Tuesday, September 17, 2024

ಸೋಮೇಶ್ವರ ಸಕ್ಕರೆ ಪ್ಯಾಕ್ಟರಿ ಅಭಿವೃದ್ಧಿಗೆ ಪಣತೊಟ್ಟ ತೇಜಸ್ವಿ ಯುವಕ ಸಿದ್ದನಗೌಡ…!

ಚನ್ನಮ್ಮನ ಕಿತ್ತೂರು: “ಕೃಷಿ ಕೃತ್ಯ ಕಾಯಕ ಮಾಡುವ ಸದ್ಭಕ್ತನ ಪಾದಗಳ ತೋರಿಸಿ ಬದುಕಿಸಯ್ಯ, ಆತನ ತನು ಶುದ್ಧ, ಆತನ ಮನ ಶುದ್ಧ, ಆತನ ಭಾವ ಶುದ್ದ. ಆತನ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆ ಮಾಡಿದ ಗುರು ಪಾವನ ನೋಡಾ ಕೂಡಲಸಂಗಮದೇವ” ಎಂಬ ಬಸವಣ್ಣನವರ ವಚನದಂತೆ ಬದುಕಿದ ಅಮರಾಪೂರ ಗ್ರಾಮದ ಮರಿಗೌಡ ಪಾಟೀಲ ಅವರ ಮಗ ಸಿದ್ದನಗೌಡ ಅವರು ಈ ಭಾಗದ ರೈತರ ಏಳಿಗೆ ಮತ್ತು ಅಭಿವೃದ್ಧಿಯನ್ನೇ ಅಜೆಂಡಾ ಇಟ್ಟುಕೊಂಡು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಬೆಂಬಲ ಹಾಗೂ ಯುವ ಉದ್ಯಮಿಯಾಗಿ ತಾನು ಮಾಡಿದ ಜನಪರ ಕಾರ್ಯಗಳನ್ನು ಸಮಾಜದ ಮುಂದಿಟ್ಟು ನಾಳೆ ರವಿವಾರ ಸೆ.10 ರಂದು ನಡೆಯಲಿರುವ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಆಯ್ಕೆ ಬಯಸಿ ಸಿದ್ದನಗೌಡ ಮರಿಗೌಡ ಪಾಟೀಲ ಅವರು ಶ್ರೀ ಸೋಮೇಶ್ವರ ರೈತರ ಅಭಿವೃದ್ಧಿ ಸಹಕಾರಿ ಪೆನಲ್‌ಲ್ಲಿ ಸ್ಪರ್ಧೆ ಮಾಡಿದ್ದಾರೆ.

ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಗಾಗಿ ಬಾಳೇಕುಂದರಗಿ ಸಹಕಾರಿ ಪೆನೆಲ್”, “ಶ್ರೀ ಸೋಮೇಶ್ವರ ರೈತರ ಅಭಿವೃದ್ಧಿ ಸಹಕಾರಿ ಪೆನೆಲ್’ ಮತ್ತು ‘ಕಿಸಾನ್ ಸಹಕಾರಿ ಪೆನೆಲ್ ಗಳ ಮಧ್ಯೆ ತುರುಸಿನ ಜಿದ್ದಾಜಿದ್ದಿ ಆರಂಭವಾಗಿದ್ದು ಮೂರು ಪೆನಲ್‌ಗಳಲ್ಲಿ ಅತಿರಥ ಮಹಾರಥರು ಅದೃಷ್ಟ ಪರೀಕ್ಷೆಗೆ ಇಳದಿದ್ದಾರೆ.

ಭಾರತ ದೇಶದ ಬೆನ್ನೆಲಬು ರೈತ ಅಂತಹ ರೈತನ ಸ್ಥಿತಿ ಇಂದು ಚಿಂತಾಜನಕವಾಗಿದ್ದು ರೈತರ ಅಭಿವೃದ್ಧಿಯನ್ನು ಗುರಿಯಾಗಿ ಇಟ್ಟುಕೊಂಡು ಪ್ರಥಮ ಭಾರಿ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸಿರುವ ಯುವ ಉದ್ಯಮಿ ರೈತ ಪರ ಹೋರಾಟಗಾರ, ಯುವಕರ ಕಣ್ಮನಿ ಸಿದ್ದನಗೌಡ ಮರಿಗೌಡ ಪಾಟೀಲ ಅವರು ಕಾರ್ಖಾನೆಯ ಸಂಪೂರ್ಣ ಅಭಿವೃದ್ಧಿ ಕನಸು ಕಂಡಿದ್ದಾರೆ.

ಈ ಭಾಗದ ರೈತರು ತಮ್ಮ ಬೆವರು ಮತ್ತು ರಕ್ತವನ್ನು ಹರಸಿ ಬೆಳೆದ ಕಬ್ಬು ಅವರ ಬದುಕಿಗೆ ಸಿಹಿಯಾಗಬೇಕು ಅದರ ಜೊತೆ ಜೊತೆಗೆ ಕಾರ್ಖಾನೆ ಮತ್ತು ಕಾರ್ಮಿಕರ ಕಲ್ಯಾಣವಾಗಬೇಕು ಅನ್ನುವ ಸದಾಶಯ ಇಟ್ಟುಕೊಂಡು ಸಿದ್ದನಗೌಡ ಮರಿಗೌಡ ಪಾಟೀಲ ಅವರು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಬೆಂಬಲಿತ “ಶ್ರೀ ಸೋಮೇಶ್ವರ ರೈತರ ಅಭಿವೃದ್ಧಿ ಸಹಕಾರಿ ಪೆನೆಲ್”ನಲ್ಲಿ ಸ್ಪರ್ಧೆ ಮಾಡಿದ್ದು ಕ್ರಮ ಸಂಖೈ 13 ರ ʼಸೀಟಿʼ(ವಿಜಲ್) ಚಿಹ್ನೆಯೊಂದಿಗೆ ಅ ವರ್ಗದ ಸಾಮಾನ್ಯ ಮತಕ್ಷೇತ್ರದಿಂದ  ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಮದ್ಯಮ ವರ್ಗದ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಿದ್ದನಗೌಡ ಮರಿಗೌಡ ಪಾಟೀಲ ಅವರು ಕೃಷಿ ಪ್ರಕ್ರಿಯೆ, ಮಾರುಕಟ್ಟೆಯ ಪೈಪೋಟಿ, ರೈತರ ಏಳುಬೀಳುಗಳನ್ನು ಅರಿತಿದ್ದಿದ್ದು ಇವರು ಯುವ ಉದ್ಯಮಿಯಾಗಿ ಮತಕ್ಷೇತ್ರದಲ್ಲಿ ಬಹಳಷ್ಟು ಚಿರಪರಿಚಿತರಾಗಿ ಹೊರಹೊಮ್ಮಿದ್ದಾರೆ. ಇದರಾಚೆಗೆ ಭಾರತೀಯ ಜನತಾ ಪಕ್ಷದಲ್ಲಿ ಕ್ಷೇತ್ರದಾದ್ಯಂತ ಸಂಚರಸಿ ವಿವಿಧ ರಾಜಕೀಯ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಜಿಲ್ಲೆಯಾದ್ಯಂತ ತಮ್ಮ ವರ್ಚಸ್ಸನ್ನು ಹರಡಿದ್ದಾರೆ. ಪಕ್ಷಾತೀತವಾಗಿ ಎಲ್ಲ ಪಕ್ಷಗಳ ನಾಯಕರ, ಪದಾಧಿಕಾರಿಗಳ, ರೈತರ, ರೈತಪರ ಸಂಘಟನೆಯ ಮುಖಂಡರ ಜೊತೆಗೂ ನಿಕಟ ಸಂಪರ್ಕ ಹಾಗೂ ಯುವಕರ ಒಡನಾಡ ಹೊಂದಿದ್ದಾರೆ.

ರೈತ ಬಾಂಧವರ ಹಾಗೂ ಕಾರ್ಮಿಕರ ಕನಸುಗಳನ್ನು ನನಸು ಮಾಡುವುದೇ ನನ್ನ ಪರಮ ಗುರಿ ಎಂದು ಕ್ರಮ ಸಂಖ್ಯೆ 13 ರʼಸೀಟಿʼ(ವಿಜಲ್) ಚಿಹ್ನೆಯೊಂದಿಗೆ ಅ ವರ್ಗದ ಸಾಮಾನ್ಯ ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಸಿದ್ದನಗೌಡ ಮರಿಗೌಡ ಪಾಟೀಲ ಅವರು ನನ್ನನ್ನು ಗೆಲ್ಲಿಸಿ ರೈತ ಬಾಂದವರ ಸೇವೆ ಮಾಡಲು ಅನುವು ಮಾಡಿಕೊಡಬೇಕೆಂದು ರೈತ ಮತದಾರ ಪ್ರಭುಗಳಲ್ಲಿ ವಿನಂತಿಸಿದ್ದಾರೆ.

 

ನಾಳೆ ರವಿವಾರ ಸೆ.10 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆ ಮತದಾನ ನಡೆಯಲಿದ್ದು, ತಪ್ಪದೆ ಎಲ್ಲರೂ ತಮ್ಮ ಅಮೂಲ್ಯವಾದ ಮತವನ್ನು ಸೋಮೇಶ್ವರ ರೈತರ ಅಭಿವೃದ್ಧಿ ಸಹಕಾರಿ ಪೆನೆಲ್ ಗೆ ನೀಡಿ ಗೆಲ್ಲಿಸಬೇಕು ಎಂದು ವಿನಂತಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!