Tuesday, April 16, 2024

ಕಿತ್ತೂರು ಉತ್ಸವ ನೋಡಿ ಮನೆಗೆ ಹೋಗುವಾಗ ಭೀಕರ ರಸ್ತೆ ಅಪಘಾತ: ಇಬ್ಬರ ಸಾವು.

ಕಿತ್ತೂರು: ಪಟ್ಟಣದಲ್ಲಿ ನಡೆದ ಕಿತ್ತೂರು ಉತ್ಸವ ನೋಡಿ ಮನೆಗೆ ಹಿಂದಿರುಗುವಾಗ  ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಿತ್ತೂರು ಪಟ್ಟಣದ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (NH4 ರಸ್ತೆ) ನಡೆದಿದೆ.

ಖಾನಾಪುರ ತಾಲೂಕಿನ ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ (33), ಕರೆಪ್ಪ ತಳವಾರ (36) ಮೃತಪಟ್ಟ ದುರ್ದೈವಿಗಳು. ಕಿತ್ತೂರು ಉತ್ಸವ ನೋಡಿ ವಾಪಸಾಗುತ್ತಿದ್ದವರ ಮೇಲೆ ಬೆಳಗಾವಿಯಿಂದ ಧಾರವಾಡದತ್ತ ಹೊರಟಿದ್ದ ಕಾರು ತಡರಾತ್ರಿ ಡಿಕ್ಕಿ ಹೊಡೆದಿದೆ.ರಸ್ತೆ ದಾಟುತ್ತಿದ್ದ ಇವರಿಬ್ಬರ ಮೇಲೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಧಾರವಾಡದ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

 

 

 

ಜಿಲ್ಲೆ

ರಾಜ್ಯ

error: Content is protected !!