Saturday, July 27, 2024

ಮುಂದಿನ ತಿಂಗಳು ಕರ್ನಾಟಕಕ್ಕೂ ‘ವಂದೇ ಭಾರತ್’ ರೈಲು

ನವದೆಹಲಿ: ಕರ್ನಾಟಕಕ್ಕೂ ವಂದೇ ಭಾರತ್ ರೈಲು  ಬರಲಿದ್ದು, ಮುಂದಿನ ನವೆಂಬರ್ ತಿಂಗಳಿನಿಂದ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಸಂಚರಿಸಲಿದೆ.

ದೆಹಲಿ – ಉನಾ ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸರಣಿಯ 4ನೇ ರೈಲಿಗೆ ಪ್ರಧಾನಿ ಮೋದಿ  ಹಿಮಾಚಲ ಪ್ರದೇಶದಲ್ಲಿ ಗುರುವಾರ ಚಾಲನೆ ನೀಡಿದ್ದಾರೆ. ಇದರೊಂದಿಗೆ ನವೆಂಬರ್ 10 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್‌  5ನೇ ರೈಲು ಚಾಲನೆಗೊಳ್ಳಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 4ನೇ ವಂದೇ ಭಾರತ್ ಸೆಮಿ ಹೈಸ್ಪೀಡ್  ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಇದು ಬುಧವಾರ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳಲ್ಲೂ ಸಂಚರಿಸಲಿದೆ. ಮೊದಲ ಮೂರು ರೈಲಿಗಿಂತಲೂ ಗುಣಮಟ್ಟದ್ದಾಗಿದ್ದು, ಉನಾದಿಂದ ದೆಹಲಿಯ ನಡುವೆ 2 ಗಂಟೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ.

ಫೆಬ್ರುವರಿ 15, 2019ರಂದು ದೇಶದ ಮೊಟ್ಟ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ನವದೆಹಲಿ – ಕಾನ್ಪುರ – ಅಲಹಾಬಾದ್ – ವಾರಣಾಸಿ ಮಾರ್ಗದಲ್ಲಿ ಈ ರೈಲು ಸಂಚರಿಸುತ್ತಿದೆ. 2ನೇ ರೈಲು ದೆಹಲಿಯಿಂದ ವಾರಣಾಸಿಗೆ ಸಂಚರಿಸುತ್ತಿದೆ.

 ವಿಶೇಷತೆ?
ಎಲ್ಲಾ ಕೋಚ್‌ಗಳಲ್ಲೂ ಆಟೋ ಮ್ಯಾಟಿಕ್ ಡೋರ್‌ಗಳು ಇರುತ್ತವೆ. ಜಿಪಿಎಸ್  ಆಧಾರಿತ ಆಡಿಯೋ ವಿಶ್ಯುಯಲ್ಸ್ ಪ್ರಯಾಣಿಕ ಮಾಹಿತಿ ವ್ಯವಸ್ಥೆ ಇರುತ್ತದೆ. ಉಚಿತ ವೈಫೈ ವ್ಯವಸ್ಥೆ ಇರುತ್ತದೆ. ಸೀಟ್‌ಗಳು ಆರಾಮದಾಯವಾಗಿ ಇರುತ್ತವೆ. ಟಾಯ್ಲೆಟ್‌ಗಳು ಬಯೋ ವ್ಯಾಕ್ಯೂಮ್ ತಂತ್ರಜ್ಞಾನ ಆಧಾರಿತವಾಗಿರುತ್ತವೆ. ಪ್ರತಿ ಸೀಟ್‌ಗೂ ಪ್ರತ್ಯೇಕ ಲೈಟ್ ವ್ಯವಸ್ಥೆ ಇರುತ್ತದೆ.

ಪ್ರಯಾಣಿಕರಿಗೆ ಬಿಸಿ-ಬಿಸಿ ಆಹಾರ  ವಿತರಣೆ ಮಾಡಲಾಗುತ್ತದೆ. ಬಿಸಿ ಹಾಗೂ ತಂಪು ಪಾನೀಯಗಳು ಲಭ್ಯವಾಗುತ್ತವೆ. ರೈಲು ಸಾಗುವಾಗ ಪ್ರಯಾಣಿಕರಿಗೆ ಹೆಚ್ಚಿನ ಶಬ್ಧ ಕೇಳಿ ಬರೋದಿಲ್ಲ. ಪ್ರತಿಯೊಂದು ವಂದೇ ಭಾರತ್ ರೈಲಿನಲ್ಲಿ 1,128 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಂದೇ ಭಾರತ್ ರೈಲಿನಲ್ಲಿ ಅಪಘಾತ ತಡೆ ವ್ಯವಸ್ಥೆಗೆ ತುಂಬಾನೇ ಸುಧಾರಿತ ತಂತ್ರಜ್ಞಾನ ಬಳಸಲಾಗಿದೆ.

ಪ್ರತಿ ಕೋಚ್‌ನಲ್ಲೂ ತುರ್ತು ನಿರ್ಗಮನ ಕಿಟಕಿ, ಸಿಸಿಟಿವಿ  ಕ್ಯಾಮರಾ ಇರುತ್ತದೆ. ಅಗ್ನಿ ಅನಾಹುತ ತಡೆಯುವ ವ್ಯವಸ್ಥೆ ಕೂಡಾ ಇದೆ.

 

 

 

 

(Btv)

ಜಿಲ್ಲೆ

ರಾಜ್ಯ

error: Content is protected !!