Wednesday, July 24, 2024

ನರೇಗಾ, ಕೂಲಿಕಾರರ ಆಶಾಕಿರಣ ಸಹಾಯಕ ನಿರ್ದೇಶಕ ಹಲಕರ್ಣಿಮಠ ಅಭಿಪ್ರಾಯ ಕಿತ್ತೂರು ತಾಪಂ ನಲ್ಲಿ ‘ಮೇಟ್-ಮೇಳ’

 

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು : ಹಾತ್ಮಾ ಗಾಂದಿ ನರೇಗಾ ಯೋಜನೆಯು ಬಡವರ ಪಾಲಿನ ಆಶಾಕಿರಣವಾಗಿದೆ ಬಡವರು ಕೂಲಿ ಕೆಲಸ ಮಾಡಿ ತಮ್ಮ ಕುಟುಂಬವನ್ನು ಸದೃಡಪಡಿಸಕೊಳ್ಳಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳ ಸೃಜನೆಯಾದಷ್ಟು ಸ್ಥಳೀಯ ಸಮುದಾಯಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಚನ್ನಮ್ಮ ಕಿತ್ತೂರು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಲಿಂಗರಾಜ ಹಲಕರ್ಣಿಮಠ ಹೇಳಿದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಐಇಸಿ ಚಟುವಟಿಕೆಯಡಿ ಸೋಮವಾರ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ‘ಮೇಟ್-ಮೇಳ (ಕಾಯಕ ಬಂಧು ಕಾರ್ಯಾಗಾರ) ಉದ್ಘಾಟಿಸಿ ಮಾತನಾಡಿದ ಅವರು,  ಪ್ರತಿ ಮಾನವ ದಿನಕ್ಕೆ ಪುರುಷ ಕಾಯಕ ಬಂದುವಿಗೆ 4 ರೂ. ಮಹಿಳಾ ಕಾಯಕ ಬಂದುವಿಗೆ 5 ರೂ. ಹೇಚ್ಚುವರಿಯಾಗಿ ಸಂಭಾವನೆ ಪಾವತಿಸಲಾಗುತ್ತಿದೆ. ಎಲ್ಲಾ ಕಾಯಕ ಬಂದುಗಳು ಅರೆ ಕುಶಲ ಕಾರ್ಮಿಕರೆಂದು ನರೇಗಾ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಕಾಯಕ ಬಂಧುಗಳ ಕರ್ತವ್ಯ ಹಾಗೂ ಹಕ್ಕುಗಳ ಪ್ರತಿಯೊಬ್ಬರು ಪಾಲನೆ ಮಾಡಬೇಕು. ಯೋಜನೆಯಡಿ ಕೂಲಿಕಾರರಿಗೆ ಇರುವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ಒಂದು ಕೂಲಿಕಾರರ ಗುಂಪಿನಲ್ಲಿ  ಕಾಯಕ ಬಂಧು ಎಂದು ಗುರುತಿಸಲಾಗುತ್ತಿದೆ. ಕಾಯಕ ಬಂಧುಗಳು ಕೆಲಸದ ಬೇಡಿಕೆಯನ್ನು ನಮೂನೆ-6 ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು  15 ದಿನಗಳೊಳಗೆ ಕೆಲಸ ದೊರಕುವಂತೆ ಮಾಡಬೇಕು. ಕೆಲಸ ನಡೆದ ಸ್ಥಳದಲ್ಲಿ ಮಾರ್ಕಟಿಕಿಂಗ್ ಮಾಡುವುದು, ನರೇಗಾ ಕೂಲಿಕಾರರಿಗೆ ಯೋಜನೆಯ ಉಪಯೋಗಗಳ ಕುರಿತು ಮಾಹಿತಿ ನೀಡುವುದು. ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ನೆರಳು, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಮುಂತಾದ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಸಹಾಯಕ ನಿರ್ದೇಶಕರಾದ ಸುರೇಶ ನಾಗೋಜಿ, ತಾಲೂಕು ಯೋಜನಾಧಿಕಾರಿ ಸಿ.ಎಂ.ಚನ್ನಬಸನಗೌಡರ, ಸಹಾಯಕ ತೋಟಗಾರಿಕೆ ಅಧಿಕಾರಿ ಎಂ.ಆರ್. ಕಲ್ಮಠ, ಐಇಸಿ ಸಂಯೋಜಕಿ ಎಸ್.ಬಿ. ಜವಳಿ, ಎಂಐಎಸ್ ಅವಿನಾಶ ಬೇಟಗಾರ, ತಾಂತ್ರಿಕ ಸಂಯೋಜಕ ವಿನಯಕುಮಾರ ಪಾಟೀಲ, ಪ್ರಕಾಶ ಗುಂಡಗಾವಿ, ಮಹಾದೇವಿ ಕರ್ಲನವರ, ಅಶ್ವಿನಿ ಮಳಗಿ ಸೇರಿದಂತೆ ಕಾಯಕ ಬಂಧುಗಳು ಹಾಗೂ ಕಾಯಕಮಿತ್ರರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!