Friday, April 19, 2024

ಬೆಳಗಾವಿ ಗ್ರಾಮೀಣ ಮತ್ತು ಅಥಣಿ ಕ್ಷೇತ್ರದಲ್ಲಿ ಜಾರಕಿಹೊಳಿ ಟಿಕೆಟ್‌ ಫೈಟ್.

ಬೆಳಗಾವಿ: ಇಡೀ ರಾಜ್ಯದ ರಾಜಕೀಯ ಒಂದು ಕಡೆಯಾದ್ರೆ, ಕುಂದಾನಗರಿ ರಾಜಕಾರಣವನ್ನೇ ಕೊಂಚ ಭಿನ್ನ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಆಗಿದ್ದು ಬೆಳಗಾವಿ ರಾಜಕಾರಣ ಅಂತ ಇಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡುತ್ತಾರೆ. ಸದ್ಯ ಬೆಳಗಾವಿ ಗ್ರಾಮೀಣ ಮತ್ತು ಅಥಣಿ ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ತೀವ್ರ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಬಂದಿದೆ. ಇತ್ತ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಮೇಶ್ ಜಾರಕಿಹೊಳಿ ನಾಲ್ಕು ಕ್ಷೇತ್ರ ತನಗೇ ಬಿಟ್ಟು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಸುದ್ದಿ ಕೇಳಿ ಬರುತ್ತಿದೆ.

ಕಾಗವಾಡ, ಗೋಕಾಕ್, ಅಥಣಿ ಬಿಟ್ಟು ಕೊಡುವದರಲ್ಲಿ ತಪ್ಪಿಲ್ಲ.ಯಾಕೆಂದರೆ ಕಾಂಗ್ರೆಸ್ ಜೆಡಿಎಸ್ ನಿಂದ ಬಂದ ಎಲ್ಲಾ ಶಾಸಕರಿಗೆ ಟಿಕೆಟ್ ಕೊಡಬೇಕಾದರೆ ಅಥಣಿ ಇದೊಂದು ಬಾರಿ ಮಹೇಶ್ ಕುಮಟಳ್ಳಿಗೆ ಮಾತ್ರ ಯಾಕಿಲ್ಲ? ಅನ್ನೋದು ಸಹಜವಾಗಿ ಯಾರು ಬೇಕಾದರೂ ಕೇಳೋ ಪ್ರಶ್ನೆಯೇ ಹೌದು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ನಾ ಹೇಳಿದವರಿಗೇ ಕೊಡಿ ಎನ್ನೋದು ಸ್ವಲ್ಪ ಅತಿಯಾಯಿತು. ಇವರ ಜೊತೆ ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಬೆಳಗಾವಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಜಯ್ ಪಾಟೀಲ್, ರಮೇಶ ಜಾರಕಿಹೊಳಿ ಜೊತೆ ಕೈ ಜೋಡಿಸಿರುವದು ಅಚ್ಚರಿಗೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಸಂಜಯ್ ಪಾಟೀಲ್ ಗೆ ಗ್ರಾಮೀಣ ಟಿಕೆಟ್ ಈ ಬಾರಿ ಮರೀಚಿಕೆ ಎನ್ನಬಹುದು.

ಶತ್ರುವಿನ ಶತ್ರು ಮಿತ್ರ ಅನ್ನುವ ಫಾರ್ಮುಲಾದಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ್ ಜಾಧವ್ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ. ಆದರೆ ಕಳೆದ ಆರು ತಿಂಗಳು ಹಿಂದೆ ಪಕ್ಷಕ್ಕೆ ಸೇರಪಡೆಯಾದ ರಮೇಶ್ ಜಾರಕಿಹೊಳಿ ಆಪ್ತರಾದ ರಮೇಶ್ ಮುನ್ನೊಳಕರ್ ಮತ್ತು ನಾಗೇಶ್ ಮುನ್ನೊಳಕರ್ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಇವರಿಗೆ ಟಿಕೆಟ್ ಕೊಡಿ ಎಂದರೆ ಯಾರೂ ಒಪ್ಪುವದಿಲ್ಲ ಎಂದು ಸಂಜಯ್ ಪಾಟೀಲ್ ಹಾಗೂ ರಮೇಶ ಜಾರಕಿಹೊಳಿ ಸೇರಿ ಮರಾಠ ಮತದಾರರಲ್ಲಿ ಗೊಂದಲ ಸೃಷ್ಠಿಸಲು ಮುನ್ನೊಳ್ಕರ್ ಹೆಸರು ಮುಂದೆ ಮಾಡಿ ಪಕ್ಷದಲ್ಲಿ ವಿರೋಧ ವ್ಯಕ್ತವಾಗುವಂತೆ ನೋಡಿಕೊಂಡು ಮರಾಠ ಮತಗಳು ವಿಭಜನೆ ಆಗುತ್ತವೆ ಎನ್ನುವ ಚರ್ಚೆ ಹುಟ್ಟು ಹಾಕಿ ಪಕ್ಷದ ವರಿಷ್ಠರ ತಲೆಯಲ್ಲಿ ಹುಳ ಬಿಟ್ಟು  ಮುನ್ನೊಳ್ಕರ್ ಬೇಡ. ಜಾಧವ್ ಬೇಡ ಕೊನೆಗೆ ಸಂಜಯ್ ಪಾಟೀಲ್ ಗೆ ಕೊಡಿ ಎನ್ನುವಂತೆ ಮಾಡುವದು ಜಾರಕಿಹೊಳಿಯವರ ಪ್ಲಾನ್ ಇರಬಹುದು.

ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸೋಲಿಸಲೇಬೇಕು ಅಂತ ಪಣತೊಟ್ಟ ಜಾರಕಿಹೊಳಿ ಅವರು ಮರಾಠ ಮತಗಳ ವಿಭಜನೆ ಆಗದಂತೆ ಹಾಗೂ ಲಿಂಗಾಯತ ಪಂಚಮಸಾಲಿ ಸಮುದಾಯದ ಮತ ಬಿಜೆಪಿಗೆ ಬರುವಂತೆ ನೋಡಿಕೊಳ್ಳ ಬೇಕಾದರೆ ಹಿಂದುತ್ವ ರಾಷ್ಟ್ರವಾದಿ ಧನಂಜಯ್ ಜಾಧವ್ ಅವರಿಗೆ ಟಿಕೆಟ ನೀಡುವುದು ಸೂಕ್ತ ಎಂದು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಡಿಕೆಶಿ ಮತ್ತು ಸತೀಶ್ ಜಾರಕಿಹೊಳಿ 50:50 ಫಾರ್ಮುಲಾ ಅಡಿಯಲ್ಲಿ ರಮೇಶ್ ತಮ್ಮ ಸತೀಶ್ ಗೆ ವೇದಿಕೆ ಸಿದ್ಧ ಮಾಡುತ್ತಿರಬಹುದು. ಸ್ವಂತ ಜಿಲ್ಲೆಯಲ್ಲಿ ಕಾಂಗ್ರೆಸ್ ಸ್ಥಾನ ಹೆಚ್ಚು ಮಾಡಿಕೊಳ್ಳದಿದ್ದರೆ ಕಷ್ಟ ಎಂದು. ಸತೀಶ್ ರಮೇಶ್ ಮೂಲಕ ತಮ್ಮ ಮಾತು ಕೇಳುವವರ ಹೆಸರನ್ನು ಬಿಜೆಪಿ ಟಿಕೆಟ್ ಗಾಗಿ ಮುಂದೆ ತರುತ್ತಿರಬಹುದು. ತ್ರಿಶಂಕು ಸ್ಥಿತಿ ಏರ್ಪಟ್ಟರೆ.ರಾಜೀನಾಮೆ ಕೊಡಲು ಮುಂದಾಗುವವರಿಗಾಗಿ ಲಾಬಿ ಮಾಡುತ್ತಿರಬಹುದು. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಜಾರಕಿಹೋಳಿಗಳು ಪ್ರಯತ್ನ ಮಾಡುವದಿಲ್ಲ.ಪಂಚಮಸಾಲಿಗಳ  ಕರೆಂಟ್ ಜಾರಕಿಹೊಳಿಗಳಿಗೆ ಹೊಡೆಯುತ್ತದೆ ಎಂದು ಗೊತ್ತು. ಹೆಬ್ಬಾಳ್ಕರ್ ಅವರ ಮೇಲೆ ಟೀಕಾಪ್ರಹಾರ ಚುನಾವಣೆಯಲ್ಲಿ ಆಲ್ಮೋಸ್ಟ್ ನಿಲ್ಲುತ್ತದೆ.

ಬಾಲಚಂದ್ರ ಜಾರಕಿಹೊಳಿ ಸ್ವಲ್ಪ ಲಿಂಗಾಯತರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಎಲ್ಲಾ ಪ್ರಯತ್ನ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಜಾರಕಿಹೊಳಿ ಬ್ರದರ್ಸ್ ಎರಡೂ ಪಕ್ಷದಲ್ಲಿ ಜಿಲ್ಲೆಯಿಡಿ ತಮ್ಮ ಪ್ರಭಾವ ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ.ಈಗ ಬಹುಶಃ ಅದು ಬಿಜೆಪಿಯಲ್ಲಿ ನಡೆಯುವ ಚಾನ್ಸ್ ಇಲ್ಲ.

ಪ್ಲಾನ್ ಟೂ ಪ್ರಕಾರ ಮಹೇಶ್ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ.ಅವರನ್ನೇ ಕಾಂಗ್ರೆಸ್ ಅಭ್ಯರ್ಥಿ ಮಾಡಿ ಗೆಲ್ಲಿಸುವದು. ಗೋಕಾಕ್ ನಲ್ಲಿ ತಾವು ನಿಲ್ಲದೇ ತಮ್ಮ ಭಾವಮೈದ ಅಂಬಿರಾಯ ಇಲ್ಲ ಮಗನನ್ನು ಬಿಜೆಪಿಯಿಂದ ಅಲ್ಲದಿದ್ದರೂ ಕಾಂಗ್ರೆಸ್ ನಿಂದ ನಿಲ್ಲಿಸುವದು. ತಾವು ಸ್ಪರ್ಧೆಯಿಂದ ದೂರ ಉಳಿಯುವದು.ಡಿಕೆಶಿ ಸಿಎಂ ಆಗದ ಪರಸ್ಥಿತಿ ನಿರ್ಮಾಣ ಆದರೆ. ನಮ್ಮ ತಮ್ಮನ್ನ ಮೊದಲು ಸಿಎಂ ಮಾಡಿ ನಾನು ನಂಬರ್ ತರುತ್ತೇನೆ ಅನ್ನೋದು ಅಥವಾ ಬಿಜೆಪಿ ನಂಬರ್ ಜಾಸ್ತಿ ಇದ್ದರೆ ಇಳಿಸುತ್ತೇನೆ ಅನ್ನೋವ ಪ್ಲಾನ್ ಇರಬಹುದು.

 

ಜಿಲ್ಲೆ

ರಾಜ್ಯ

error: Content is protected !!