Saturday, July 27, 2024

ಪ್ರಧಾನಿ ನರೇಂದ್ರ ಮೋದಿ ಕೋಟೆಯಲ್ಲಿ ‘ಕಿಸಾನ್ ನ್ಯಾಯ್ ರ‍್ಯಾಲಿ’ ಆಯೋಜಿಸಿದ ಪ್ರಿಯಾಂಕಾ ಗಾಂಧಿ!

ವಾರಾಣಸಿ(ಅ.10): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯ ಸಂಸದೀಯ ಕ್ಷೇತ್ರ ವಾರಣಾಸಿ ತಲುಪಿದ್ದಾರೆ. ಅಲ್ಲಿಂದಲೇ, ಅವರು 2022 ಯುಪಿ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ರಣಕಹಳೆ ಮೊಳಗಿಸಲಿದ್ದಾರೆ. ಇದರೊಂದಿಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ದೀಪೇಂದ್ರ ಹೂಡಾ ಕೂಡ ಅವರಿಗೆ ಸಾಥ್ ನಿಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ ನಾಯಕರು ಬಾಬತ್‌ಪುರ ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಗಾಂಧಿಯನ್ನು ಸ್ವಾಗತಿಸಿದ್ದಾರೆ.
ರ‍್ಯಾಲಿಗೂ ಮುನ್ನ, ಪ್ರಿಯಾಂಕಾ ತನ್ನ ಧಾರ್ಮಿಕ ಪ್ರಯಾಣವನ್ನೂ ಆರಂಭಿಸಲಿದ್ದಾರೆ. ಈ ನಿಟ್ಟಿನಲ್ಲಿ ಅವರು ಮೊದಲು ಬಾಬಾ ವಿಶ್ವನಾಥನ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಬಳಿಕ ತಾಯಿ ಕುಷ್ಮಾಂಡ ದರ್ಶನ ಪಡೆದು, ಬಳಿಕ ಆದಿಶಕ್ತಿಯ ಆಶೀರ್ವಾದವನ್ನು ತೆಗೆದುಕೊಳ್ಳುತ್ತಾರೆ. ಪೂರ್ವಾಂಚಲದಲ್ಲಿಯೂ ಹೊಸ ಕೃಷಿ ಕಾನೂನು ಪ್ರಬಲ ಸಮಸ್ಯೆಯಾ ಎಂದು ಬಿಂಬಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಮೋದಿಯ ಭದ್ರಕೋಟೆಯಲ್ಲಿ ಶಕ್ತಿ ಪ್ರದರ್ಶಿಸುವ ಮೂಲಕ, ಕಾಂಗ್ರೆಸ್ ದೇಶ ಮತ್ತು ರಾಜ್ಯಕ್ಕೆ ತಾನು ದುರ್ಬಲ ಪಕ್ಷವಲ್ಲ ಎಂಬ ಸಂದೇಶವನ್ನು ನೀಡಲು ಬಯಸುತ್ತದೆ.
ಲಖೀಂಪುರ್ ಖೇರಿ ಹಿಂಸಾಚಾರ ಮತ್ತು ರೈತರ ಚಳುವಳಿಗೆ ಸಂಬಂಧಿಸಿದಂತೆ ಪ್ರಿಯಾಂಕಾ ಇಷ್ಟು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುವುದು ಇದೇ ಮೊದಲು. ಲಖೀಂಪುರ್ ಖೇರಿ ಘಟನೆಗೆ ಸಂಬಂಧಿಸಿದಂತೆ ಅವರು ಸರ್ಕಾರಕ್ಕೆ ಬಹುದೊಡ್ಡ ಹೊಡೆತ ನೀಡಲು ಸಿದ್ಧತೆ ನಡೆಸಿದ್ದಾರೆ. ರೋಹನಿಯಾದ ಜಗತ್ಪುರ್ ಇಂಟರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಯನ್ನು ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ರಣಕಹಳೆ ಎಂದೇ ಪರಿಗಣಿಸಲಾಗಿದೆ. ಈ  ‘ಕಿಸಾನ್ ನ್ಯಾಯ್ ರ‍್ಯಾಲಿ’ ಯೊಂದಿಗೆ, ಪ್ರಿಯಾಂಕಾ ಗಾಂಧಿ ಅವರು ಬನಾರಸ್‌ನ ಎಂಟು ಸ್ಥಾನಗಳೊಂದಿಗೆ ಪೂರ್ವಾಂಚಲ್‌ನ 164 ವಿಧಾನಸಭಾ ಸ್ಥಾನಗಳಲ್ಲಿ ಜಾತಿ ಸಮೀಕರಣಗಳನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ.

ಜಿಲ್ಲೆ

ರಾಜ್ಯ

error: Content is protected !!