Saturday, June 15, 2024

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೀತಿಯನ್ನು ಖಂಡಿಸಿ ಪ್ರತಿಭಟನೆ

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಶಿಕ್ಷಣ ಆಲಯಗಳಾಗಬೇಕು. ವಿದ್ಯಾರ್ಥಿಗಳಿಗೆ ಪೂರಕವಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡುವುದು ವಿಶ್ವವಿದ್ಯಾಲಯಗಳ ಕರ್ತವ್ಯವಾಗಿದೆ. ಆದರೆ ಇತ್ತೀಚೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರುಸುತ್ತಿದ್ದು ಇಂದು ವಿದ್ಯಾರ್ಥಿಗಳು ಬೀದಿಗಿಳಿದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೀತಿಯನ್ನು ಖಂಡಿಸಿ ಪ್ರತಿಭಟನೆಯನ್ನು ಕೈಗೊಂಡು ಸಮಸ್ಯೆಗಳನ್ನು ಕೂಡಲೆ ಬಗೆಹರಿಸುವಂತೆ ವಿಶ್ವವಿದ್ಯಾಲಯಕ್ಕೆ ಹಾಗೂ ಕಿತೂ ್ತರು ಮತಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಇವರಿಗೆ ಆಗ್ರಹಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು ಯಾವುದೇ ಪೂರ್ವ ತಯಾರಿಯಿಲ್ಲದೆ ಈ ನೀತಿಯನ್ನು ಜಾರಿಗೊಳಿಸಿದ್ದರಿಂದ ಇಂದು ಶೈಕ್ಷಣಿಕವಾಗಿ ವಿದ್ಯಾರ್ಥಿಗಳಲಿ ್ಲ ಉಪನ್ಯಾಸಕರಲಿ ್ಲ ಹಾಗೂ ಆಡಳಿತಗಾರರಲ್ಲಿ ಸಾಕಷ್ಟು ಗೊಂದಲು ಉಂಟಾಗಿವೆ. ಸರಿಯಾಗಿ ಶೈಕ್ಷಣಿಕ ವೇಳಾಪಟ್ಟಿಯಿಲ್ಲ, ಪಠ್ಯಕ್ರಮವಿಲ್ಲ ದಿನಕ್ಕೊಂದು ನೀತಿ, ನಿಯಮಗಳನ್ನು ಜಾರಿಗೊಳಿಸಿ ಎಲ್ಲರನ್ನೂ ಗೊಂದಲಕ್ಕೆ ಇಡು ಮಾಡಿದೆ. ಸಮಿಸ್ಟರ್ ಮುಕ್ತಾಯಕ್ಕೆ ಬಂದರೂ ಈವರೆಗೂ ಪಠ್ಯಕ್ರಮಕ್ಕೆ ಅನುಗಣವಾಗಿ ಪಠ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಪ್ರತಿ ತಿಂಗಳಿಗೊಂದು ಹೊಸ ಪಠ್ಯಕ್ರಮವನ್ನು ವಿಶ್ವವಿದ್ಯಾಲಯ ಹೊರಡಿಸುತ್ತದೆ. ಪದೇ ಪದೇ ಪಠ್ಯಕ್ರಮ ಬದಲಾವಣೆಯಿಂದ ವಿದ್ಯಾರ್ಥಿಗಳಿಗೂ ಹಾಗೂ ಬೋಧಿಸುವ ಶಿಕ್ಷಕರಿಗೂ ತೀರ್ವ ಗೊಂದಲವಾಗಿದೆ.
ವಿಶ್ವವಿದ್ಯಾಲಯದಲ್ಲಿ ಪಠ್ಯಕ್ರಮ ಸಿದ್ಧಪಡಿಸುವ ಸಮಿತಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿಯದಾಗಿದೆ. ಕೇವಲ ಎರಡು ತಿಂಗಳಲ್ಲಿ ಮೂರು ಬಾರಿ ಪಠ್ಯಕ್ರಮ ಬದಲಾವಣೆಯಾಗಿದೆ. ಮೊದಲನೇ ಸಮಿಸ್ಟರ್ ಪರೀಕ್ಷೆಗಳು ಮುಗಿದು ಆರು ತಿಂಗಳಾದರೂ ಈವರೆಗೂ ಫಲಿತಾಂಶ ಬಂದಿಲ್ಲ. ಬಂದಂತಹ ಫಲಿತಾಂಶಗಳಲ್ಲಿಯೂ ಬಹಳ ಗೊಂದಲವಿದೆ. ಪದವಿ ಪರೀಕ್ಷೆಗಳ ಫಲಿತಾಂಶಗಳನ್ನು ತಡವಾಗಿ ಪ್ರಕಟಿಸುವುದರಿಂದ ಮುಂದಿನ ಉನ್ನತ ವಿದ್ಯಾಭ್ಯಾಸ ಹಾಗೂ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ತುಂಬುವ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿದೆ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಕೌಶ್ಯಲ್ಯಾಭಿವೃದ್ಧಿ ವಿಷಯಗಳನ್ನಾಗಿ ಆರ್ಟಿಫೀಷಿಯಲ್ ಇಂಟಲಿಜನ್ಸ್ ಹಾಗೂ ಹಣಕಾಸು ವ್ಯವಹಾರ ಮತ್ತು ನಿರ್ವಹಣೆ ಎಂಬ ಎರಡು ಕಡ್ಡಾಯ ವಿಷಯಗಳನ್ನು ಜಾರಿಗೊಳಿಸಿದ್ದು ಈ ಎರಡು ವಿಷಯಗಳನ್ನು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪಠ್ಯಗಳನ್ನು ಕಲಿಯಬೇಕು ಇದಕ್ಕಾಗಿ ಒಂದು ವಿಷಯಕ್ಕೆ ರೂ 150 ರಂತೆ ಎರಡು ವಿಷಯಗಳಿಗೆ ಸೇರಿ ರೂ 300 ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ಭರಿಸಲು ವಿಶ್ವವಿದ್ಯಾಲಯ ಆದೇಶವನ್ನು ಹೊರಡಿಸಿದ್ದು ವಿಪರ್ಯಾಸ. ಕಡ್ಡಾಯವಾಗಿ ವಿಶ್ವವಿದ್ಯಾಲಯ ಈ ವಿಷಯಗಳನ್ನು ಒತ್ತಾಯ ಪೂರ್ವಕವಾಗಿ ಹೇರಿದ್ದರಿಂದ ವಿದ್ಯಾರ್ಥಿಗಳು ಏಕೆ ಹಣ ತುಂಬಬೇಕು ಅಲ್ಲದೇ ಈಗಾಗಲೇ ವರ್ಗಗಳು ಪ್ರಾರಂಭವಾಗಿ ಎರಡು ತಿಂಗಳ ನಂತರ ಹಣ ತುಂಬಲು ಹೇಳಲಾಗಿದೆ ಅಲ ್ಲದೇ ಈ ವಿಷಯಗಳನ್ನು ಆನ್‌ಲೈನ ಮೂಲಕ ಕಲಿಯಲು ಸ್ಮಾರ್ಟಪೋನ್ ಹಾಗೂ ಇಂಟರ್ ನೇಟ್ ಅವಶ್ಯವಾಗಿದ್ದು ಇವುಗಳ ಸೌಲಭ್ಯವನ್ನು ವಿಶ್ವವಿದ್ಯಾಲಯ ಉಚಿತವಾಗಿ ಒದಗಿತ್ತದೇಯೇ ಎಂದು ವಿದ್ಯಾರ್ಥಿಗಳ ಪ್ರಶ್ನೆ. ಈ ಎರಡು ವಿಷಯಗಳು ಆಂಗ್ಲ ಭಾಷೆಯಲ್ಕಿಯೇ ಪಠ್ಯಕ್ರಮ ಇರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಪಠ್ಯಕ್ರಮಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಕರೋನಾ ಕಾಲದಿಂದ ಶೈಕ್ಷಣಿಕ ವೇಳಾಪಟ್ಟಿ ಸರಿಯಾಗಿ ಇಲ್ಲದೇ ಇರುವುದು ಹಾಗೂ ವಿಶ್ವವಿದ್ಯಾಲಯದ ನೀತಿಯಿಂದ ಸುಮಾರು ಎರಡು ತಿಂಗಳಾದರೂ ಸರಿಯಾಗಿ ವರ್ಗಗಳು ನಡೆಯುತ್ತಿಲ್ಲ. ವಿಶ್ವವಿದ್ಯಾಲಯ ಕೇವಲ ಪರೀಕ್ಷೆ ನಡೆಸುವುದು ಹಾಗೂ ಪ್ರವೇಶವನ್ನು ನೀಡುವುದು ಇಷ್ಟೇ ತನ್ನ ಕೆಲಸ ಎಂದು ಭಾವಿಸಿದೆ. ಪರೀಕ್ಷೆಗಳು ಮುಗಿದು ಈವರೆಗೂ ಅನೇಕ ವಿಷಯಗಳ ಮೌಲ್ಯಮಾಪನ ಕಾರ್ಯಜಾರಿಯಲ್ಲಿರುವುದರಿಂದ ಅನೇಕ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದರಿಂದ ಇಲ್ಲಿ ವರ್ಗಗಳು ಸರಿಯಾಗಿ ನಡಯುತ್ತಿಲ್ಲ ಪ್ರಾಚಾರ್ಯರನ್ನು ವಿಚಾರಿಸಿದಾಗ ವಿಶ್ವವಿದ್ಯಾಲಯಗಳ ನಿಯಮ ಹಾಗೂ ಆದೇಶದ ಪ್ರಕಾರ ಮೌಲ್ಯಮಾಪನಕ್ಕೆ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಬೇಕು ಇಲ್ಲವಾದರೆ ನಮ್ಮ ಮಹಾವಿದ್ಯಾಲಯದ ಫಲಿತಾಂಶವನ್ನು ತಡೆ ಹಿಡಿಯಲಾಗುವುದು ಎಂದು ಆದೇಶವಿದೆ, ಎಂದು ಆದೇಶವನ್ನು ತೋರಿಸುತ್ತಾರೆ. ಇದರಿಂದ ಪಾಠ ಪ್ರವಚನಕ್ಕಿಂತ ವಿಶ್ವವಿದ್ಯಾಲಯಕ್ಕೆ ಪರೀಕ್ಷೆ ಹಾಗೂ ಪ್ರವೇಶವೇ ಮುಖ್ಯವಾಗಿದೆ. ಈ ರೀತಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಅನೇಕ ಆಟವನ್ನು ಆಡುತ್ತೀದೆ ಈ ಕುರಿತು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ವಿದ್ಯಾರ್ಥಿಗಳು ಕಿತ್ತೂರು ಮತಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಹಾಗೂ ಕಿನಾವಿವ ಸಂಘದ ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಕೆ. ಭೂಮನಗೌಡರ ಇವರ ಮುಖಾಂತರ ವಿಶ್ವವಿದ್ಯಾಲಯಕ್ಕೆ ಮನವಿಯನ್ನು ಅರ್ಪಿಸಿದರು.
ವಿದ್ಯಾರ್ಥಿಗಳಾದ ಅಬ್ಬಾಸಲಿ ಅಂಬಲತಡಿ, ಸೌಮ್ಯಾ ಶಿವಣ್ಣವರ, ಸುಮಿತ ಬುಲಬುಲೆ, ಅದೃಷ ಪಾಟೀಲ, ಆಕಾಶ ಚಿನಗುಡಿ, ವಿನಾಯಕ, ಐಶ್ವರ್ಯಾ ಮುರಗೋಡ, ಅನುಷಾ ಕಮ್ಮಾರ, ರಕ್ಷಿತಾ, ಕೀರ್ತಿ, ಲಕ್ಷ್ಮೀ, ಸರಸ್ವತಿ, ತನುಜಾ, ಅವಿನಾಷ ಕುಡಲಗಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಜಿಲ್ಲೆ

ರಾಜ್ಯ

error: Content is protected !!