನಾವು ಇಲ್ಲಿ ಪ್ರತಿಪಕ್ಷವಲ್ಲ ಒಂದು ರಾಷ್ಟ್ರೀಯ ಪಕ್ಷವಾಗಿ ನಮ್ಮ ಜವಾಬ್ದಾರಿ ಇದೆ. ಮಂಡ್ಯ, ಮೈಸೂರು ಭಾಗದ ರೈತರಿಗೆ ನೀರು ಬಿಡದೆ ಬೆಳೆ ಒಣಗಿದೆ ಅವರಿಗೆ ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕು. ತಕ್ಷಣ ನೀರು ಹರಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಾವೇರಿ ಹೋರಾಟ ಉಗ್ರವಾಗಿ ನಡೆಯಲಿದೆ ಎಂದು ಹೇಳಿದರು. ಕಾವೇರಿ ನೀರಿಗಾಗಿ ರೈತರು ಮತ್ತು ಸಂಘಟನೆಗಳು ನಡೆಸುವ ಹೋರಾಟಗಳಿಗೆ ಬಿಜೆಪಿಯ ಸಂಪೂರ್ಣ ಬೆಂಬಲ‌ ಇದೆ ಎಂದು ಹೇಳಿದರು. ಪ್ರತಿಭಟನಾ ನಿರತ ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ನಾಯಕರನ್ನು ಪೊಲಿಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

 

 

ಕೃಪೆ:ವಿಕ

ಜಿಲ್ಲೆ

ರಾಜ್ಯ

error: Content is protected !!