Tuesday, September 17, 2024

ನಾಳೆ ಶ್ರೀ ಲಿಂಗಾನಂದ ಮಹಾಸ್ವಾಮಿಗಳ ಸ್ಮರಣೋತ್ಸವ ಹಾಗೂ ಚನ್ನಬಸವೇಶ್ವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಸುದ್ದಿ ಸದ್ದು ನ್ಯೂಸ್‌

ವರದಿ: ಬಸವರಾಜ ಚಿನಗುಡಿ

ನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ನಿಷ್ಕಲ ಮಂಟಪದ ಸಭಾ ಭವನದಲ್ಲಿ ಪ್ರವಚನ ಪಿತಾಮಹ, ಇಳೆಯಲ್ಲಿ ಬೆಳಗಲು ಬಂದ ಬಸವಣ್ಣನವರ ದಿವ್ಯ ಕಿರಣ ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳ 28 ನೇ ಭವ್ಯ ಸ್ಮರಣೋತ್ಸವ ಹಾಗೂ ಜ್ಞಾನಯೋಗಿ, ಷಟಸ್ಥಲ ಚಕ್ರವರ್ತಿ ಶ್ರೀ ಚನ್ನಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಾಳೆ (ಸೆಪ್ಟಂಬರ್ 9) ರಂದು ಮುಂಜಾನೆ 10 ಗಂಟೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ಶ್ರೀ ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭು ಮಹಾಸ್ವಾಮಿಗಳು ಇತ್ತಿಚೆಗೆ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಸನ್ಯಾಸವನ್ನು ಸ್ವಿಕರಿಸಿದಾಗಿನಿಂದ ಹಿಡೆದು ತಮ್ಮ ಜೀವ ಇರುವವರೆಗೆ ಪ್ರವಛನಗಳ ಮೂಲಕ ಜ್ಞಾನ ದಾಸೋಹ ಮಾಡುತ್ತ ಪ್ರವಚನ ಪಿತಾಮಹ ಎಂದು ಬಿರುದು ಪಡೆದ ಪರಮಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮಿಗಳ 28 ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ʻʻಲಿಂಗಾನಂದಶ್ರೀʼʼ ಪ್ರಶಸ್ತಿ ಪ್ರಧಾನ, ಪುಸ್ತಕ ಬಿಡುಗಡೆ ಹಾಗೂ ಚನ್ನಬಸವೇಶ್ವರರ ಪುತ್ಥಳಿ ಅನಾವರಣ, ವಚನ ಸಂಗೀತ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.

ನಾಳೆ ಅನಾವರಣಗೊಳ್ಳುತ್ತಿರುವ ಸುಂದರವಾದ ಶ್ರೀ ಚನ್ನಬಸವೇಶ್ವರ ಪುತ್ಥಳಿ.

ಚಿಕ್ಕ ಮಂಗಳೂರು ಬಸವತತ್ವ ಪೀಠದ ಶ್ರೀ ಬಸವ ಸಿದ್ದ ಮರುಳ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದು  ಬಸವ ಕಲ್ಯಾಣದದ ಶ್ರೀ ಗೋಣಿರುದ್ರ ಮಹಾಸ್ವಾಮಿಗಳ ಹಾಗೂ ಹಾಸನ ಜಿಲ್ಲೆಯ ಬೇಲೂರಿನ ಮಹಾಂತ ಮಹಾಸ್ವಾಮಿಗಳ ಸಮ್ಮುಖದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿದ್ದು, ಮಾನವ ಬಂದುತ್ವ ವೇದಿಕೆಯ ರೂವಾರಿಗಳು, ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿಗಳು ಹಾಲಿ ವಿಧಾನಪರಿಷತ್ ಸದಸ್ಯರಾದ ಜಗದೀಶ ಶೆಟ್ಟರ ಅವರು ಕಿರುವಚನ ಸಂಪುಟ ಬಿಡುಗಡೆ ಮಾಡುವರು. ನಿವೃತ್ತ ಗ್ರಂಥಪಾಲಕ ಎಸ್. ಆರ್. ಗುಂಜಾಳ ಅವರು ಶ್ರೀ ಲಿಂಗಾನಂದ ಮಹಾಸ್ವಾಮಿಗಳ ʻʻವಚನಧರ್ಮ ಚಳವಳಿʼʼ ಪುಸ್ತಕ ಬಿಡುಗಡೆಗೊಳಿಸುವರು. ಖಾನಾಪೂರ ಶಾಸಕ ವಿಠ್ಠಲ ಹಲಗೇಕರ,  ಮಾಜಿ ಶಾಸಕರುಗಳಾದ ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಸುಭಾಸ ಕೌಜಲಗಿ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ರತ್ನಾಕರ ಕುಂದಾಪೂರ, ಚಂದ್ರಶೇಖರ ಸಾಧುನವರ, ನವದೆಹಲಿ ಕೃಷಿಕ ಸಮಾಜದ ಅಧ್ಯಕ್ಷರು ಖ್ಯಾತ ದಂತ ವೈದ್ಯರಾದ ಡಾ. ಜಗದೀಶ ಹಾರುಗೊಪ್ಪ, ತಹಶೀಲ್ದಾರ್ ಮಹೇಶ ಪತ್ರಿ, ಡಿವೈಎಸ್ಪಿ ಶಿವಾನಂದ ಕಟಗಿ, ಶಂಕರ ಹೊಳಿ, ಸಿ. ಎಸ್. ಮೊಕಾಶಿ, ಎಂ.ಜಿ. ಪಾಟೀಲ, ಶಿವನಸಿಂಗ್ ಮೊಕಾಶಿ, ಚಂದ್ರಗೌಡ ಪಾಟೀಲ, ಗುಂಡುಗೌಡ ಪಾಟೀಲ, ನಿಂಗನಗೌಡ ಹಳೆಮನಿ, ಶಂಕರ ಗುಡಸ, ಮಹಾಂತೇಶ ಮತ್ತಿಕೊಪ್ಪ, ವಿರೇಶ ಕಂಬಳಿ, ಸುಭಾಷ ಗೂಳಶೆಟ್ಟಿ,  ಸೇರಿದಂತೆ ಇನ್ನೂ ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದದ್ದಾರೆ.

ಈ ವೇಳೇ ನಿಷ್ಕಲ ಮಂಟಪದ ಆವರಣದ ಒಳಗಡೆ ಅಮೃತಶಿಲೆಯಿಂದ ತಯಾರಿಸಲಾದ ಜ್ಞಾನಯೋಗಿ, ಷಟಸ್ಥಲ ಚಕ್ರವರ್ತಿ ಶ್ರೀ ಚನ್ನಬಸವಣ್ಣವರ ಪುತ್ಥಳಿ ಅನಾವರಣ, ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಶರಣ ಸಾಧಕರಿಗೆ ಗೌರವ ಸತ್ಕಾರ ಮಾಡಲಾಗುವುದು.

ʻʻಲಿಂಗಾನಂದಶ್ರೀʼʼ ಪ್ರಶಸ್ತಿ ಪಡೆದ ಬೀದರದ ಶರಣ ಶ್ರೀ ಬಸವಕುಮಾರ ಪಾಟೀಲರು

ಸುಮಾರು ನಾಲ್ಕು ದಶಕಗಳ ಕಾಲ ಬಸವ ತತ್ವ ಪ್ರಸಾರ, ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅನೇಕ ಜಾಗೃತಿ ಕಾರ್ಯಕ್ರಮ, ಶಾಲಾ ಕಾಲೇಜುಗಳಲ್ಲಿ ʻʻಸ್ವಾಸ್ಥ್ಯ ಸಮಾಜ ಸಂಕಲ್ಪʼʼ ಮೇಳಗಳ ಮುಖಾಂತರ ವಿದ್ಯಾರ್ಥಿಗಳಲ್ಲಿ ಕೋಮು ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆ ಸೇರಿದಂತೆ ಇತರೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯಗಳನ್ನು ಮಾಡುವ ಮೂಲಕ ಧಾರ್ಮಿಕ ಮತ್ತು ಸಾಮಾಜಿಕ ಸೇವೆಯನ್ನು ಮಾಡುತ್ತಾ ಸರ್ಕಾರ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದ ಬೀದರದ ಶರಣ ಶ್ರೀ ಬಸವಕುಮಾರ ಪಾಟೀಲ ಅವರಿಗೆ ʻʻಲಿಂಗಾನಂದಶ್ರೀʼʼ ಪ್ರಶಸ್ತಿಯನ್ನು ವಿತರಿಸಲಾಗುದು ಎಂದು ತಿಳಿಸಿದ ಶ್ರೀಗಳು ಶ್ರೀ ಲಿಂಗಾನಂದ ಮಹಾಸ್ವಾಮಿಗಳ 28 ನೇ ಭವ್ಯ ಸ್ಮರಣೋತ್ಸವ, ಶ್ರೀ ಚನ್ನಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಬೈಲೂರು ಹಾಗೂ ಸುತ್ತಮುತ್ತಲಿ ಗ್ರಾಮಗಳಿಂದ ಬಸವಾಭಿಮಾನಿಗಳು ಆಗಮಿಸಬೇಕು ಎಂದು ಮನವಿ ಮಾಡಿದರು

ಜಿಲ್ಲೆ

ರಾಜ್ಯ

error: Content is protected !!