Saturday, June 15, 2024

ಚನ್ನಮ್ಮನ ಕಿತ್ತೂರು ‌ಜನತೆಯ ಸ್ವಾಭಿಮಾನದ ಹೆಸರಲ್ಲಿ,ಸಿಡಿದೆದ್ದ ಲಕ್ಷ್ಮೀ ಇನಾಮದಾರ:

ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ  ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಟಿಕೆಟ್ ಫೈಟ್ ಕೂಡ ಜೋರಾಗಿಯೇ ನಡೆಯುತ್ತಿದೆ. ಕಿತ್ತೂರು ಕ್ಷೇತ್ರದಲ್ಲಿ ಡಿ ಬಿ ಇನಾಮದಾರ್ ಸೊಸೆ ಲಕ್ಷ್ಮಿ ಇನಾಮದಾರ ಬದಲಾಗಿ ಕಾಂಗ್ರೆಸ್ ಪಕ್ಷವು ಬಾಬಾಸಾಹೇಬ್ ಪಾಟೀಲ್​ ಅವರಿಗೆ ಮಣೆ ಹಾಕಿದೆ. ಹೀಗಾಗಿ ಡಿ ಬಿ ಇನಾಮದಾರ್ ಬಿಟ್ಟು ಉಳಿದ ಕುಟುಂಬದ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.ಲಕ್ಷ್ಮೀ ಇನಾಮದಾರ್ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿದ್ದಾರೆ.

ಸ್ವಾಭಿಮಾನದ ಹೆಸರಲ್ಲಿ ಸಿಡಿದೆದ್ದ ಲಕ್ಷ್ಮೀ ಇನಾಮದಾರ: ಕಿತ್ತೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೀವೆ ಒಂದು ಪಕ್ಷ, ನೀವೆ ಒಂದು ಚಿನ್ಹೆ. ಈ‌ ಚುನಾವಣೆ ಪ್ರತಿಷ್ಠೆಗಾಗಿ ಅಲ್ಲ ಚೆನ್ನಮ್ಮನ ಕಿತ್ತೂರು ‌ಜನತೆಯ ಸ್ವಾಭಿಮಾನಕ್ಕೆ ಎಂದು ಸಂಪಗಾಂವ ಗ್ರಾಮದ ಶ್ರೀ ಬೈಲಬಸವೇಶ್ವರ ದೇವಸ್ಥಾನದಲ್ಲಿ ಬೆಂಬಲಿಗರೊಂದಿಗೆ ಪ್ರಮಾಣ ಮಾಡಿ ಅಧಿಕೃತವಾಗಿ ಚುನಾವಣಾ ಪ್ರಚಾರವನ್ನು ಲಕ್ಷ್ಮಿ ಇನಾಮದಾರ್ ಅವರು ಪ್ರಾರಂಭಿಸಿದರು.

ಈ ವೇಳೆ ಮಾತನಾಡಿದ ಲಕ್ಷ್ಮಿ ಇನಾಮದಾರ್ ಅವರು ಸುಮಾರು 40 ವರ್ಷ ರಾಜಕಾರಣದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸಮಾಜದಲ್ಲಿ ಉತ್ತಮ ಸ್ವಾಸ್ಥ್ಯವನ್ನು ಕಾಪಾಡಲು ನಮ್ಮ ಮಾವನವರಾದ ಡಿ ಬಿ ಇನಾಮದಾರ ಶ್ರಮಿಸಿರುವರು.ನಾನೂ ಕೂಡ ಅವರ ಹಾದಿಯಲ್ಲೇ ಪ್ರಾಮಾಣಿಕವಾಗಿ ನಡೆದು ನಾಡಿನ ಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.

ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಮಾಜಿ ಸಚಿವ ಡಿ.ಬಿ ಇನಾಮದಾರ್ ಅವರು ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆ ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಬೆಂಬಲಿಗರು ಇನಾಮದಾರ್ ಸೊಸೆ ‌ಲಕ್ಷ್ಮಿ ಇನಾಮದಾರ್‌ಗೆ ಟಿಕೆಟ್ ನೀಡಲು ಆಗ್ರಹಿಸಿದ್ದರು. ಆದರೆ ತೀವ್ರ ಪೈಪೋಟಿ ನಡುವೆ ಕಾಂಗ್ರೆಸ್ ಹೈಕಮಾಂಡ್ ಲಕ್ಷ್ಮಿ ಇನಾಮದಾರ್ ಬದಲಿಗೆ ಬಾಬಾಸಾಹೇಬ್ ಪಾಟೀಲ್​ಗೆ ಮಣೆ ಹಾಕಿದರ  ಹಿನ್ನಲೇ, ಕಿತ್ತೂರು ಕ್ಷೇತ್ರದ ಡಿ ಬಿ ಇನಾಮದಾರ ಅಭಿಮಾನಿಗಳು ಹಾಗೂ ಕಾರ್ಯಕರ್ತರು,ಅಪಾರ ಬೆಂಬಲಿಗರು ಸಾಥ ನೀಡಿದ್ದು, ಈ‌ ಚುನಾವಣೆ ಪ್ರತಿಷ್ಠೆಗಾಗಿ ಅಲ್ಲ ಚೆನ್ನಮ್ಮನ ಕಿತ್ತೂರು ‌ಜನತೆಯ ಸ್ವಾಭಿಮಾನಕ್ಕಾಗಿ ಎಂದು ಲಕ್ಷ್ಮಿ ಅವರು ಸ್ವತಂತ್ರ ಅಭ್ಯರ್ಥಿ ಆಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಲಕ್ಷ್ಮೀ ಇನಾಮದಾರ್, 40 ವರ್ಷಗಳಿಂದ ಡಿ.ಬಿ.ಇನಾಮದಾರ್ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ಅವರಿಗೆ ಹುಷಾರಿಲ್ಲ, ಇಂತಹ ಕಷ್ಟದ ಸಮಯದಲ್ಲಿ ಪಕ್ಷ ಕೈಬಿಟ್ಟಿದೆ. ಈಗ ಯಾರು ನಮಗೆ ಕೈಹಿಡಿತಾರೆ ಅಂಥವರು ದೇವರಾಗುತ್ತಾರೆ. ಡಿ.ಬಿ.ಇನಾಮದಾರ್ ಬಿಟ್ಟು ಕುಟುಂಬಸ್ಥರು ರಾಜೀನಾಮೆ ನೀಡುತ್ತಿವೆ. ಸದ್ಯದಲ್ಲೇ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಟಿಕೆಟ್ ಕೈ ತಪ್ಪಿದ್ದು ಬಹಳ ಕೆಟ್ಟ ಅನುಭವ ನೀಡಿದೆ. ಡಿ.ಬಿ ಇನಾಮದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಲಾಯಲಿಸ್ಟ್ ಆಗಿದ್ದರು ಎಂದಿದ್ದರು.

 

ಜಿಲ್ಲೆ

ರಾಜ್ಯ

error: Content is protected !!