Tuesday, May 28, 2024

ಬೆಳಗಾವಿಯಲ್ಲಿ ಒಂದೆ ಹುಡುಗಿಗಾಗಿ ಇಬ್ಬರ ನಡುವೆ ಮೇಗಾ ಫೈಟ್: ಕೊನೆಗೆ ಆಗಿದ್ದು ಕೊಲೆ.

ಒಂದೇ ಹುಡುಗಿಗಾಗಿ ಆಗಾಗ ಸಿನಿಮಾ ಸ್ಟೈಲ್ ನಲ್ಲಿ ಬೇರೆ ಬೇರೆ ಕ್ಲಾಸ್ ಹುಡುಗರು ಹೊಡೆದಾಡಿಕೊಳ್ತಿದ್ದರು. ಹುಡುಗಿ ಮುಂದೆ ಹಾಗೂ ಕಾಲೇಜಿನಲ್ಲಿ ಹೀರೋ ಆಗಬೇಕು ಅಂದುಕೊಂಡಿದ್ದ ಆ ಹುಡುಗರು ಮಾಡಬಾರದ ಕೆಲಸ ಮಾಡಿ ಇದೀಗ ಜೈಲು ಸೇರಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆ ಕಾಲೋನಿ ಜನರು ಕೂಡ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಅಷ್ಟಕ್ಕೂ ಬೆಳಗಾವಿಯ ಮುಚ್ಚಂಡಿಯಲ್ಲಿ ನಡೆದ ಬಾಲಕನ ಕೊಲೆಗೆ ಸಿಕ್ಕ ಟ್ವಿಸ್ಟ್. ಅದೇ ಏನಂತಿರಾ ಓದಿ…

ಹುಡುಗಿನ ಚುಡಾಯಿಸಿತ್ತಿದ್ದ ಅಂತ ಕೊಂದು ಬಿಟ್ಟರು:

ಅಕ್ಟೋಬರ್ 20ರಂದು ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದಲ್ಲಿ ಅರೆ ಬೆತ್ತಲೆ ಮಾಡಿ ಬಾಲಕನ ಕೊಲೆ ಕೇಸ್‌ ಗೆ ಇದೀಗ ಟ್ವಿಸ್ಟ್ ಸಿಕ್ಕದೆ. ಶಾಲೆಯಿಂದ ಬಾಲಕನನ್ನ ಕಿಡ್ನಾಪ್ ಮಾಡಿಕೊಂಡು ಹೋಗಿ ಕೊಲೆ ಮಾಡಿದ ಆರೋಪಿಗಳು ಅಂದರ್ ಆಗಿದ್ದಾರೆ. ಅಷ್ಟಕ್ಕೂ ಕೊಲೆಗೆ ಕಾರಣ ಏನು ಅಂತಾ ನೀವು ಕೇಳಿದ್ರೇ ಶಾಕ್ ಆಗ್ತೀರಾ.. ಕೊಲೆಯನ್ನ ಯಾರು ಮಾಡಿದರು, ಏಕೆ ಮಾಡಿದರು? ಅಂತಾ ಹೇಳುವುದಕ್ಕಿಂತ ಮುನ್ನ ಕೊಲೆಯಾದ ದಿನ ನಡೆದ ಘಟನೆ ಏನು? ಅಂತೀರಾ…

ಅಕ್ಟೋಬರ್ 20ರಂದು ಮುಚ್ಚಂಡಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಕೊಲೆಯಾಗಿ ಹೋಗಿದ್ದ ಬಾಲಕನ ಹೆಸರು ಪ್ರಜ್ವಲ್ ಶಿವಾನಂದ ಕರಿಗಾರ. ವಯಸ್ಸು 16. ಆತ ಬೆಳಗಾವಿಯ ಶಿವಾಜಿ ನಗರದ ನಿವಾಸಿ. ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ಪ್ರಜ್ವಲ್ ಅಕ್ಟೋಬರ್ 19ರಂದು ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗಿದ್ದಾನೆ. ಸಂಜೆ ಆರು ಗಂಟೆಯಾದ್ರೂ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಎಲ್ಲ ಕಡೆ ಆತನಿಗಾಗಿ ಹುಡುಕಾಟ ನಡೆಸಿ ನಂತರ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 

ಇದಾದ ಬಳಿಕ ಅಕ್ಟೋಬರ್ 20ರಂದು ಮಧ್ಯಾಹ್ನದ ವೇಳೆಗೆ ಬಾಲಕ ಕೊಲೆಯಾದ ಸ್ಥಿತಿಯಲ್ಲಿ ಮಾರಿಹಾಳ ಪೊಲೀಸರಿಗೆ ಸಿಕ್ಕಿದ್ದಾನೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾಲಕನ ಪೋಷಕರನ್ನ ಕರೆಯಿಸಿಕೊಂಡು ಸ್ಥಳದ ಪಂಚನಾಮೆ ಮಾಡಿ, ಶ್ವಾನದಳ ಕರೆಯಿಸಿ ಪರಿಶೀಲನೆ ನಡೆಸಿ ಶವವನ್ನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್​​ ಮಾಡಿ ತನಿಖೆಗೆ ಇಳಿದರು. ಇತ್ತ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಅಂದು ರಾತ್ರಿ ವೇಳೆಗೆ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು. ಇತ್ತ ಬಾಲಕನನ್ನ ಬರ್ಬರವಾಗಿ ಹತ್ಯೆ ಮಾಡಿದ್ದನ್ನ ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಅಂತ್ಯಸಂಸ್ಕಾರದ ಮಾರನೇ ದಿನ ಅ. 21ರಂದು ಶಿವಾಜಿನಗರದ ಜನರು ಪ್ರತಿಭಟನಾ ಮೆರವಣಿಗೆ ನಡೆಸಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

ಇತ್ತ ಒಂದು ಟೀಂ ಮಾಡಿಕೊಂಡು ಫೀಲ್ಡಿಗಿಳಿದ ಪೊಲೀಸರು ಮೊದಲು ಬಾಲಕನ ಶಾಲೆಯಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಎನೂ ಸಿಗದಿದ್ದಾಗ ಶಾಲೆ ಹೊರಗಿನ ಮುಖ್ಯ ರಸ್ತೆಯಲ್ಲಿ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದಾಗ ಬೈಕ್ ಮೇಲೆ ಪ್ರಜ್ವಲ್ ನನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತೆ. ಅದರ ಆಧಾರದ ಮೇಲೆ ಆರೋಪಿಗಳ ಬೆನ್ನು ಬಿದ್ದ ಪೊಲೀಸರು ಕಡೆಗೆ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಮೂರು ಜನ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಅಷ್ಟಕ್ಕೂ ಇಲ್ಲಿ ಕೊಲೆ ಮಾಡಿದ್ದು ಖನಗಾಂವ ಗ್ರಾಮದ ಲಕ್ಷ್ಮಣ ಹೊಸಮನಿ ಹಾಗೂ ಇಬ್ಬರು ಸ್ನೇಹಿತರು. ಅಷ್ಟಕ್ಕೂ ಕೊಲೆ ಮಾಡಲು ಕಾರಣವೇ ಒಂದು ಹುಡುಗಿಯ ವಿಚಾರ. ಹೌದು, ಈ ಪ್ರಜ್ವಲ್ ತನ್ನ ಹತ್ತನೇ ತರಗತಿಯಲ್ಲಿ ಅದೊಂದು ಹುಡುಗಿಯನ್ನ ಚುಡಾಯಿಸುತ್ತಿದ್ದನಂತೆ. ಈ ವಿಚಾರವನ್ನು ಆ ಹುಡುಗಿಯು ತನ್ನ ಲವರ್ ಬಳಿ ಹೇಳಿಕೊಂಡಿದ್ದಾಳೆ. ಆಗ ಆತ ಲಕ್ಷ್ಮಣ ಹಾಗೂ ಇನ್ನಿತರ ಗೆಳೆಯರನ್ನ ಕರೆದುಕೊಂಡು ಬಂದು ಈತನಿಗೆ ಧಮಕಿ ಕೊಟ್ಟಿದ್ದಾನೆ. ಇದಾದ ಬಳಿಕವೂ ಪ್ರಜ್ವಲ್, ಹುಡುಗಿಯನ್ನು ಕಾಡಿಸಿದ್ದಕ್ಕೆ ಆಕ್ರೋಶಗೊಂಡ ಆಕೆಯ ಲವರ್ ಬಾಲಾಪರಾಧಿ ಲಕ್ಷ್ಮಣ್ ಗೆ ಹೇಳಿ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಅದರಂತೆ ಅ. 19ರಂದು ಪಾರ್ಟಿ ಮಾಡೋಣ ಬಾ ಅಂತಾ ಮುಚ್ಚಂಡಿ ಜಮೀನಿನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ ನಂತರ ಶಾಲೆಯ ಯೂನಿಫಾರ್ಮ್ ಸಮೇತ ಎಸ್ಕೇಪ್ ಆಗಿದ್ದಾರೆ. ಸ್ಥಳದಲ್ಲಿ ಸಿಕ್ಕ ಬೆಲ್ಟ್ ನಿಂದ ಬಾಲಕ ಯಾರು ಅನ್ನೋದು ಪತ್ತೆ ಹೆಚ್ಚಿ, ಸಿಸಿಟಿವಿ ಆಧಾರದ ಮೇಲೆ ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ ಪೊಲೀಸರು.

ಹುಡುಗಿ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಈ ರೀತಿ ಬರ್ಬರವಾಗಿ ಬಾಲಕನನ್ನ ಹತ್ಯೆ ಮಾಡಿದ್ದು ಶಾಕಿಂಗ್ ಸಂಗತಿ. ಸಣ್ಣ ವಯಸ್ಸಿನಲ್ಲೇ ಹುಡುಗರು ಈ ರೀತಿ ಹವಾ ಮೆಂಟೆನ್ ಮಾಡಲು ಹಾಗೂ ಹುಡುಗಿಯರ ಮುಂದೆ ಹಿರೋ ಆಗಲು ಹೋಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ತಿರುವುದು ವಿಪರ್ಯಾಸದ ಸಂಗತಿ. ಪೋಷಕರು ಕೂಡ ಎಚ್ಚೆತ್ತುಕೊಂಡು ತಮ್ಮ ಮಕ್ಕಳು ಎನು ಮಾಡ್ತಿದ್ದಾರೆ ಅನ್ನೋದರ ಕಡೆ ಗಮನ ಹರಿಸಬೇಕು. ಇಲ್ಲವಾದ್ರೇ ಮಕ್ಕಳು ಮುಂದಿನ ದಿನಮಾನಗಳಲ್ಲಿ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗುತ್ತೆ. ಇದೀಗ ಪ್ರಜ್ವಲ್ ಕುಟುಂಬಸ್ಥರು ಮಗನನ್ನ ಕಳೆದುಕೊಂಡಿದ್ದು ಅವರ ನೋವು ಹೇಳತೀರದ್ದಾಗಿದೆ.

 

 

 

 

 

 

ಕೃಪೆ:ಟಿವಿ9

ಜಿಲ್ಲೆ

ರಾಜ್ಯ

error: Content is protected !!