Saturday, July 27, 2024

ಪೋಲಿಸರ ನಿರ್ಲಕ್ಷ್ಯದಿಂದ ಹಿರೇಬಾಗೇವಾಡಿಯಲ್ಲಿ ಕಿಡಿಗೇಡಿಗಳ ಕಾಟ!

ಬೆಳಗಾವಿ:  ಸಮೀಪದ ಹಿರೇಬಾಗೇವಾಡಿ ಗ್ರಾಮದಲ್ಲಿ ನಿಲ್ಲಿಸಿದ್ದ ಮೂರು ಕಾರುಗಳ ಗಾಜು ಒಡೆದು ಸಿಸಿ ಕ್ಯಾಮರಾ  ಕಿತ್ತುಕೊಂಡು ಹೋದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಹಿರೇಬಾಗೇವಾಡಿ  ಪೊಲೀಸ್ ಠಾಣೆ ಸಮೀಪದ  ಬಸವನಗರದ ಪಿಕೆಪಿಎಸ್ ಸಂಘದ ಆವರಣದಲ್ಲಿ ಎಂದಿನಂತೆ ನಿಲ್ಲಿಸಲಾಗಿದ್ದ ಎರಡು ಕಾರು ಹಾಗೂ ಪಕ್ಕದ ಓಣಿಯಲ್ಲಿರುವ ಡಾ ಸಿ.ಎನ್.ಕೃಷ್ಣರಾವ ಅವರ ಮನೆ ಆವರಣದಲ್ಲಿ ನಿಲ್ಲಿಸಿದ್ದ ಒಂದು ಕಾರಿನ ಹಿಂಬದಿ  ಗಾಜನ್ನು  ಯಾರೂ ಕಿಡಿಗೇಡಿಗಳು ಕಲ್ಲು ಎಸೆದು ಒಡೆದಿದ್ದಾರೆ. ಬ್ಯಾಂಕಿನ ಹೊರಗಡೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾವನ್ನು ಕಿತ್ತುಕೊಂಡು  ಹೋಗಿದ್ದಾರೆ. ಸ್ಥಳೀಯ ಪೊಲೀಸರು ಪರಿಶೀಲಿಸಿಲನೆ ನಡೆಸಿ, ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಆದರೆ ಸುಮಾರು ಒಂದು ವಾರದಿಂದ ಹಿರೇಬಾಗೇವಾಡಿ- ಬೈಲಹೊಂಗಲ ರಸ್ತೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ಕಿಡಿಗೇಡಿಗಳು ಈ ರೀತಿ ಹಾನಿಗೊಳ್ಳಿಸಿದ್ದಾರೆ ಎನ್ನಲಾಗುತ್ತಿದೆ. ಎರಡು ದಿನ ಕಳೆದರೂ ಆ ಕಿಡಿಗೇಡಿಗಳನ್ನು ಪೋಲಿಸರು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ ಎನ್ನಬಹುದು.

ಅಲ್ಲದೇ, ಬಸವೇಶ್ವರ ಸರ್ಕಲ್ ನಲ್ಲಿ  ಪೋಲಿಸ್ ಇಲಾಖೆ ಅವರು ಅಳವಡಿಸಿದ ಸಿಸಿ ಕ್ಯಾಮೆರಾ ಕೊಡ ಸುಮಾರು ದಿನಗಳಿಂದ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವಂತೆ. ಇಂತಹ ಪರಿಸ್ಥಿತಿಯಲ್ಲಿ  ಹಿರೇಬಾಗೇವಾಡಿ ಪೋಲೀಸರು ಕೂಡ ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಇನ್ನೂ  ಪೋಲಿಸ್ ಇಲಾಖೆಯ ಅಧಿಕಾರಿಗಳು ಕೊಡ ತಮ್ಮ ಕಾರ್ಯ ಕ್ಷೇತ್ರ ಬಿಟ್ಟು ಬೇರೆಡೆ ವಾಸ ಇರುವುದರಿಂದ  ಈ  ರೀತಿ ದುಷ್ಕರ್ಮಿಗಳು ಅಟ್ಟಹಾಸ ಮರೆಯುತ್ತಿದ್ದಾರೆ.ಇನ್ನಾದರೂ ಎಚ್ಚೆತ್ತುಕೊಂಡು ಇಲಾಖೆ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುವರೇ ಎಂದು ಕಾದುನೋಡಬೇಕಾಗಿದೆ.

ಜಿಲ್ಲೆ

ರಾಜ್ಯ

error: Content is protected !!