Monday, April 15, 2024

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ:73 ಇನ್ಸ್​ಪೆಕ್ಟರ್​ಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ 73 ಇನ್ಸ್​ಪೆಕ್ಟರ್​ (ಸಿವಿಲ್) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಯಾವುದೇ ಕಾಲಾವಕಾಶ ಪಡೆದುಕೊಳ್ಳದೇ ವರ್ಗಾಯಿಸಿದ ಸ್ಥಳಕ್ಕೆ ಕೂಡಲೇ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ. ಪೊಲೀಸ್ ಇನ್ಸ್​ಪೆಕ್ಟರ್​ ಎಸ್. ರಾಜು ಅವರನ್ನು ಕರ್ನಾಟಕ ಲೋಕಾಯುಕ್ತಗೆ ವರ್ಗಾವಣೆ ಮಾಡಲಾಗಿದೆ.
ಎಸ್ ಚಂದನ್ ಕುಮಾರ್​ ಅವರನ್ನು ಸಿಐಡಿಗೆ, ಡಾ. ಬಿ. ದೇವರಾಜ್​​ರನ್ನು ಐ.ಎಸ್.ಡಿಗೆ ಹಾಗೂ ವಿ ಲಕ್ಷ್ಮಯ್ಯ ಸೇರಿದಂತೆ ಇನ್ನೂ ಅನೇಕರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಳಿಸಿ ಆದೇಶಿಸಿದೆ.

ಜಿಲ್ಲೆ

ರಾಜ್ಯ

error: Content is protected !!