Tuesday, May 28, 2024

ರಾಯಬಾಗ ಕ್ಷೇತ್ರಕ್ಕೆ ಬಿಜೆಪಿಯಿಂದ “ರಾಜು ಕಿರಣಗಿ”ಗೆ ಟಿಕೆಟ್‌ ಬಹುತೇಕ ಖಚಿತ!

ಬೆಂಗಳೂರು: ಎಸ್ಸಿ ಮೀಸಲು ಕ್ಷೇತ್ರವಾದ ರಾಯಬಾಗ ಮತಕ್ಷೇತ್ರ ಕಳೆದ 15 ವರ್ಷಗಳಿಂದ ‌ಬಿಜೆಪಿಯ ಭದ್ರಕೋಟೆಯಾಗಿದೆ.  ಮೂರು ಭಾರಿ ದುರ್ಯೋಧನ ಐಹೊಳೆ ಆಯ್ಕೆಯಾಗುವ ಮೂಲಕ ನಾಲ್ಕನೇ ಬಾರಿ ಸ್ಪರ್ಧೆಗೆ ಸಿದ್ದರಾಗಿದ್ದಾರೆ. ಆಡಳಿತ ವಿರೋಧಿ ಅಲೆ ಹೆಚ್ಚಾಗಿರುವುದರಿಂದ ‌ಹೊಸ ಮುಖಗಳಿಗೆ ಮಣಿ ಹಾಕುತ್ತಿರುವ ಬಿಜೆಪಿಯಿಂದ ರಾಜು ಕಿರಣಗಿ ಹೆಸರು ಪ್ರಸ್ತಾಪವಾಗಿದ್ದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ಹೌದು ಈ ಬಾರಿ ರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಕೆಲವು ಹಾಲಿ ಶಾಸಕರು ಮತ್ತು ಸಚಿವರುಗಳಿಗೆ ಟಿಕೆಟ್ ಸಿಗುವುದು ಕಷ್ಟಕರ ಯಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿರುವ ಬೆನ್ನಲ್ಲಿಯೇ ಇದರ ಲಾಭವನ್ನು ಪಡೆದುಕೊಳ್ಳಲು ರಾಯಭಾಗ ಕ್ಷೇತ್ರದಲ್ಲಿ ಕೆಲವು ನಾಯಕರು ಬಿಜೆಪಿಯ ಟಿಕೇಟ್‌ ಪಡೆದುಕೊಳ್ಳಲು ಮುಂದಾಗಿರುವ ವಿಷಯ ಗುಟ್ಟಾಗಿ ಉಳಿದಿಲ್ಲ. ಕ್ಷೇತ್ರದಾದ್ಯಂತ ಹಲವಾರು ನಾಯಕರುಗಳು ಹೆಸರುಗಳು ಕೇಳಿ ಬರುತ್ತಿದ್ದು ಪಕ್ಷ ಸಂಘಟನೆ ಹಾಗೂ ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕ ಹೊಂದಿರುವ ರಾಜು ಕಿರಣಗಿ ಅವರ ಹೆಸರು ಮುನ್ಸೂಚನೆಯಲ್ಲಿದೆ.

ಒಟ್ಟಿನಲ್ಲಿ ಈ ಸಲ ರಾಯಭಾಗ ಮತಕ್ಷೇತ್ರದಲ್ಲಿ ಹೊಸಬರ ಗಾಳಿ ಬೀಸುವ ಸುದ್ದಿ ಹೊಸತನದಿಂದ ಕೂಡಿದ್ದು ವಿಶೇಷವಾಗಿದೆ.ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ ಸ್ಥಳೀಯ ಮಟ್ಟದಲ್ಲಿ ಉತ್ತಮ ವಾತಾವರಣ ಹೊಂದಿರುವ ವ್ಯಕ್ತಿ ಹಾಗೂ ಗೆಲ್ಲುವ ಅಭ್ಯರ್ಥಿ ಆಯ್ಕೆಯತ್ತ ಹೆಚ್ಚು ಗಮನ ಹರಿಸಿದೆ ಎಂದು ಹೇಳಲಾಗುತ್ತದೆ.

ರಾಜ್ಯ ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ರಾಯಬಾಗ ಮತಕ್ಷೇತ್ರದಿಂದ ದುರ್ಯೋಧನ ಐಹೊಳೆ ಹಾಗೂ ಸಿದ್ದಾರ್ಥ ವಾಡೆನ್ನವರ ಹೆಸರು ಬಲವಾಗಿ ಕೇಳಿ ಬಂದಿತ್ತು, ಆದರೆ ಈಗ ಪ್ರಬಲ ಆಕಾಂಕ್ಷಿ ರಾಜು ಕಿರಣಗಿ ಅವರ ಹೆಸರನ್ನು ವರಿಷ್ಠರು ಹೈಕಮಾಂಡ್ ಗೆ ಕಳುಹಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಇವರು ಅವರದೇ ಆದಂತಹ ಬೆಂಬಲಿಗರ ತಂಡವನ್ನು ಹೊಂದಿದ್ದು ಭಾಜಪಾದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಜನರ ಸೇವೆ ಸಲ್ಲಿಸುತ್ತಿದ್ದು ಇವರ ಸೇವೆಯನ್ನು ಮೆಚ್ಚಿ ಈ ಬಾರಿ ರಾಜು ಕಿರಣಗಿ ಅವರಿಗೆ ಟಿಕೆಟ್‌ ನೀಡಿದರೆ ಬಿಜೆಪಿಯ ಗೆಲವು ಖಚಿತವೆಂದು ಕಾರ್ಯಕರ್ತರು ಹೇಳುತ್ತಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!