Saturday, July 27, 2024

ರಾಷ್ಟ್ರಮಾತೆ ರಾಣಿ ಚನ್ನಮ್ಮನ ರಾಜ್ಯ ಮಟ್ಟದ ಕಿತ್ತೂರು ಉತ್ಸವಕ್ಕೆ ಅದ್ದೂರಿ ಚಾಲನೆ

ಚನ್ನಮ್ಮನ ಕಿತ್ತೂರು: ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಹೆಡೆಮುರಿ ಕಟ್ಟಿದ ವೀರ ಮಹಿಳೆ, ಸ್ವಾತಂತ್ರ ಸಂಗ್ರಾಮದ ಕಿಚ್ಚು ಹಚ್ಚಿದ ಪ್ರಥಮ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಪ್ರಥಮ ರಾಜ್ಯ ಮಟ್ಟದ ‘ಚನ್ನಮ್ಮನ ಕಿತ್ತೂರ ಉತ್ಸವ-2022’ಕ್ಕೆ ವೀರ ಜ್ಯೋತಿಯನ್ನು ಬರಮಾಡಿಕೊಳ್ಳುವ ಮೂಲಕ ಅದ್ಧೂರಿ ಚಾಲನೆ ನೀಡಲಾಯಿತು.

ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ: ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ ಅಶ್ವಾರೂಢ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಶಾಸಕರಾದ ಮಹಾಂತೇಶ ದೊಡಗೌಡರ, ಮಹಾಂತೇಶ ಕೌಜಲಗಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಗಳು ಹಾಗೂ ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ವಿಜಯಜ್ಯೋತಿಗೆ ಸ್ವಾಗತ ಹಾಗೂ ಸಂಸ್ಥಾನದ ಧ್ವಜಾರೋಹಣ: ಕಿತ್ತೂರಿನ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ  ವಿಜಯಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ದೊಡಗೌಡರ, ಮಹಾಂತೇಶ ಕೌಜಲಗಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಗಳು ಹಾಗೂ ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು ವೀರಜ್ಯೋತಿ ಸ್ವಾಗತಿಸಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ವೀರಜ್ಯೋತಿಯು ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ವರೆಗೆ ಸಂಚರಿಸಿತು.

ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ:ಕಿತ್ತೂರಿನ ಗಡಾದಿ ಮರಡಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ ನೆರವೇರಿಸಿದರು.

ಮೆರುಗು ಮೂಡಿಸಿದ ಕಲಾ ವಾಹಿನಿ, ರೂಪಕ ಮೆರವಣಿಗೆ:

ವೀರ ಜ್ಯೋತಿ ಕಿತ್ತೂರಿನ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ವಿವಿಧ ಕಲಾ ತಂಡಗಳು, ರೂಪಕಗಳಿಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಶಾಸಕ ಮಹಾಂತೇಶ ದೊಡಗೌಡರ ಸೇರಿದಂತೆ ಇತರ ಅಧಿಕಾರಿಗಳು ಜನಪ್ರತಿನಿಧಿಗಳು ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.

ವಿವಿಧ ತಾಲೂಕುಗಳ ಆಡಳಿತದಿಂದ ಕಿತ್ತೂರು ಚನ್ನಮ್ಮ, ಕಿತ್ತೂರು ಕೋಟೆ, ಗೊಮ್ಮಟೇಶ್ವರ, ಪಾರ್ವತಿ ಕಂದ, ಹಿಡಕಲ್ ಜಲಾಶಯ ಸೇರಿದಂತೆ ವಿವಿಧ ಸಾಂಸ್ಕೃತಿಕ ರೂಪಕಗಳು ಗಮನ ಸೆಳೆದವು. ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವೀರಗಾಸೆ, ಡೊಳ್ಳು ಕುಣಿತ, ದಟ್ಟಿ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಜನರನ್ನು ರಂಜಿಸಿದವು.

ತರಹೇವಾರಿ ವಸ್ತುಗಳ ಪ್ರದರ್ಶನ :

ಕಿತ್ತೂರಿನ ಎಂಪಿಎಂಸಿ ಪ್ರಾಂಗಣದಲ್ಲಿ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರ ಜನಪ್ರತಿನಿಧಿಗಳ ಸಮ್ಮುಖದಲ್ಲಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಕೃಷಿ, ದಿನಸಿ, ಜವಳಿ, ಖಾದ್ಯ, ಗೃಹೋಪಯೋಗಿ ವಸ್ತು, ಪದಾರ್ಥಗಳನ್ನು ಸುಮಾರು 120 ಮಳಿಗೆಗಳಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.

ಗಮನ ಸೆಳೆದ ಫಲ-ಪುಷ್ಪ ಪ್ರದರ್ಶನ:

ಕಿತ್ತೂರಿನ ಎಂಪಿಎಂಸಿ ಪ್ರಾಂಗಣದಲ್ಲಿ ಫಲ-ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಹೂವಿನಲ್ಲಿ ಅರಳಿದ ನಂದಿ, ಹಣ್ಣುಗಳಲ್ಲಿ ಅರಳಿದ ಅಪ್ಪು, ಬಸವಣ್ಣ, ಅಂಬೇಡ್ಕರ್, ಚನ್ನಮ್ಮ, ರಾಯಣ್ಣ ಹಾಗೂ ನಾಡಿನ ಹಲವು ಐತಿಹಾಸಿಕ ವ್ಯಕ್ತಿತ್ವಗಳ ಚಿತ್ರಗಳು ಜನರ ಗಮನ ಸೆಳೆದವು.

ಮುದ ನೀಡಿದ ಕ್ರೀಡೆ ಮತ್ತು ದೋಣಿ ವಿಹಾರ :

ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ತುಂಬುಗೆರೆಯಲ್ಲಿ ಕ್ರೀಡೆ ಹಾಗೂ ದೋಣಿ ವಿಹಾರವನ್ನು ಉದ್ಘಾಟಿಸಲಾಯಿತು. ಕ್ರೀಡಾತ್ಮಕವಾಗಿ ಉತ್ಸವವನ್ನು ವಿಜೃಂಭಿಸುವ ಸಲುವಾಗಿ ಕ್ರೀಡೆ ಮತ್ತು ದೋಣಿ ವಿಹಾರವನ್ನು ಆರಂಭಿಸಲಾಗಿದೆ.

ಶ್ವಾನ ಪ್ರದರ್ಶನ ಹಾಗೂ ಚುಚ್ಚು ಮದ್ದು:

ಪಶುಸಂಗೋಪನೆ ಇಲಾಖೆಯಿಂದ ಎಂಪಿಎಂಸಿ ಪ್ರಾಂಗಣದಲ್ಲಿ ಶ್ವಾನ ಪ್ರದರ್ಶನ ಹಾಗೂ ನಾಯಿಗಳಿಗೆ ಹುಚ್ಚು ನಿಯಂತ್ರಣ ಚುಚ್ಚು ಮದ್ದು ಹಾಕಿಸಲಾಯಿತು. ಬೆಳಗಾವಿ, ಖಾನಾಪೂ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಗಮನ ಸೆಳೆದ ಶ್ವಾನ ಪ್ರದರ್ಶನ:

ಉತ್ಸವದಲ್ಲಿ ತರಹೇವಾರಿ ವಸ್ತುಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಅಮೇರಿಕನ್, ಬುಲ್, ಚೌಚೌ, ಲ್ಯಾಬರ್ಡರ್, ಜರ್ಮನ್ ಶಫರ್ಡ್, ಪಗ್, ಮುಧೋಳ್ ಹಂಟ್ ಸೇರಿದಂತೆ ತರಹೇವಾರಿ 56 ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಶಾಸಕರಾದ ಮಹಾಂತೇಶ ದೊಡಗೌಡರ, ಮಹಾಂತೇಶ ಕೌಜಲಗಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಗಳು ಹಾಗೂ ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಜಿಪಂ ಸಿಇಒ ದರ್ಶನ ಹೆಚ್ ವಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ,ಕಿತ್ತೂರು ತಹಶೀಲ್ದಾರ ಸೋಮನಿಂಗಪ್ಪ  ಹಾಲಗಿ,ತಾ.ಪಂ ಅಧಿಕಾರಿ ಸುಭಾಷ ಸಂಪಗಾವಿ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!