Wednesday, September 18, 2024

ಜಾನುವಾರು ರೋಗ ನಿಯಂತ್ರಿಸಲು ಸರಕಾರ ವಿಫಲ : ಎಎಪಿ ಮುಖಂಡ ಆನಂದ ಹಂಪಣ್ಣವರ ಆರೋಪ

ಚನ್ನಮ್ಮನ ಕಿತ್ತೂರು: ಕಳೆದ ಎರೆಡು ತಿಂಗಳುಗಳಿಂದ ಕಿತ್ತೂರು ವಿಧಾನ ಸಭಾ ಕ್ಷೇತ್ರದ ಹಳ್ಳಿಗಳಲ್ಲಿ  ಚರ್ಮಗಂಟು ರೋಗದಿಂದ ನೂರಾರು ಎತ್ತು ಆಕಳುಗಳು ಸಾವನ್ನಪ್ಪಿವೆ.ರೋಗ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದರೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳತಿದ್ದಾರೆ ಎಂದು ಚನ್ನಮ್ಮನ ಕಿತ್ತೂರು ವಿಧಾನ ಸಭಾ ಕ್ಷೇತ್ರದ ಆಮ್ಮ ಆದ್ಮಿ ಪಕ್ಷದ ಮುಖಂಡ ಆನಂದ ಹಂಪಣ್ಣವರ ಆರೋಪಿಸಿದ್ದಾರೆ.

ಅತಿಯಾದ ಮಳೆಯಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಳೆದುಕೊಂಡು ನಷ್ಟದಲ್ಲಿದ್ದಾರೆ,ಚರ್ಮಗಂಟು ರೋಗದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾದ್ಯಮಕ್ಕೆ ತಿಳಿಸಿದ ಅವರು ಒಂದು ಸಮೀಕ್ಷೆಯ ಪ್ರಕಾರ ಕ್ಷೇತ್ರದ್ಯಾಂತ ಪಶು ಇಲಾಖೆಗಳಲ್ಲಿ ಪಶುವೈದ್ಯರ ಕೊರತೆ ಇದ್ದು ಇದ್ದ ಕೆಲ ವೈದ್ಯರನ್ನು ಜನಪ್ರತಿನಿಧಿಗಳ ಶಿಫಾರಸ್ಸಿನ ಮೇರೆಗೆ ಬೇರೆ ಇಲಾಖೆಗಳಿಗೆ ಹೆಚ್ಚುವರಿ ಹುದ್ದೆಗಳಿಗೆ ನೇಮಿಸಲಾಗಿದೆ.

ಮಾರಕ ರೋಗಗಳಿಂದಾಗಿ ಹಸು,ಕರುಗಳು ನಿತ್ಯ ಸಾವನ್ನಪ್ಪತ್ತಿದ್ದರೂ ಬಿಜೆಪಿ ಸರಕಾರ ನಿರ್ಲಕ್ಷ್ಯ ತೋರುತ್ತಿದೆ.ಗೋಮಾತೆ ಎಂದು ಢೂಂಗಿ ಧಾರ್ಮಿಕ ಭಕ್ತಿ ಪ್ರದರ್ಶಿಸುವ ಬಿಜೆಪಿ ಶಾಸಕರಿಗೆ ನಿತ್ಯ ನರಳಿ ಸಾಯುತ್ತಿರುವ ಹಸುಗಳಿಗೆ ಅಗತ್ಯ ಚಿಕಿತ್ಸೆ ನೀಡಿ,ರೋಗ ನಿಯಂತ್ರಿಸಲು ಕ್ರಮಕೈಗೂಳ್ಳಲು ಪುರುಸೊತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಮಾತ್ರ ಗೋವುಗಳನ್ನು ಬಳಸಿಕೊಳ್ಳುವ ಬಿಜೆಪಿ,ಜಾನುವಾರುಗಳಿಗೆ ಕನಿಷ್ಠ ಚಿಕಿತ್ಸೆ ನೀಡುವಲ್ಲಿ ವಿಫಲವಾಗಿದೆ,ಕೊಡಲೇ ಜನಪ್ರತಿನಿಧಿಗಳು,ಜಿಲ್ಲಾಡಳಿತ ಸಾಂಕ್ರಮಿಕ ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಈಗಾಗಲೇ ನೂರಾರು ಜಾನುವಾರುಗಳು ಮರಣ ಹೊಂದಿದ ರೈತರಿಗೆ ಸೂಕ್ತ ಪರಿಹಾರ ತತಕ್ಷಣ ನೀಡಬೇಕು,ಖಾಲಿ ಇರುವ ಪಶು ವೈದ್ಯಾಧಿಕಾರಿಗಳನ್ನು ನೇಮಿಸಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಜಿಲ್ಲೆ

ರಾಜ್ಯ

error: Content is protected !!