Sunday, September 8, 2024

ತಂಗಿಯ ಮೇಲೆ ನಿರಂತರ ಅತ್ಯಾಚಾರ! ದುಷ್ಟನಿಗೆ ರಕ್ಷಾ ಬಂಧನದಂದೇ ಶಿಕ್ಷೆ.

ಒಡಿಶಾ: ತಂಗಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದ ಅಣ್ಣನಿಗೆ ರಕ್ಷಾ ಬಂಧನದಂದೇ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸಹೋದರಿಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಹಾಗೆಯೇ ಅವಳು 14 ವರ್ಷದವಳಿದ್ದಾಗ ಆಕೆ ಗರ್ಭಧರಿಸುವಂತೆ ಮಾಡಿ, ಬಳಿಕ ಗರ್ಭಪಾತ ಮಾಡಿಸಿರುವ ಆರೋಪದ ಮೇಲೆ ಒಡಿಶಾ ಹೈಕೋರ್ಟ್​ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅಪರಾಧಿಯ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಸ್‌ಕೆ ಸಾಹೂ ಅಪರಾಧಿಗೆ 40,000 ರೂ. ದಂಡ ವಿಧಿಸಿದ್ದಾರೆ. ಅದನ್ನು ಕೊಡಲು ಸಾಧ್ಯವಾಗದಿದ್ದರೆ ಅಪರಾಧಿಗೆ ಇನ್ನೂ ಎರಡು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ. ರಕ್ಷಾ ಬಂಧನದ ದಿನವೇ ಇಂತಹ ಪ್ರಕರಣದಲ್ಲಿ ತೀರ್ಪು ನೀಡಬೇಕಾಯಿತು ಎಂದು ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದರು.

ಒಬ್ಬ ಸಹೋದರನ ಕರ್ತವ್ಯ ತನ್ನ ಸಹೋದರಿಯನ್ನು ರಕ್ಷಿಸುವುದು, ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಹೇಳಿದರು. ಮೇ 2018 ಮತ್ತು ಮೇ 2019 ರ ನಡುವೆ ತಮ್ಮ ಗ್ರಾಮದಲ್ಲಿ ತನ್ನ ತಂಗಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಕ್ಕಾಗಿ ಮಲ್ಕಾನ್‌ಗಿರಿ ವಿಶೇಷ ನ್ಯಾಯಾಲಯವು ಈ ವ್ಯಕ್ತಿಯನ್ನು ಈ ಹಿಂದೆ ಅಪರಾಧಿ ಎಂದು ಘೋಷಿಸಿತ್ತು.

ಇದನ್ನು ಇತರರಿಗೆ ಬಹಿರಂಗಪಡಿಸದಂತೆ ತನ್ನ ಸಹೋದರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಜನವರಿ 2020 ರಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಯಿತು.

 

 

 

………………………………………………………………………………………………………………..tv9

ಜಿಲ್ಲೆ

ರಾಜ್ಯ

error: Content is protected !!