Wednesday, September 18, 2024

ಕಿತ್ತೂರು ಆರ್.ಜಿ.ಎಸ್. ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪಾಲಕರ ಸಭೆ ಜರುಗಿತು

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಯಾವ ಮಕ್ಕಳು ದಡ್ಡರಲ್ಲ. ಪ್ರತಿಯೊಬ್ಬರಲ್ಲಿ ಅವರದೇ ಆದ ಸೂಕ್ತ ಪ್ರತಿಭೆ ಇರುತ್ತದೆ ಅದನು ಗುರುತಿಸುವ ಕೆಲಸವನ್ನು ಶಿಕ್ಷಕರು ಮತ್ತು ಪಾಲಕರು ಮಾಡಬೇಕು ಎಂದು ಧಾರವಾಡದ ಖ್ಯಾತ ಶಿಕ್ಷಣ ತಜ್ಞರು ಹಾಗೂ ಬೇಂದ್ರೆ ಅವರ ಮಾನಸ ಪುತ್ರರು ಎಂದು ಖ್ಯಾತರಾದ ಸುರೇಶ ಕುಲಕರ್ಣಿ ಅವರು ಪಟ್ಟಣದ ಆರ್.ಜಿ.ಎಸ್. ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪಾಲಕರ ಸಭೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಆರ್.ಜಿ.ಎಸ್. ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಸೇರಿದ ಪಾಲಕರು

ಮಕ್ಕಳ ಅಭಿವೃದ್ಧಿಗೆ ಶಿಕ್ಷಕರಷ್ಟೇ ಅಲ್ಲದೇ ಪಾಲಕರ ಪಾತ್ರವು ಬಹಳ ಮುಖ್ಯವಾಗಿರುತ್ತದೆ. ನಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ನಿರ್ಮಾಣ ಮಾಡಲು ಪಾಲಕರ ಪಾತ್ರ ಪ್ರಮುಖವಾಗಿರುತ್ತದೆ. ಇಂದಿನ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವಲ್ಲಿ ಮಗ್ನರಾಗಿದ್ದು ಅವರ ಕಡೆಗೆ ಗಮನ ಹರಿಸುತ್ತಿಲ್ಲಾ ಮಕಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಕಾರ್ಯವಾಗಬೇಕಾಗಿದೆ. ಇಂದು ವಿದ್ಯಾರ್ಥಿಗಳು ಮೊಬೈಲನಲ್ಲಿ ಸಂಪೂರ್ಣ ಕಾಲಾಹರಣ ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯರಾದ ಜಿ. ಎಂ. ಗಣಾಚಾರಿ ಮಾತನಾಡಿ ಪಿಯುಸಿ ಹಂತದಲ್ಲಿ ಆಂತರಿಕ ಅಂಕಗಳು ಬಂದಿದ್ದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನದ ಅಗತ್ಯವಿದೆ. ಪಾಲಕರು ತಮ್ಮ ತಮ್ಮ ಮಕ್ಕಳು ಪ್ರತಿನಿತ್ಯ ಕಾಲೇಜಿಗೆ ಹೋಗುತ್ತಾರ ಎಂಬುವುದರ ಕಡೆಗೆ ಗಮನ ಹರಿಸಬೇಕು. ಮನೆಯಲ್ಲಿ ವಿನಾಕಾರಣ ಕಾಲಹರಣ ಮಾಡದೆ ಅಭ್ಯಾಸ ಮಾಡುವುದರ ಕಡೆಗೆ ಗಮನ ಹರಿಸಲು ತಿಳಿಸಬೇಕು ಎಂದರು.

ಈ ವೇಳೆ ಕಿತ್ತೂರು ತಾಲೂಕು ಕಸಾಪ ಅಧ್ಯಕ್ಷ ಡಾ. ಶ್ರೀಕಾಂತ ದಳವಾಯಿ ಮಾತನಾಡಿ ಸರ್ಕಾರಿ ಕಾಲೇಜುಗಳಲ್ಲಿ ಪಾಲಕರ ಸಭೆ ಮಾಡುತ್ತಿರುವುದು ಆಶ್ಚರ್ಯ. ಅದರಲ್ಲೂ ತಾಯಿಂದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲಕರ ಸಭೆಯಲ್ಲಿ ಸುಮಾರು 800 ಕ್ಕೂ ಹೆಚ್ಚು ಪಾಲಕರು ಭಾಗವಹಿದ್ದು ವಿಶೇಷವಾಗಿತ್ತು. ಇವರುಗಳನ್ನು ನಾಲ್ಕು ಸಮಾವೇಶಗಳಲ್ಲಿ ಬೇರ್ಪಡಿಸಿ ಪ್ರತಿ ವಿದ್ಯಾರ್ಥಿಗಳ ಪ್ರಗತಿಯನ್ನು ಆಯಾ ಪಾಲಕರಿಗೆ ತಿಳಿಸಲಾಯಿತು.

ಉಪನ್ಯಾಸಕರಾದ ಎಸ್.ಬಿ. ಪೆಂಟೇದ, ಯು.ವಾಯ್. ಸನದಿ, ಎಂ.ಆರ್. ಉಳ್ಳಾಗಡ್ಡಿ, ಸುನೀತಾ ಪಾಟೀಲ, ಶಶಿಕಲಾ, ಸುವರ್ಣಾ, ಸುಮಾ, ಶ್ವೇತಾ ಮಾತನಾಡಿದರು.

ಈ ವೇಳೆ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಕಿತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಾಲಕರು ಸೇರಿದಂತೆ ಇತರರಿದ್ದರು.

ರಮೇಶ ಶಹಾಪುರ, ನಿರೂಪಿಸಿದರು. ವಾಸುದೇವ ಧಾರವಾಡ, ಸ್ವಾಗತಿಸಿ ವಂದಿಸಿದರು.

 

ಜಿಲ್ಲೆ

ರಾಜ್ಯ

error: Content is protected !!