Friday, July 26, 2024

ಚೈತ್ರಾ ಕುಂದಾಪುರ ಟಿಕೆಟ್‌ ವಂಚನೆ ಬಹಿರಂಗಕ್ಕೂ ಮೊದಲೇ ದೂರು ನೀಡಿದ್ದ ಹಾಲಶ್ರೀ ಸ್ವಾಮೀಜಿ

ಬೆಂಗಳೂರು: ಬಿಜೆಪಿ ಟಿಕೆಟ್‌ ವಂಚನೆ ಕೃತ್ಯ ಬೆಳಕಿಗೆ ಬರುವ ಮುನ್ನವೇ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿ ಉದ್ಯಮಿ ಗೋವಿಂದ ಪೂಜಾರಿ ವಿರುದ್ಧವೇ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಬಳ್ಳಾರಿ ಜಿಲ್ಲೆ ಹಡಗಲಿಯ ಹಾಲಶ್ರೀ ಸ್ವಾಮೀಜಿ ದೂರು ನೀಡಿದ್ದ ಸಂಗತಿ ತಡವಾಗಿ ಬಯಲಾಗಿದೆ.

ಆದರೆ ಹಾಲಶ್ರೀ ನೀಡಿದ್ದ ದೂರನ್ನು ಗಂಭೀರ ಸ್ವರೂಪವಲ್ಲದ ಕೃತ್ಯ (ಎನ್‌ಸಿ) ಎಂದು ಪರಿಗಣಿಸಿ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು. ಇದಾದ ತಿಂಗಳ ಬಳಿಕ ಸ್ವಾಮೀಜಿ ವಿರುದ್ಧ ಗೋವಿಂದ ಬಾಬು ಪೂಜಾರಿ ವಂಚನೆ ಪ್ರಕರಣ ದಾಖಲಿಸಿದ್ದು, ಸದ್ಯ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ.

ರಾಜರಾಜೇಶ್ವರಿ ನಗರ ಸಮೀಪದ ಕೆಂಚೇನಹಳ್ಳಿಯ ಪ್ರೀಮಿಯರ್‌ ಟೆಂಪಲ್ ಬೆಲ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಹಾಲಶ್ರೀ ನೆಲೆಸಿದ್ದರು. ಜು.11ರಂದು ಆರ್‌.ಆರ್‌.ನಗರ ಠಾಣೆಗೆ ತೆರಳಿದ ಸ್ವಾಮೀಜಿ, ತಮ್ಮ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಈ ದೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಸೀನಪ್ಪ ಶೆಟ್ಟಿ, ಉಡುಪಿಯ ಕಾಂಗ್ರೆಸ್ ಪಕ್ಷದ ಸೇವಾ ದಳ (ಸಾಮಾಜಿಕ ಜಾಲತಾಣ)ದ ಸಂಚಾಲಕ ಹರ್ಷ ಮೆಂಡನ್‌, ದಿನೇಶ್ ನಾಯ್ಕ್ ಹಳ್ಳಿಹೊಳಿ ಹಾಗೂ ಗೋವಿಂದ ಪೂಜಾರಿ ಅವರ ಹೆಸರು ಉಲ್ಲೇಖಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹಾಲಶ್ರೀ ಒತ್ತಾಯಿಸಿದ್ದರು.

 

 

 

 

ಕೃಪೆ:ಸುವರ್ಣಾ

ಜಿಲ್ಲೆ

ರಾಜ್ಯ

error: Content is protected !!