Saturday, July 27, 2024

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ನಿಚ್ಚನಕಿ ಗ್ರಾಮದಲ್ಲಿ ಇತ್ತಿಚೇಗೆ ನಡೆದ ಅಖಂಡ ಕರ್ನಾಟಕ ರೈತ ಸಂಘದ ಚಿಂತನ ಮಂಥನ ಸಭೆಯಲ್ಲಿ ರೈತರು ನಮ್ಮ ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ವ್ಯಕ್ತಪಡಿಸಿರುವುದು ಬರುವ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರದ ಹಿತ ದೃಷ್ಟಿಯಿಂದ ರೈತಾಪಿ ವರ್ಗದವರಿಗೆ ಉತ್ತಮ ಸಂದೇಶವಾಗಿದೆ ಎಂದು ಕೆ ಪಿ ಸಿ ಸಿ ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಮಹಮ್ಮದ್ ಹನಿಪ್ ಸುತಗಟ್ಟಿ ಹೇಳಿದರು 

ಕಿತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಬಗ್ಗೆ ಯಾರಿಗೂ ಗೊಂದಲ ಬೇಡ ಡಿ.ಬಿ ಇನಾಮದಾರ ಮತ್ತು ಬಾಬಾ ಸಾಹೇಬ್ ಪಾಟೀಲ್ ಇಬ್ಬರಲ್ಲಿ ಒಬ್ಬರಿಗೆ ಬಿ ಪಾರ್ಮ ಸಿಗುತ್ತದೆ.ಮೂರನೇ ವ್ಯಕ್ತಿಯೊಬ್ಬ ನನಗೂ ಕಾಂಗ್ರೇಸ್‌ ಪಕ್ಷದ ಬಿ ಪಾರ್ಮ ಸಿಗುತ್ತದೆ ಎಂದು ಕ್ಷೇತ್ರದ ತುಂಬೆಲ್ಲಾ ಹೇಳುತ್ತಾ ತಿರುಗಾಡುತ್ತಿದ್ದಾನೆ. ಅದು ಶುದ್ಧ ಸುಳ್ಳು ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ. ಅವರೆಲ್ಲ  ಸ್ವಯಂ ಘೋಷಿತ ಕಾಂಗ್ರೇಸ್‌ ಪಕ್ಷದ ನಾಯಕರಾಗಿದ್ದಾರೆ. ಅವರು ಎಲೆಕ್ಷನ್ ಹತ್ತಿರ  ಬಂದಾಗ ಇಂತಹ ಆಟಗಳನ್ನು ಆಡುತ್ತಾರೆ. ನಿಚ್ಚನಿಕಿ ಗ್ರಾಮದಲ್ಲಿ ನಡೆದ ರೈತರ ಚಿಂತನ ಮಂಥನ  ಸಭೆಯಲ್ಲಿ ಸ್ವತಃ ಅವರೇ ಹೇಳಿದ್ದಾರೆ ನಾನು ಹೆಸರಿಗೆ ಅಷ್ಟೇ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೇನೆ. ಇದರ ಅರ್ಥ ಏನು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಇಂತಹ ವ್ಯಕ್ತಿ ಬಗ್ಗೆ ತಲೆ ಕೆಡಿಸುವುದು ಬೇಡ ಎಂದು ತಮ್ಮ ಪಕ್ಷದ  ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಈಗಾಗಲೇ ಕಾಂಗ್ರೆಸ್ ಪಕ್ಷ ಕಿತ್ತೂರ್ ಮತಕ್ಷೇತ್ರದಲ್ಲಿ ಸರ್ವೇ ಕಾರ್ಯ ಮುಗಿದಿದ್ದು ಡಿ.ಬಿ ಇನಾಮದಾರ ಅಥವಾ ಬಾಬಾ ಸಾಹೇಬ್ ಪಾಟೀಲ್ ಇಬ್ಬರಲ್ಲಿ ಒಬ್ಬರಿಗೆ ಪಕ್ಷ ಮಣೆ ಹಾಕುತ್ತದೆ ಕಾರಣ ನಾವುಗಳು ಎಲ್ಲರೂ  ಸೇರಿ ಪಕ್ಷ ಯಾರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತದೆ ಅವರನ್ನು ಗೆಲ್ಲಿಸೋಣ. ಇಂದು ಕಿತ್ತೂರು ಕ್ಷೇತ್ರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕೋಣ ಎಂದ ಅವರು ಸದ್ಯದಲ್ಲಿ ಅಧಿಕೃತ ಅಭ್ಯರ್ಥಿಯ ಹೆಸರು ಹೊರ ಬೀಳಲಿದೆ ಎಂದು ಹೇಳಿದರು 

ಜಿಲ್ಲೆ

ರಾಜ್ಯ

error: Content is protected !!