Tuesday, September 17, 2024

ಕಾಂಗ್ರೆಸ್ ಬಲಗೊಂಡಿದೆ ಮುನಿಸು ಭಿನ್ನಾಭಿಪ್ರಾಯ ಇಲ್ಲ! ಕೆಲವರ ಪಕ್ಷಾಂತರದಿಂದ ಯಾವ ಹಾನಿಯೂ ಇಲ್ಲ.- ಬಾಬಾಸಾಹೇಬ ಪಾಟೀಲ

ಕಿತ್ತೂರು ಕಾಂಗ್ರೆಸ್ ನಲ್ಲಿ ಹಿಂದಿನಿಂದಲೂ ಮುಂದುವರೆದುಕೊಂಡ ಭಿನ್ನಮತದ ಹೊಗೆ ಇನ್ನೇನು ಆರಿತು ಅನ್ನುವಷ್ಟರಲ್ಲೇ ಟಿಕೇಟ್ ಕೈ ತಪ್ಪಿದ ಮಾಜಿ ಸಚಿವ ಡಿ.ಬಿ.ಇನಾಮದಾರ ಅವರ ಬೆಂಬಲಿಗರ ನಡೆ ಯಾವ ಕಡೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ.

ಸ್ವಗ್ರಾಮ ನೇಗಿನಹಾಳದಲ್ಲಿ ಇನಾಮದಾರ ಬೆಂಬಲಿಗರು ಬಿಜೆಪಿ ಪಕ್ಷ ಸೇರ್ಪಡೆಯಾಗುವ ಮೂಲಕ ಕೈ ಅಭ್ಯರ್ಥಿಗೆ ಪೆಟ್ಟುಕೊಡಲು ಮುಂದಾಗಿದ್ದರು. ಇದಕ್ಕೆ ಪರ್ಯಾಯವಾಗಿ ಬಾಬಾಸಾಹೇಬ ಪಾಟೀಲ ಅವರ ನಾಯಕತ್ವ ಮೆಚ್ಚಿ ಸ್ಥಳೀಯ ಶಾಸಕರ ಆಡಳಿತ ವಿರೋಧಿ ನೀತಿಯಿಂದಾಗಿ ಬಿಜೆಪಿ ಬಿಟ್ಟು ಕೈ ಪಕ್ಷಕ್ಕೆ ಸೇರುವವರ ಸಂಖ್ಯೆ ಅಷ್ಟೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಮಾಡುತ್ತಿದ್ದೇನೆ ಮತದಾರರು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದರು.

ಮುಂದುವರೆದು ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಈ ಹಿಂದೆ ಟಿಕೇಟ್ ಹಂಚಿಕೆ ವಿಚಾರವಾಗಿ ಕೆಲವರಲ್ಲಿ ಅಸಮಾಧಾನ ಉಂಟಾಗಿದ್ದು ನಿಜ ನಂತರದಲ್ಲಿ ಎಲ್ಲ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರನ್ನು ಖುದ್ದಾಗಿ ಭೇಟಿ ಮಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಾರಿ ಕಿತ್ತೂರಿನಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೀವಿ.

ನನಗೆ ನನ್ನ ಪಕ್ಷದ ಕಾರ್ಯಕರ್ತರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ವೈಯಕ್ತಿಕವಾಗಿ ಇನಾಮದಾರ ಬೆಂಬಲಿಗರು ಅಂತ ಕರೆದುಕೊಂಡ ಬೆರಳೆಣಿಕೆಯಷ್ಟು ಜನ ಸ್ವಂತ ನಿರ್ಧಾರದ ಮೇಲೆ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಇದರಿಂದ ಅಂದುಕೊಳ್ಳುವಷ್ಟು ಪಕ್ಷಕ್ಕೆ ಹಾನಿ ಏನೂ ಆಗುವುದಿಲ್ಲ ಬದಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿ ಪಕ್ಷದಿಂದಲೇ ನನಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಎಲ್ಲವನ್ನೂ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ಳಬೇಕು ಅಂತೇನಿಲ್ಲ ಕೆಲವೊಂದು ಅಂತರಿಕ ನಿರ್ಧಾರಗಳ ಕಾರಣ ಪಕ್ಷಕ್ಕೆ ಬರುವವರ ಬಗ್ಗೆ ಎಲ್ಲೂ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ. ಪಕ್ಷದ ತತ್ವ ಮತ್ತು ಸಿದ್ದಾಂತಗಳು ಯಾವತ್ತಿಗೂ ಬಡವರ ಮಧ್ಯಮ ವರ್ಗದವರ ಪರವಾಗಿಯೇ ಇವೆ ಧರ್ಮ ಜಾತಿ ಮತ ಪಂಥಗಳನ್ನು ಮೀರಿದ ನಾಯಕತ್ವವನ್ನು ಜನತೆ ಈ ಬಾರಿ ಬಯಸಿದ್ದಾರೆ ಅಂತಹ ಆದರ್ಶ ನನ್ನಲ್ಲಿ ಇವೆ ಅಂತ ಮತದಾರರೇ ಮೆಚ್ಚಿ ನನಗೆ ಬೆಂಬಲ ಸೂಚಿಸುತ್ತಿರುವುದು ನನ್ನ ಪಾಲಿನ ಪುಣ್ಯವೇ ಸರಿ.

ಈ ಬಾರಿ ಶತಾಯ ಗತಾಯ ಕಾರ್ಯಕರ್ತರು ಅಭಿಮಾನಿಗಳ ಆಸೆಯಂತೆ ಅವರ ಆಶೀರ್ವಾದದ ಮೂಲಕ ಕಿತ್ತೂರಿನಲ್ಲಿ ಕಾಂಗ್ರೆಸ್ ಗೆಲ್ಲಲಿದೆ.

ಹಣ-ಹೆಂಡ ಆಮಿಷಗಳು ಬೆದರಿಕೆಗಳ ಮೂಲಕ ಗೆಲ್ಲುವ ಹಪಾಹಪಿಯಲ್ಲಿ ಇರುವ ಪ್ರತಿ ಪಕ್ಷದವರಿಗೆ ಒಂದು ಮಾತು ಹೇಳಲಿಕ್ಕೆ ಬಯಸ್ತೀನಿ ಗೆಲುವು ಸೋಲು ಸರ್ವೇ ಸಾಮಾನ್ಯ ಆದರೆ ಪ್ರೀತಿಯಿಂದ ಗೆದ್ದು ಸೋಲೋದಿದೆಯಲ್ಲ ಅದು ನಿಜಕ್ಕೂ ಅಪರೂಪದ ಗೆಲುವು ಅಂತಹ ಪ್ರೀತಿಯ ಕಾರ್ಯಕರ್ತರು ಅಭಿಮಾನಿಗಳ ಆಶೀರ್ವಾದ ಇದೆ ಈ ಬಾರಿ ಭ್ರಷ್ಟ ಬಿಜೆಪಿ ಯನ್ನು ಮನೆಗೆ ಕಳಿಸುವ ಎಲ್ಲ ಪ್ರಯತ್ನವನ್ನೂ ಮತದಾರರು ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆ

ರಾಜ್ಯ

error: Content is protected !!