Tuesday, May 28, 2024

ಅಪಾರ ಜನಸಾಗರದೊಂದಿಗೆ ಕಾಂಗ್ರೇಸ್ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ ನಾಮಪತ್ರ ಸಲ್ಲಿಸಿದರು.

ಚನ್ನಮ್ಮನ ಕಿತ್ತೂರು: ಐತಿಹಾಸಿಕ 15-ಕಿತ್ತೂರು ವಿಧಾನಸಭಾ ಮತ ಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ  ಬಾಬಾಸಾಹೇಬ್ ಪಾಟೀಲ್ ಅವರು ಸಾವಿರಾರು ಬೆಂಬಲಿಗರೊಂದಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು.  

ಸೋಮವಾರ ಪೇಟೆಯಲ್ಲಿ ಇರುವ ರಾಣಿ ಚನ್ನಮ್ಮನ ಪುತ್ತಳಿಗೆ ಹಾರವನ್ನು ಸಲ್ಲಿಸಿ ತೆರೆದ ಜೀಪಿನಲ್ಲಿ ಸಕಲ ವಾದ್ಯ ಮೇಳ ಹಾಗೂ ಜನಸಾಗರದೊಂದಿಗೆ  ಸೋಮವಾರ ಪೇಟೆಯಿಂದ ಅರಳಿಕಟ್ಟಿ ಮಾರ್ಗವಾಗಿ ಗುರುವಾರಪೇಟೆ, ವಳಸಂಗ ಕ್ರಾಸ್‌, ಚೌಕಿಮಠ ಕ್ರಾಸ್ ಮುಖಾಂತರ ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದಲ್ಲಿ ಇರುವ ಕಿತ್ತೂರು ರಾಣಿ ಚನ್ನಮ್ಮಾ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಆಡಳಿತ ಸೌಧದತ್ತ ಪಾದಯಾತ್ರೆ ಮುಖಾಂತರ ತೆರಳಿದರು.

ಕೈಯಲ್ಲಿ ಕಾಂಗ್ರೆಸ್ ಧ್ವಜ ಹಾಗೂ ಕಾಂಗ್ರೇಸ್‌ ಪಕ್ಷದ ಚಿಹ್ನೆ ಇರುವ ಟೋಪಿ ಧರಿಸಿದ ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬಾಬಾಸಾಹೇಬ ಪಾಟೀಲ ಹಾಗೂ ಕಾಂಗ್ರೇಸ್‌ ನಾಯಕರಿಗೆ ಜಯ ಘೋ಼ಗಳನ್ನು ಹಾಕುತ್ತಾ ನೆತಿ ಸುಡುವ ಬಿಸಿಲಿನಲ್ಲಿ ಹೆಜ್ಜೆಯನ್ನು ಹಾಕಿದರು.

ಬಾಬಾಸಾಹೇಬ್ ಪಾಟೀಲ್ ಅವರ ಪಾದಯಾತ್ರೆಯಲ್ಲಿ ಸೇರಿದ ಜನಸ್ತೋಮ

ಸುಮಾರು ದಿನಗಳಿಂದ ಮನೆಯೊಂದು ಮೂರು ಬಾಗಿಲದಂತೆ ಇದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಇಂದು ಎಲ್ಲರೂ ಒಟ್ಟಾಗಿ ಬಂದು ಒಗ್ಗಟ್ಟು ಪ್ರದರ್ಶಿಸಿದರು ಇದರಿಂದ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿತು

ಈ ವೇಳೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಶಂಕರ ಹೊಳಿ, ನಿಂಗಪ್ಪ ತಡಕೋಡ, ಗುಲಾಬ ಬಾಳೆಕುಂದರಗಿ, ರೋಹಿಣಿ ಪಾಟೀಲ, ಮಹಾಂತೇಶ ಕಮ್ಮಾರ, ಮುದಕಪ್ಪ ಮರಡಿ, ಮಲ್ಲಿಕಾರ್ಜುನ ತಳವಾರ, ಸೇರಿದಂತೆ ಇನ್ನೂ ಅನೇಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

″ಜನರ ಮನಸ್ಸಿನಲ್ಲಿ 40 % ಭ್ರಷ್ಟಾಚಾರ ನಡೆಸಿದ ಬಿಜೆಪಿ ಸರ್ಕಾರವನ್ನು ಕಿತ್ತು ಎಸೆಯಬೇಕು ಎಂದು ಜನರು ನಿರ್ಧಾರ ಮಾಡಿದ್ದಾರೆ ಈ ಸಲ ಕಾಂಗ್ರೆಸ್ ಕೆಲವು ನಿಶ್ಚಿತ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಅಪಾರ ಜನಸಾಗರ ಹರಿ ಬರುತ್ತಿದೆ″. ಮೊಹಮ್ಮದ್ ಹನೀಫ್ ಸುತಗಟ್ಟಿ ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಕಾಂಗ್ರೇಸ್‌ ಅಲ್ಪ ಸಂಖ್ಯಾತರ ರಾಜ್ಯ ಘಟಕ.

″ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಬೇಸರ ತರಸಿದ್ದು ಅವರ ಆಡಳಿತಕ್ಕೆ ಬೇಸತ್ತು ಬಿಜೆಪಿ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಹೆಮ್ಮೆಯ ವಿಷಯ ಎಲ್ಲರೂ ಒಗ್ಗಟ್ಟಾಗಿ ಈ ಸಲ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ″. ರಮೇಶ ಮೋಕಾಶಿ ಕಾಂಗ್ರೆಸ್ ಪಕ್ಷದ ಬೆಳಗಾವಿ ಜಿಲ್ಲಾ ಕಾರ್ಯದರ್ಶಿಗಳು.

 

 

ಜಿಲ್ಲೆ

ರಾಜ್ಯ

error: Content is protected !!