Saturday, July 27, 2024

ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಡಿಕೆಶಿ ಪೈಪೋಟಿ ಕೊಡ್ತಿದ್ದಾರಾ.? ಜೋರಾದ ಬಣ ರಾಜಕೀಯ!

 ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆಗಸ್ಟ್ 30ಕ್ಕೆ 100 ದಿನ. ಈ ನೂರು ದಿನದ ಅವಧಿಯಲ್ಲೂ ಕಾಂಗ್ರೆಸ್ ಪಕ್ಷದಲ್ಲಿ 100 ಕಚ್ಚಾಟ, ಅಸಮಾಧಾನ ಕಾಣಿಸಿದೆ

ಆಪರೇಷನ್ ಹಸ್ತದ ಬೆಳವಣಿಗೆಯ ನಡುವೆ , ಕಾಂಗ್ರಸ್ ಮುಖಂಡರಲ್ಲೆ ಭಿನ್ನಾಭಿಪ್ರಾಯ ಇರೋದನ್ನ ರಾಜ್ಯದ ಜನ  ಗಮನಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆಗಸ್ಟ್ 30ಕ್ಕೆ 100 ದಿನ. ಇಂತಹ ಟೈಮಲ್ಲೇ ಅನುದಾನದ ವಿಚಾರದಲ್ಲಿ ಅಸಮಾಧಾನ, ಪತ್ರ ರಾಜಕೀಯ ನಡೆದಿದ್ದೂ ಆಯ್ತು. ಆದರೆ ಸಿಎಂ, ಡಿಸಿಎಂ ನಡುವೆನೇ ಪೈಪೋಟಿ ಏರ್ಪಟ್ಟರೇ. ಬಣ ರಾಜಕೀಯದ ಬಗ್ಗೆ ಕೇಳೋರು ಯಾರು?

.ಸರ್ಕಾರಕ್ಕೆ 100 ದಿನ ಆಗ್ತಾ ಬಂದರೂ ಸಿಎಂ ಸಿದ್ದು, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಹೊಂದಾಣಿಕೆಯೇ ಇಲ್ವಾ ಅನ್ನೋ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತಿದೆ. ಸಿಎಂ ಸ್ಥಾನದ ಆಕಾಂಕ್ಷಿ ಆಗಿದ್ದ ಡಿಕೆಶಿ ಸಿದ್ದರಾಮಯ್ಯಗೆ ಎಲ್ಲದ್ರಲ್ಲೂ ಪೈಪೋಟಿ ಕೊಡುತ್ತಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಮನ್ವಯತೆ ಇಲ್ಲ ಅನ್ನೋದಕ್ಕೆ ಕೆಲ ಉದಾಹರಣೆಗಳೂ ಸಿಕ್ಕಿದೆ. ಮೊನ್ನೆ ಚಂದ್ರಯಾನ-3 ಸಕ್ಸಸ್ ಆದ್ಮೇಲೆ ವಿಜ್ಞಾನಿಗಳಿಗೆ ಅಭಿನಂದಿಸಲು ಸಿಎಂ ಹಾಗೂ ಡಿಸಿಎಂ ಪ್ರತ್ಯೇಕವಾಗಿ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದರು.

ಅದಾದ್ಮೇಲೆ ಆಗಸ್ಟ್ 30ರಂದು ಜಾರಿ ಆಗಲಿರೋ ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲೂ ಇಬ್ಬರೂ ಪ್ರತ್ಯೇಕವಾಗಿ ಮೈಸೂರಲ್ಲಿ ಸಭೆ ನಡೆಸಿದ್ದಾರೆ. ಇನ್ನು ಬೆಳಗಾವಿ ರಾಜಕೀಯದಲ್ಲಿ ಡಿಕೆಶಿ ಹಸ್ತಕ್ಷೇಪ ಇದೆ ಅಂತ, ಹಾಗೇ ಬೇರೆ ಬೇರೆ ಇಲಾಖೆಯಲ್ಲಿ ಡಿಕೆ ಶಿವಕುಮಾರ್​ ಮಧ್ಯಪ್ರವೇಶಿಸುತ್ತಿದ್ದಾರೆ ಅಂತ ಸಿಎಂಗೂ ಈಗಾಗಲೇ ದೂರು ಹೋಗಿದೆಯಂತೆ.

ಡಿಕೆ ಶಿವಕುಮಾರ್​ ಈ ಪೈಪೋಟಿಗೆ ತಿರುಗೇಟು ನೀಡೋಕೆ ಸಿಎಂ ಕೂಡ ಸಜ್ಜಾಗಿದ್ದಾರೆ. ಮೈಸೂರಲ್ಲಿ ನಡೆಯುವ ಗೃಹಲಕ್ಷ್ಮಿ ಉದ್ಘಾಟನೆ ವೇಲೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬರುತ್ತಿದ್ದಾರೆ. ಸ್ವತಃ ಸಿಎಂ ಅವರೇ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕಾರ್ಯಕರ್ತರನ್ನು ಲೋಕಸಭೆ ಚುನಾವಣೆಗೆ ಅಣಿಗೊಳಿಸಿ, ರಾಹುಲ್ ಮುಂದೆ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

ಇನ್ನೊಂದ್ಕಡೆ ಚಾಮರಾಜನಗರದಲ್ಲಿ ಲಿಯಾನ್ ಬ್ಯಾಟರಿ ಘಟಕದ ಶಂಕುಸ್ಥಾಪನಾ ಸಮಾರಂಭದಲ್ಲೂ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ಬಣದ ವೈಮನಸ್ಯ ಕಾಣಿಸಿಕೊಂಡಿದೆ. ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್​ ಬರೋಕೆ ಮುಂಚೆಯೇ ಹೆಲಿಕಾಪ್ಟರ್‌‌‌ನಲ್ಲಿ ಬಂದ ಬೈರತಿ ಸುರೇಶ್, ಶುಭ ಕೋರಿ ಹಾಗೆ ವಾಪಸ್ ಹೋದರು.

 

 

 

 

 

 

 

(ಕೃಪೆ:ನ್ಯೊಸ್18)

ಜಿಲ್ಲೆ

ರಾಜ್ಯ

error: Content is protected !!