Sunday, September 8, 2024

ಹೊಸೂರ ಗ್ರಾಮದ ಯುವ ರೈತ ಸಾಲ ಬಾಧೆಯಿಂದ ಆತ್ಮಹತ್ಯೆ :

ಬೆಳಗಾವಿ: ಸಾಲಬಾಧೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಿನ್ನೆ (ಮಂಗಳವಾರ) ರಾತ್ರಿ ಬೆಳಗಾವಿಯಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಯುವ ರೈತ ರಾಜಶೇಖರ ಫಕೀರಪ್ಪ ಬೋಳೆತ್ತಿನ (34) ಆತ್ಮಹತ್ಯೆಗೆ ಶರಣಾದ ರೈತ ಎಂದು ಗುರುತಿಸಲಾಗಿದೆ. ಕೃಷಿ ಉದ್ದೇಶಕ್ಕಾಗಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದನು.ಸಕಾಲದಲ್ಲಿ ಸಾಲ ತಿರಿಸಲಾಗದೆ ಬೆಳಗಾವಿಯ ವಿನಾಯಕ ನಗರದ ಬಾಡಿಗೆ ಮನೆಯಲ್ಲಿ ಮಂಗಳವಾರ ತನ್ನ ಒಂದು ವರ್ಷದ ಮಗುವಿಗೆ ಕಟ್ಟಿದ್ದ ಜೋಳಿಗೆಗೆ ನೇಣು ಹಾಕಿಕೊಂಡು ದಾರುಣ್ಯ ಸಾವು ಕಂಡಿದ್ದಾನೆ.

ಹೊಸೂರ ಗ್ರಾಮದಲ್ಲಿ ತನ್ನ ತಂದೆಯ‌ ಹೆಸರಿನಲಿದ್ದ ಜಮಿನಿನಲ್ಲಿ ಕೃಷಿ ಮಾಡಿಕೊಂಡಿದ್ದ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಮತ್ತು ಈ ವರ್ಷದ ವಿಪರೀತ ಮಳೆಯಿಂದ ಜಮೀನದಲ್ಲಿಯ ಸೋಯಾಬಿನ್ ಬೆಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ತಂದೆಯ ಹೆಸರಿನಲ್ಲಿ ಕೈಗಡ, ಬ್ಯಾಂಕ್ ಮತ್ತು ಇದ್ದ ಜಮೀನಿನಲ್ಲಿ ಕೆಲ ಭಾಗ ಬೇರೆಯವರಿಗೆ ಗಿರವಿ ಇಟ್ಟು ಲಕ್ಷಾಂತರ ರೂಪಾಯಿ ಸಾಲ ಮಾಡಿದ ಸಾಲಬಾದೆಗೆ ಹೆದರಿ ತನ್ನ ಮಗನ ಪ್ರಥಮ ಹುಟ್ಟುಹಬ್ಬ ಆಚರಿಸಿ ಮರುದಿನವೆ ಪುಟ್ಟಾಣಿ ಮಕ್ಕಳು ಹಾಗೂ ಹೆಂಡತಿಗೆ ಊರಿಗೆ ತೆರಳುವಂತೆ ಬೆದರಿಸಿ ತಾನು ನೇಣಿಗೆ ಶರಣಾಗಿರುವದು ಅತ್ಯಂತ‌ ದುಃಖದ ಸಂಗತಿಯಾಗಿದೆ.

ಮೃತ ರೈತನ ತಾಯಿ, ತಂದೆ, ಪತ್ನಿ, ಇಬ್ಬರು ಮಕ್ಕಳು, ಸಹೋದರಿಯರು ಹಾಗೂ ಸಂಬಂಧಿಗಳ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಬೆಳಗಾವಿ ಕ್ಯಾಂಪ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆ

ರಾಜ್ಯ

error: Content is protected !!