Sunday, September 8, 2024

ರಾಯಭಾಗ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯದ ಸುಳಿವು ನೀಡಿದ ರಾಜು ಕಿರಣಗಿ!

ಬೆಳಗಾವಿ : ರಾಯಭಾಗ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಆಗಿದ್ದ ರಾಜು ಕಿರಣಗಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಬಂಡಾಯದ ಬಾವುಟ ಹಾರಿಸುವ ಸುಳಿವು ನೀಡಿದ್ದಾರೆ.

ಎಸ್ಸಿ ಮೀಸಲು ಕ್ಷೇತ್ರವಾದ ರಾಯಬಾಗ ಮತಕ್ಷೇತ್ರ ಕಳೆದ 15 ವರ್ಷಗಳಿಂದ ‌ಬಿಜೆಪಿಯ ಭದ್ರಕೋಟೆಯಾಗಿದೆ. ಮೂರು ಭಾರಿ ದುರ್ಯೋಧನ ಐಹೊಳೆ ಆಯ್ಕೆ ಆಗಿದ್ದಾರೆ. ಆದರೆ ಆಡಳಿತ ವಿರೋಧಿ ಅಲೆ ಎದ್ದಿದರಿಂದ, ಹೊಸ ಮುಖಗಳಿಗೆ ಮಣೆ ಹಾಕುತ್ತಿರುವ ಬಿಜೆಪಿ ರಾಜು ಕಿರಣಗಿ ಹೆಸರು ಕೋರ್ ಕಮೀಟಿ ಸಭೆಯಲ್ಲಿ ಕೇಳಿ ಬಂದಿತ್ತು. ಕೊನೆಗೊ ಹಾಲಿ ಶಾಸಕ ದುರ್ಯೋಧನ ಐಹೊಳೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ನಾಲ್ಕನೇ ಬಾರಿ ಸ್ಪರ್ಧೆಗೆ ಸಿದ್ದರಾಗಿದ್ದಾರೆ. ಪ್ರಬಲ ಆಕಾಂಕ್ಷಿ ರಾಜು ಕಿರಣಗಿ ಅವರನ್ನು ಬಿಜೆಪಿ ಕೈ ಬಿಟ್ಟಿದ್ದರಿಂದ ಬಂಡಾಯ ಏಳುವ ಸಾಧ್ಯತೆ ಇದೆ.

ಪಟ್ಟಣದಲ್ಲಿ ಬುಧವಾರ ಮಧ್ಯಮದದವರೊಂದಿಗೆ
ಮಾತನಾಡಿದ ರಾಜು ಕಿರಣಗಿ ಅವರು, ನಾಳೆ ಅಥವಾ ನಾಡಿದ್ದು ಬೆಂಬಲಿಗರ ಸಭೆ ಕರೆದಿದ್ದೇನೆ. ನನ್ನ ಜನರಿಂದ
ಮಾರ್ಗದರ್ಶನ ಪಡೆದು ಮುಂದಿನ ಹೆಜ್ಜೆ ಇಡುತ್ತೇನೆ.ಈವರೆಗೂ ನನ್ನ ಕ್ಷೇತ್ರದ ಜನರೇ ನನ್ನ ಹೈಕಮಾಂಡ್.ಈ ಹೈಕಮಾಂಡ್ ಏನು ತೀರ್ಮಾನ ತಗೆದುಕೊಳ್ಳುತ್ತಾರೊ ಅದರ ಮೇಲೆ ನನ್ನ ಭವಿಷ್ಯ ನಿಂತಿದೆ. ಅಲ್ಲಿಯವರೆಗೂ ಯಾವುದೇ ತೀರ್ಮಾನ ಮಾಡಿಲ್ಲ ಎಂದರು.

‘ನನ್ನ ಈ ನಿರ್ಧಾರ ಹಲವರಿಗೆ ನೋವು ತರಬಹುದು. ಆದರೆ, ನಾನು ಅಛಲವಾಗಿದ್ದೇನೆ. ನಾನೊಬ್ಬ ಸ್ವಾಭಿಮಾನಿ ಜನಸೇವಕ. ಯಾರ ಬಳಿಯೂ ಭಿಕ್ಷಾಪಾತ್ರೆ ಹಿಡಿದುಕೊಂಡು ತಿರುಗುವವನಲ್ಲ’ ಎಂದರು.

ಕೊನೆ ಕ್ಷಣದವರಿಗೊ ನಿನ್ನೊಂದಿಗೆ ನಾವು ಇದ್ದೇವೆ ಎಂದು ಬಿಜೆಪಿ ಕೆಲ ನಾಯಕರು ಹೇಳಿದ್ದರು. ನಾನು ಅವರನ್ನು ನಂಬಿದೆ,ಅದು ಈಗ ಸುಳ್ಳಾಗಿದೆ. ಹಲವು ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದೇನೆ.ಆದರೆ ಪಕ್ಷ ನನ್ನ ಸೇವೆ ಗುರುತಿಸಿ ಟಿಕೆಟ್ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆ

ರಾಜ್ಯ

error: Content is protected !!