Wednesday, July 24, 2024

ಕಿತ್ತೂರು ಕಾಂಗ್ರೆಸ್ ಟಿಕೆಟ್’ಗೆ ಬಾರಿ ಪೈಪೋಟಿ!

ವರದಿ:ವಿರೇಶ ಹೀರೆಮಠ/ ಪ್ರವೀಣ್ ಗಿರಿ.

 ಚನ್ನಮ್ಮನ ಕಿತ್ತೂರ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವಂತೆ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಜೋರಾಗಿದೆ.

ಕಾಂಗ್ರೆಸ್ ಟಿಕೆಟ್‌ಗೆ ಮಾಜಿ ಸಚಿವ ಇನಾಮದಾರ ಮತ್ತು ಅವರ ಅಳಿಯ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಾಬಾಸಾಹೇಬ್ ಪಾಟೀಲ ನಡುವೆ ತೀವ್ರ ಪೈಪೋಟಿ ನಡೆದಿದ್ದು ಯಾರ ಕೈ ಮೇಲಾಗುತ್ತೆ ಎಂದು ಕಾದು ನೋಡಬೇಕಿದೆ.

ಹಾಲಿ ಬಿಜೆಪಿ ಶಾಸಕ ಮಹಾಂತೇಶ ದೊಡಗೌಡರ ತಮ್ಮ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ತಿಳಿಸುತ್ತಾ ಗ್ರಾಮ-ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡಲು ಪ್ಲಾನ್ ಮಾಡಿದ್ದು, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಿದ್ದಾರೆ.

ಇತ್ತ ಕಾಂಗ್ರೆಸ್ ನಾಯಕರು ನಾವೂ ಯಾವುದರಲ್ಲಿ ಕಮ್ಮಿ ಇಲ್ಲವೆಂಬಂತೆ ಟಿಕೆಟ್ ಗೆ ಅರ್ಜಿ ಸಲ್ಲಿಸಿ, ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ.

ಕಾಂಗ್ರೆಸ್ ನಿಂದ ಮೂವರು ಅರ್ಜಿ ಸಲ್ಲಿಸಿದ್ದರೂ. ಮಾವ ಇನಾಮದಾರ ಮತ್ತು ಅಳಿಯ ಬಾಬಾಸಾಹೇಬ್ ಮಧ್ಯೆ ತೀವ್ರ ಪೈಪೋಟಿ ನಡೆದಿದೆ.

ಮಾಜಿ ಸಚಿವ ಡಿ.ಬಿ.ಇನಾಮದಾರ ಐದು ಸಲ ಚುನಾವಣೆಯಲ್ಲಿ ಗೆಲುವು ಸಾಧಿಸಿ ಎರಡು ಸಲ ಸಚಿವರಾಗಿ ಕೆಲಸ ಮಾಡಿರುವ ಹೆಗ್ಗಳಿಕೆ ಅವರಿಗಿದೆ. ಅವರ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲ.
ಸಚಿವರಾಗಿದ್ದಾಗ ಕೊಟ್ಟಂತಹ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ ಗೌರವ ಅವರಿಗೆದೆ. ಕಳಂಕ ರಹಿತ ರಾಜಕಾರಣಿ ಎಂಬ ಹೆಗ್ಗಳಿಕೆ ಹೊಂದಿದ್ದು, ಹೈ ಕಮಾಂಡ್ ಮಟ್ಟದಲ್ಲಿ ತಮ್ಮದೇ ಹಿಡಿತ ಇಟ್ಟುಕೊಂಡಿದ್ದಾರೆ.

ಮಾಜಿ ಸಚಿವ ಡಿ. ಬಿ. ಇನಾಮದಾರ

ಜಿಪಂ ಸದಸ್ಯನಾಗಿ ಬಾಬಾಸಾಹೇಬ್ ಪಾಟೀಲ ಅನುಭವ ಹೊಂದಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ನಿಂತು ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಕಳೆದ ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಾಕಷ್ಟು ಅಭ್ಯರ್ಥಿಗಳ ಪರ ನಿಂತು ಗೆಲ್ಲಿಸಿದ ಸಾಧನೆ ಇವರಿಗಿದೆ. ಇವರ ಹಿಂದೆ ಪ್ರಭಾವಿ ರಾಜಕಾರಣಿಗಳು ಮತ್ತು ಯುವಕರ ಪಡೆ ಇದೆ. ಹೈಕಮಾಂಡ್ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಅಂತಿದ್ದಾರೆ ಬಾಬಾ ಸಾಹೇಬ್ ಪಾಟೀಲರ ಅಭಿಮಾನಿಗಳು.

ಮಾಜಿ ಜಿಪಂ ಸದಸ್ಯ ಬಾಬಾಸಾಹೇಬ ಪಾಟೀಲ

ಸಾಮಾಜಿಕ ಕೆಲಸ ಮೂಲಕ ಗುರುತಿಸಿಕೊಂಡಿರುವ ಶಿಲ್ಲೆದಾರ ಕೂಡ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇವರು ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎಂದು ಕಿತ್ತೂರು ನಾಡಿನ ಮತದಾರರು ತಮ್ಮತಮ್ಮಲ್ಲಿ ಮಾತನಾಡಕೊಳ್ಳುತ್ತಿದ್ದಾರೆ. ಮುಂಬರುವ  ದಿನಗಳಲ್ಲಿ ಕಿತ್ತೂರು ಕಾಂಗ್ರೆಸ್ ಚಿತ್ರಣ ಏನೆಂಬುದು ಕಾದು ನೋಡಬೇಕಿದೆ!!

ಜಿಲ್ಲೆ

ರಾಜ್ಯ

error: Content is protected !!