Sunday, September 8, 2024

ಅನೈತಿಕ ಸಂಬಂಧ! ವಿಷ ಕುಡಿದು ಜೋಡಿ ಆತ್ಮಹತ್ಯೆ.

ರಾಮದುರ್ಗ: ತಾಲ್ಲೂಕಿನ ಕಂಕಣವಾಡಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಒಬ್ಬ ಪುರುಷ ಹಾಗೂ ಮಹಿಳೆಯ ಶವಗಳು ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿವೆ.

ಅಕ್ಟೋಬರ್‌ 6ರಂದು ಮನೆಯಿಂದ ‘ಜೊತೆಯಾಗಿ’ ಹೋದ ಇಬ್ಬರೂ ಮರಳಿ ಬಂದಿರಲಿಲ್ಲ. ಭಾನುವಾರ ರೈತರು ಕಬ್ಬಿನ ಗದ್ದೆಗೆ ಕೆಲಸಕ್ಕೆ ಹೋದಾಗ ಶವಗಳು ಕೊಳೆತ ವಾಸನೆ ಬಂದಿತು. ಸ್ಥಳಕ್ಕೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಂಕಣವಾಡಿಯ ಮಂಜುಳಾ ಮುತ್ತನಗೌಡ ಪಾಟೀಲ (33) ಹಾಗೂ ಉಮೇಶ ಶಿವಪ್ಪ ಹಣಮನೇರ (23) ಸಾವಿಗೀಡಾದವರು.

ಪೊಲೀಸರ ಮಾಹಿತಿ ಏನು?:

ಉಮೇಶ ಹಾಗೂ ಮಂಜುಳಾ ಮಧ್ಯೆ 10 ವರ್ಷಗಳ ಅಂತರವಿದೆ. ಇಬ್ಬರಿಗೂ ಬೇರೆಬೇರೆ ಕಡೆ ಮದುವೆಯಾದ ಬಳಿಕವೂ ‘ಪ್ರೇಮ ಸಂಬಂಧ’ ಬೆಳೆಸಿಕೊಂಡಿದ್ದರು. ಮಂಜುಳಾ ಅವರಿಗೆ ಪತಿ, 13 ವರ್ಷದ ಪುತ್ರಿ ಹಾಗೂ 9 ವರ್ಷ ವಯಸ್ಸಿನ ಪುತ್ರ ಇದ್ದಾರೆ. ಉಮೇಶನಿಗೂ ಕಳೆದ ವರ್ಷ ಮದುವೆಯಾಗಿದ್ದು, ಪತ್ನಿ ತುಂಬು ಗರ್ಭಿಣಿಯಾಗಿದ್ದಾರೆ.

‘ಟಂಟಂ ಓಡಿಸುತ್ತಿದ್ದ ಉಮೇಶ ಹಾಗೂ ಮಂಜುಳಾ ಮಧ್ಯೆ ಕೆಲ ವರ್ಷಗಳಿಂದ ಸಲುಗೆ ಬೆಳೆದಿತ್ತು. ಈ ವಿಷಯ ಎರಡೂ ಕಡೆಯ ಮನೆಯವರಿಗೆ ಗೊತ್ತಾಗಿ, ಬುದ್ಧಿಮಾತು ಹೇಳಿದ್ದರು. ತಮ್ಮ ಸಂಬಂಧ ಬಯಲಾಯಿತು ಎಂದು ಮನನೊಂದು ಇಬ್ಬರೂ ಜೊತೆಗೂಡಿ ಮನೆ ಬಿಟ್ಟು ಹೋಗಿದ್ದರು. ಗ್ರಾಮದ ಹೊರವಲಯದ ಬಾಳಪ್ಪ ಮನಿಹಾಳ ಎನ್ನುವವರ ಕಬ್ಬಿನ ಗದ್ದೆಯಲ್ಲಿ ವಿಷ ಕುಡಿದು ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಇದು ಅನೈತಿಕ ಸಂಬಂಧದ ಕಾರಣ ನಡೆದ ಜೋಡಿ ಆತ್ಮಹತ್ಯೆ ಎಂಬ ಸಂಶಯ ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.ಕಟಕೋಳ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.

 

 

 

 

(PV)

ಜಿಲ್ಲೆ

ರಾಜ್ಯ

error: Content is protected !!