Wednesday, September 11, 2024

ಕೇಂದ್ರ ಸರ್ಕಾರ ಕಳಸಾ ಬಂಡೂರಿಯ ವಿಸ್ತೃತ ಯೋಜನೆ ರೂಪಿಸಲು ಅನುಮತಿ ಪತ್ರ ನೀಡಿರುವುದು ಸಂತಸ ತರಸಿದೆ ಈರಣ್ಣಾ ಕಡಾಡಿ

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು : ಉತ್ತರ ಕರ್ನಾಟಕ ರೈತರ ಬಹುದಿನಗಳ ಬೇಡಿಕೆಯಾದ ಕಳಸಾ ಬಂಡೂರಿಗೆ ತಾರ್ಕಿಕ ಅಂತ್ಯ ದೊರೆತಿದ್ದು ಇದ ಈರಣ್ಣಾ ಕಡಾಡಿ ನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿ ರೈತರ ಉನ್ನತಿಗೆ ಸಹಕರಿಸಬೇಕು ಅದನ್ನು ಬಿಟ್ಟು ವಿರೋಧಿಸುವ ಮೂಲಕ ರೈತಾಪಿ ವರ್ಗಕ್ಕೆ ಮುಳ್ಳಾಗಬಾರದು ಎಂದು ರಾಜ್ಯ ಸಭಾ ಸದಸ್ಯರು ಭಾಜಪಾ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣಾ ಕಡಾಡಿ ಹೇಳಿದರು.

ಸೋಮವಾರ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಗೃಹಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಡಿ.29 ರಂದು ಕೇಂದ್ರ ಬಿಜೆಪಿ ಸರ್ಕಾರ ಕಳಸಾ ಬಂಡೂರಿಯ ವಿಸ್ತೃತ ಯೋಜನೆ ರೂಪಿಸಲು ಅನುಮತಿ ಪತ್ರ ನೀಡಿರುವುದು ಸಂತಸ ಇದನ್ನು ನಾವೆಲ್ಲರು ಸ್ವಾಗತಿಸುತ್ತೇವೆ, ಇದರಿಂದ ಉತ್ತರ ಕರ್ನಾಟಕದ ರೈತರಿಗೆ ಅನುಕೂಲವಾಗುದರ ಜೊತೆ ಸುಮಾರು ವರ್ಷಗಳಿಂದ ನಡೆದ ಅನೇಕ ಹೋರಾಟಗಳಿಗೆ ಜಯ ದೊರೆತಂತಾಗಿದೆ ಎಂದು ಹೇಳಿದ ಅವರು, ಯೋಜನೆಯ ಕುರಿತು ಅನುಮತಿ ನೀಡಿದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಸೋಮವಾರ ಈ ವಿಷಯದ ಕುರಿತು ಕಾಂಗ್ರೆಸ್ ಕೆಲವು ದಿನ ಪತ್ರಿಕೆಗಳಲ್ಲಿ ಪ್ರಶ್ನೆ ಹಾಕಿದೆ ಇದಕ್ಕೆ ಉತ್ತರಿಸಲು ನಾನು ಸಿದ್ದ, 2004 ರಿಂದ 2014 ರವರೆಗೂ ಕಾಂಗ್ರೆಸ್ ಸರ್ಕಾರ ಇದ್ದರೂ ಯಾವುದೇ ಯಾವುದೆ ಕ್ರಮ ಕೈಗೊಳ್ಳಲಿಲ್ಲ, ಅಲ್ಲದೆ ರಾಜ್ಯದಲ್ಲಿ 2018 ರವರೆಗೂ ಕಾಂಗ್ರೆಸ್ ಆಡಳಿತದಲ್ಲಿ ಕಳಸಾ ಬಂಡೂರಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಯಿತು ಅದು ಸಾಧ್ಯವಾಗದೆ ಇದ್ದಾಗ ರೈತರ ಮೇಲೆ ಗಧಾ ಪ್ರಹಾರ ನಡೆಸಲಾಯಿತು. ಮಹಿಳೆಯರೆಂದು ಲೆಕ್ಕಿಸದೆ  ದೌರ್ಜನ್ಯ ನಡೆಸಲಾಗಿದೆ, ಎಂದು ಹೇಳಿದ ಅವರು ಕೇವಲ ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಹೊರಾಟ ನಡೆಸುವುದು ಸರಿಯಲ್ಲ, ಇದನ್ನೆ ಕಾಂಗ್ರೆಸ ಮುಂದುವರಿಸಿದಲ್ಲಿ ನಾಳೆಯ ದಿನ ನಗೆ ಪಾಟಲಿಗೆ ಒಳಗಾದರೂ ಯಾವುದೇ ಅಚ್ಚರಿ ಇಲ್ಲವೆಂದು ಎಚ್ಚರಿಸಿದರು.

ಮಹಾದಾಯಿಗೆ ಬೆಳಗಾವಿಯ 5  ವಿಧಾನಸಭಾ ಕ್ಷೇತ್ರಗಳು ಸೇರುತ್ತೇವೆ ಈ ನಿಟ್ಟಿನಲ್ಲಿ ಆಯಾ ಕ್ಷೇತ್ರದಲ್ಲಿ ಸಭೆ ನಡೆಸಲಾಗುವುದು ಎಂದ ಅವರು, ಜ 4 ರಂದು ಮುಂಜಾನೆ 11 ಘಂಟೆಗೆ ಖಾನಾಪೂರ ತಾಲೂಕಿನ ಪಾರಿಶ್ವಾಡದಲ್ಲಿ, ಮಧ್ಯಾಹ್ನ 3 ಕ್ಕೆ ಬೈಲಹೊಂಗಲದಲ್ಲಿ. ದಿ. 05 ರಂದು ಮುಂಜಾನೆ 11 ಘಂಟೆಗೆ ಸವದತ್ತಿಯಲ್ಲಿ ಮದ್ಯಾಹ್ನ 3 ಕ್ಕೆ ರಾಮದುರ್ಗದಲ್ಲಿ. ಜ 6 ರಂದು ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಸಭೆ ಆಯೋಜಿಸಲಾಗಿದ್ದು ಈ ನಿರ್ಧಾರ ಕೈಗೊಂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲ್ಲಿಸುವ ಅಭಿನಂದನಾ ಸಭೆಗೆ ಎಲ್ಲರೂ ಆಗಮಿಸುವಂತೆ ಆಹ್ವಾನ ನೀಡಿದರು‌.

ಶಾಸಕ ಮಹಾಂತೇಶ ದೊಡ್ಡಗೌಡರ ಮೃತ ವಿದ್ಯಾರ್ಥಿನಿಯ                  ಕುಟುಂಬಕ್ಕೆ ಸಾಂತ್ವಾನ ಹೇಳುತ್ತಿರುವುದು.
ಡಿ 31 ರಂದು ಶಾಲೆಯಿಂದ ಮನೆಗೆ ತೆರಳುವ ವೇಳೆ ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಅಕ್ಷತಾ ಹೂಲಿಕಟ್ಟಿ ಅವರ ಕುಟುಂಬಕ್ಕೆ ಶಾಸಕ ಮಹಾಂತೇಶ ದೊಡ್ಡಗೌಡರ ಸಾಂತ್ವನ ಹೇಳಿ ಮೃತಳ ಕುಟುಂಬಕ್ಕೆ ವೈಯಕ್ತಿಕವಾಗಿ ರೂ. 2 ಲಕ್ಷ ಪರಿಹಾರ ಧನ ವಿತರಿಸಿದರು, ಮುಖ್ಯಮಂತ್ರಿಗಳ ಗಮನ ಸೆಳೆದು ರಾಜ್ಯ ಸರ್ಕಾರದಿಂದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಹೇಳಿದ ಅವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಬಸವರಾಜ ಮಾತನವರ, ಈರಣ್ಣಾ ವಾರದ, ಸರಸ್ವತಿ ಹೈಬತ್ತಿ,  ಶ್ರೀಕರ ಕುಲಕರ್ಣಿ, ಉಳವಪ್ಪ ಉಳ್ಳೆಗಡ್ಡಿ, ಸೇರಿದಂತೆ ಇತರರು ಇದ್ದರು‌.

 

 

ಜಿಲ್ಲೆ

ರಾಜ್ಯ

error: Content is protected !!