Friday, September 13, 2024

ಆರು ತಿಂಗಳು ಕಳೆದರು ಮುಗಿಯದ ಮೂರುನೂರು ಮೀಟರ್‌ ಕಿತ್ತೂರು ಚರಂಡಿ ಕಾಮಗಾರಿ

ಬಸವರಾಜ ಚಿನಗುಡಿ 
ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ನಮ್ಮ ಸರ್ಕಾರಗಳು ಸ್ವಚ್ಛತೆಯ ಹಿತದೃಷ್ಠಿಯಿಂದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಚರಂಡಿ ನಿರ್ಮಾಣಕ್ಕೆ ಬಹಳ ಮಹತ್ವ ನೀಡುತ್ತದೆ. ಆದರೆ ಇಲ್ಲೊಂದು ವರದಿ ಇದೆ ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ಆರೇಳು ತಿಂಗಳುಗಳಾದರು ಮುಕ್ತಾಯ ಹಂತ ತಲುಪಿಲ್ಲ. ಹೌದು ಇದು ಬೇರೆ ಯಾವುದೇ ಕುಗ್ರಾಮದ ಕತೆಯಲ್ಲ ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣದ ಕತೆ ವ್ಯತೆ.
ಹೌದು ಪಟ್ಟಣದ ಸೋಮವಾರ ಪೇಠೆಯಲ್ಲಿ ಚರಂಡಿ ಕಾಮಗಾರಿ ಪ್ರಾರಂಭವಾಗಿ ಆರೇಳು ತಿಂಗಳು ಕಳೆದರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾನ ಕುರುಡರಂತೆ ವರ್ತಿಸುತ್ತಿದ್ದಾರೆ. ಚರಂಡಿ ಅಗೆದು ಹಾಗೆ ಬಿಟ್ಟಿದ್ದರಿಂದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಈ ರಸ್ತೆಯ ಮುಖಾಂತರ ನೂರಾರು ಮಕ್ಕಳು ಶಾಲೆಗೆ ಹೋಗುತ್ತಾರೆ ಮತ್ತು ಪಟ್ಟಣದಿಂದ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಗೆ ಈ ರಸ್ತೆ ಮುಖಾಂತರ ಹೋಗಬೇಕು ಅಲ್ಲದೆ ಈ ರಸ್ತೆಯ ಮೂಲಕವೆ ಅನೇಕ ವಾಹನಗಳು ಹೋಗುವುದರಿಂದ ಅಲ್ಲಲ್ಲಿ ಚರಂಡಿ ನೀರು ರಸ್ತೆಯ ಮೇಲೆ ನಿಂತು ರಸ್ತೆ ಹಾಳಾಗಿ ಅಪಘಾತಗಳು ಸಂಭವಿಸಿ ಸಣ್ಣಪುಟ್ಟ ಪೆಟ್ಟುಗಳಾಗಿವೆ ಎಂದು ಪಟ್ಟಣದ ನಾಗರಿಕರು ದೂರಿದ್ದಾರೆ.

            ಅ ವೈಜ್ಞಾನಿಕ ಚರಂಡಿ ನಿರ್ಮಾಣ

ಕಳೆದ ಆರೇಳು ತಿಂಗಳುಗಳಿಂದ ರಸ್ತೆಯನ್ನು ಅಗೆದು ಹಾಗೆ ಬಿಟ್ಟಿದ್ದರಿಂದ ಇಲ್ಲಿ ತ್ಯಾಜ್ಯ ಸೇರಿಕೊಂಡು ಕೊಳಕು ನೀರು ರಸ್ತೆಯ ಮೇಲೆ ಹರಿಯುವುದರಿಂದ ಸಂಜೆಯಾದರೆ ಸಾಕು ಸೊಳ್ಳೆಯ ಕಾಟ ಹೆಚ್ಛಾಗುತ್ತಿದೆ. ಅಲ್ಲದೆ ನೀರು ರಸ್ತೆಯ ಮೇಲೆ ಹರಿದಾಡಿ ತ್ಯಾಜ್ಯಗಳಿಂದ ಆವೃತವಾಗಿ ತಿಪ್ಪೆಯಗುಂಡಿಯಂತಾಗಿ ಗಬ್ಬೆದ್ದು ನಾರುತ್ತಿದೆ ಇದರಿಂದ ಇಲ್ಲಿ ಸಂಚರಿಸಲು ಕಿರಿಕಿರಿ ಉಂಟು ಮಾಡುವುದಲ್ಲದೇ ಅನಾರೋಗ್ಯಕ್ಕಿಡಾಗಿ ಆಸ್ಪತ್ರೆಯತ್ತ ಮುಖ ಮಾಡುವಂತಾಗಿದೆ. ಇಷ್ಟಾದರೂ ಪಟ್ಟಣ ಪಂಚಾಯತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣು ಮೂಗು ಇಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಚರಂಡಿ ನಿರ್ಮಾಣ ಮಾಡಲು ರಸ್ತೆಯನ್ನು ಅಗೆದು ಹಾಗೆ ಬಿಟ್ಟಿದ್ದರಿಂದ ಗುಂಡಿಗಳಲ್ಲಿ ನೀರು ನಿಂತು ಇಲ್ಲಿರುವ ಕೆಲವು ಮನೆಗಳಲ್ಲಿ ನೀರು ಬಸಿದು ಹೋಗುತ್ತಿದ್ದು ಇದರಿಂದ ಮನೆಯ ಗೋಡೆಗಳು ಸೀಳು ಬಿಟ್ಟು ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮನೆಯ ಗೋಡೆಗಳು ಸೀಳು ಬಿಟ್ಟು ಕುಸಿಯುವ ಪರಿಸ್ಥಿತಿಯಲ್ಲಿ ಇರುವುದು

ಜನಪ್ರತಿನಿಧಿಗಳ ಹಾಗೂ ಸಂಬಂಧಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷವೇ ಇದಕ್ಕೆ ಮುಖ್ಯ ಕಾರಣ ಎಂದು ಪಟ್ಟಣದ ನಾಗರಿಕರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!