Saturday, July 27, 2024

ಸ್ಮಶಾನದಲ್ಲಿ ಪ್ರಚಾರದ ವಾಹನ ಪೂಜೆ;ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಸುತ್ತೇನೆ:ಸತೀಶ್ ಜಾರಕಿಹೊಳಿ

ಬೆಳಗಾವಿ: ಮೂಡನಂಭಿಕೆಗಳ ವಿರುದ್ಧ ಹಲವಾರು ಕಾರ್ಯಕ್ರಮ ಹಾಗೂ ಹೊಸ ಕಾರ್ಯಗಳಿಗೆ ಸಶಾನದಲ್ಲಿ ಚಾಲನೆ ಸೇರಿದಂತೆ ಕೆಲವು ಆಚರಣೆಗಳನ್ನು ಮಾಡುತ್ತಾ ಬಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಕೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಚುನಾವಣೆ ಪ್ರಚಾರಕ್ಕೆ ತಂದಿರುವ ಹೊಸ ವಾಹನವನ್ನು ಸ್ಮಶಾನದಲ್ಲಿ ಪೂಜೆ ಮಾಡಲಾಗುವುದು. ಬಳಿಕ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗುವುದು ಎಂದೂ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 11ರಿಂದ 20ರವರೆಗೆ ನಾಮಪತ್ರ ಸಲ್ಲಿಕೆ ದಿನವಾಗಿದೆ. ದಿನವೂ ರಾಹುಕಾಲ ಇರುತ್ತದೆ. ಆ ಸಮಯದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಇನ್ನು ಚುನಾವಣೆ ಪ್ರಚಾರಕ್ಕೆ ಎಂದೇ ಹೊಸ ವಾಹನವನ್ನು ತಂದಿದ್ದೇವೆ. ಸಶಾನದಲ್ಲಿ ಪೂಜೆ ಮಾಡಿ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡುತ್ತೇವೆ. ಎರಡೂರು ದಿನಗಳಲ್ಲಿ ಸಶಾನದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.

ನಾವು ಮಾಡೋದು ಸಂಪ್ರದಾಯದ ವಿರೋಧಿತನ ಆಗುವುದಿಲ್ಲ. ನಮ್ಮ ವಿಚಾರ ಅದು. ಈ ಕೆಲಸವನ್ನು ನಾವು ಇವತ್ತು ಮಾಡುತ್ತಿಲ್ಲ. ಮೂವತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ನಾವು ಹೋಗುತ್ತಿರುವ ದಾರಿಯನ್ನು ತೋರಿಸಿದ್ದು ಬುದ್ಧ,ಬಸವಣ್ಣ, ಅಂಬೇಡ್ಕರ್‌. ನಮ್ಮ ಆಯ್ಕೆಯನ್ನು ನಮಗೆ ಬಿಡಿ, ಹೀಗೆ ಮಾಡಿ ಅಂದರೆ ಆಗೋದಿಲ್ಲ ಎಂದು ಹೇಳಿದರು.

ಅತಿ ಹೆಚ್ಚು ಅಂತರದಿಂದ ಗೆಲ್ಲಿಸಬೇಕೆಂಬುವುದೆ ನಮ್ಮ ಸ್ಲೋಗನ್. ಆದ್ದರಿಂದ ಈ ಬಾರಿ ಯಮಕನಮರಡಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುತ್ತೇನೆ.ಇಲ್ಲವಾದರೆ ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಾರೆ ಎಂದರು.

 

 

 

 

ಜಿಲ್ಲೆ

ರಾಜ್ಯ

error: Content is protected !!