Saturday, July 27, 2024

ಎಎಪಿ ಬಿಡುವಂತೆ ಸಿಬಿಐ ಕಚೇರಿಯಲ್ಲಿ ಒತ್ತಡ:ಮನೀಶ್ ಸಿಸೋಡಿಯಾ

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ, ಉದ್ಯಮಿ ವಿಜಯ್ ನಾಯರ್ ಸೇರಿದಂತೆ ಇತರ ಆರೋಪಿಗಳೊಂದಿಗಿನ ಅವರ ಸಂಬಂಧಗಳು ಮತ್ತು ಪ್ರಕರಣದ ಶೋಧದ ವೇಳೆ ಪತ್ತೆಯಾದ ದಾಖಲೆಗಳ ವಿವಿಧ ಅಂಶಗಳ ಮೇಲೆ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್  ಸಿಸೋಡಿಯಾ ಅವರನ್ನು ಸೋಮವಾರ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. 

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮನೀಶ್ ಸಿಸೋಡಿಯಾ.  ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹಗರಣದ ಸಮಸ್ಯೆ ಇಲ್ಲದಿರುವುದನ್ನು ಸಿಬಿಐ ಕಚೇರಿಯಲ್ಲಿ ನೋಡಿದ್ದೇನೆ. ಇಡೀ ಕೇಸ್ ನಕಲಿಯಾಗಿದೆ. ನನ್ನ ವಿರುದ್ದ ಯಾವುದೇ ಹಗರಣ ಇಲ್ಲದಿರುವುದು 9 ಗಂಟೆಗಳ ವಿಚಾರಣೆಯಿಂದ ಅರ್ಥವಾಯಿತು ಆದರೆ, ಇದು ದೆಹಲಿಯಲ್ಲಿ ಆಪರೇಷನ್ ಕಮಲ ಯಶಸ್ವಿಗೊಳಿಸುವ ಪ್ರಯತ್ನವಾಗಿದೆ ಎಂದರು. 

ಎಎಪಿಯಿಂದ ಹೊರ ಹೋಗು, ಇಲ್ಲವಾದರೆ ನನ್ನ ವಿರುದ್ಧ ಕೇಸ್ ದಾಖಲಿಸುವುದಾಗಿ ಸಿಬಿಐ ಕಚೇರಿಯಲ್ಲಿ ಹೇಳಲಾಯಿತು. ಆದರೆ ಬಿಜೆಪಿಗಾಗಿ ಎಎಪಿ ತೊರೆಯುವುದಿಲ್ಲ ಎಂದು ಹೇಳಿದೆ. ನನ್ನನ್ನು ಸಿಎಂ ಮಾಡುವುದಾಗಿ ಅವರು ಹೇಳಿದರು ಎಂದು ಸಿಸೋಡಿಯಾ ಆರೋಪಿಸಿದರು. ಸಿಸೋಡಿಯಾ ನೀಡಿರುವ ಉತ್ತರಗಳನ್ನು ಸಿಬಿಐ ಪರಿಶೀಲಿಸಲಿದೆ ಒಂದು ವೇಳೆ ಅಗತ್ಯವಿದ್ದರೆ ಮತ್ತೆ ಸಮನ್ಸ್ ನೀಡಲಾಗುವುದು, ನಾಳೆ ಯಾವುದೇ ಸಮನ್ಸ್ ನೀಡಿಲ್ಲ ಎಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ 11.10ರ ಸುಮಾರಿಗೆ ಸಿಸೋಡಿಯಾ ದೆಹಲಿಯ ಸಿಬಿಐ ಕಚೇರಿಗೆ ಆಗಮಿಸಿದರು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸೋಡಿಯಾ ಅವರಿಗೆ ಸಿಬಿಐ ಸಮನ್ಸ್ ನೀಡಿತ್ತು. ವೃತ್ತಿಯಲ್ಲಿ ವಕೀಲರೂ ಆಗಿರುವ ಎಎಪಿ ನಾಯಕ ಸೋಮನಾಥ್ ಭಾರ್ತಿ ಅವರೊಂದಿಗೆ ಸಿಸೋಡಿಯಾ ಸಿಬಿಐ ಕಚೇರಿಗೆ ಆಗಮಿಸಿದರು.

 

 

 

 

ಕೃಪೆ:ಕನ್ನಡಪ್ರಭ

ಜಿಲ್ಲೆ

ರಾಜ್ಯ

error: Content is protected !!