Thursday, July 25, 2024

ಕಿತ್ತೂರ ಇತಿಹಾಸದಲ್ಲಿ ಅಮರ ಪ್ರೇಮಕಾವ್ಯ “ನಿರಂಜನಿ”

ಕಿತ್ತೂರಿನ 5ನೇ ದೊರೆಯಾಗಿ ಶಿವನಗೌಡ ಸರ್ದೇಸಾಯಿ 1717 ರಿಂದ 1734 ರವರೆಗೆ ಆಳ್ವಿಕೆ ಮಾಡಿದ. ಈತ ಔರಂಗಜೇಬನಿಂದ ಹಲವು ಬಿರುದುಗಳನ್ನು ಪಡೆದಿದ್ದನು.

ಈತನ ನಂತರ ಕಿತ್ತೂರು ಸಂಸ್ತಾನದಲ್ಲಿ ಅತಿರಂಜನಿಯ ವ್ಯಕ್ತಿತ್ವದ ಮಾಳವ ರುದ್ರಗೌಡ 1734 ರಿಂದ 1749 ರವರೆಗೆ ರಾಜ್ಯಭಾರ ಮಾಡಿದನು.ಈತನ ಪತ್ನಿ ರಾಣಿ ಮಲ್ಲಮ್ಮ ಮಹಾನ ಧ್ಯರ್ಯಶಾಲಿಯಾಗಿದ್ದಳು.ರಾಜ್ಯದ ಎಲ್ಲ ವಿಷಯಗಳಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿರುವ ಅಂಶಗಳು ಕಂಡುಬರುತ್ತವೆ.

ಮಾಳವ ರುದ್ರಗೌಡ ಉತ್ತರಭಾರತದ ವಿದ್ಯಾಭ್ಯಾಸಕ್ಕೆ ಹೋದಾಗ ಅಲ್ಲಿನ ನಿರಂಜನಿ ಎಂಬ ತರುಣಿಯನ್ನು‌ ಪ್ರೇಮಿಸಿ ವಿವಾಹ ಆಗುತ್ತಾನೆ.

ಅವರ ಪ್ರೇಮದ ವಿಷಯ ಅನೇಕ ಕವಿಗಳ ಕಾವ್ಯದ ವಸ್ತುವಾಯಿತು.ಮಾಳವ ರುದ್ರಗೌಡ ನಿರಂಜನಿಯನ್ನು ಮದುವೆ ಯಾಗುವುದನ್ನು ಆತನ ಸಹೋದರ ಮಲ್ಲಪ್ಪಗೌಡ ದೇಸಾಯಿ ವೀರೊದಿಸಿದನು.
ಆ ಕಾರಣಕ್ಕಾಗಿ ಮಲ್ಲಪ್ಪಗೌಡ ದೇಸಾಯಿಯನ್ನು ಮಾಳವ ರುದ್ರಸರ್ಜನು ಕೊಲೆ ಮಾಡಿಸಿದ್ದ.

ಆತ ತೀವ್ರತರವಾಗಿ ವಿರೋಧಿಸಿದ ಕಾರಣ ನಿರಂಜನಿ ಗಾಗಿಯೇ ಸಂಸ್ಥಾನದ ಉತ್ತರಭಾಗದ ದೇಶನೂರ ನಲ್ಲಿ ಮಹಲ್ ಒಂದನ್ನು ಕಟ್ಟಿಸಿದ. ಅದು ನಿರಂಜನಿ ಮಹಲ್ ಎಂದೇ ಇವತ್ತಿಗೂ ಸಹಿತ ಪ್ರಸಿದ್ಧವಾಗಿದೆ .

ಮಾಳವ ರುದ್ರಸರ್ಜ ಹೆಚ್ಚಿನ ಸಮಯವನ್ನು ನಿರಂಜನಿಯೊಂದಿಗೆ ದೇಶನೂರಿನ ನಿರಂಜನಿ ಮಹಲಿನಲ್ಲಿ ಕಳೆದಿರುವುದಾಗಿ ಇತಿಹಾಸಕಾರರು ಹೇಳುತ್ತಾರೆ .ಹಾಗಾಗಿ ಆಡಳಿತ ಭಾರವನ್ನು ಮಾಡುವ ಜವಾಬ್ದಾರಿ ಮಾಳವ ರುದ್ರಸರ್ಜನ ಪಟ್ಟದ ರಾಣಿಯಾಗಿರುವ ಮಲ್ಲಮ್ಮನೇ ನಿರ್ವಹಿಸುತ್ತಿದ್ದರು.

ಮಾಳವ ರುದ್ರಸರ್ಜನು ದೇಶನೂರಲ್ಲಿ ಬಲಿಷ್ಠವಾದ ಕೋಟೆಯನ್ನು ಕಟ್ಟಿಸಿದನು. ಅದನ್ನು ರುದ್ರಸರ್ಜನ ನೆನಪಿಗಾಗಿ ರುದ್ರಗಡ ಎಂದು ಕರೆಯಲಾಗುತ್ತದೆ.

1746 ರಲ್ಲಿ ಸವಣೂರಿನ ನವಾಬನು ಉಳಿದ ಭಾಗಗಳೂಂದಿಗೆ ಕಿತ್ತೂರನ್ನು ಪುಣೆಯ ಪೇಶ್ವೆಗಳಿಗೆ ಬಿಟ್ಟುಕೊಡಬೇಕಾಯಿತು. ಆದಕಾರಣ ಅಂದಿನಿಂದ ಕಿತ್ತೂರಿನ ರಾಜರು ಬಿಜಾಪುರದ ಸುಲ್ತಾನರಿಂದ ಮುಕ್ತರಾಗಿ ಪೇಶ್ವೆಗಳ ಆದಿನಕ್ಕೆ ಒಳಪಟ್ಟರು.

ಮಾಳವ ರುದ್ರಸರ್ಜನಿಗೆ ಗಂಡು ಸಂತಾನವಿಲ್ಲದ ಕಾರಣ ತನ್ನ ನಂತರ ಆಡಳಿತಕ್ಕೆ ಯಾರು ಬರಬೇಕು ಎಂಬ ಚಿಂತೆ ಕಾಡಲು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ತನ್ನ ಸಹೋದರ ಮೃತ ಮಲ್ಲಪ್ಪ ದೇಸಾಯಿ ಮಗನಾಗಿರುವ ವೀರಪ್ಪಗೌಡನನ್ನು ದತ್ತಕ ತೆಗೆದುಕೊಳ್ಳುವ ವಿಚಾರ ಮಾಡಿದನು.

ವೀರಪ್ಪಗೌಡನ ತಾಯಿಯಾಗಿರುವ ಮತ್ತು ಮಲ್ಲಪ್ಪ ದೇಸಾಯಿಯ ಪತ್ನಿ ತನ್ನ ಪತಿಯನ್ನು ಕೊಲ್ಲಿಸಿದ ಮಾಳವ ರುದ್ರಸರ್ಜ ತನ್ನ ಮಗನನ್ನು ಕೊಲ್ಲಬಹುದೆಂದು ಆತಂಕದಿಂದ ತಪ್ಪಿಸಿಕೊಂಡು ಊರೂರು ಅಲೆದು ಕೆಲ ಕಾಲ ಉಪ್ಪಿನ ಬೆಟಿಗೇರಿಯ ವ್ಯಾಪಾರಸ್ಥರ ಮನೆಯಲ್ಲಿ ತನ್ನ ಮಗನೊಂದಿಗೆ ಇರುತ್ತಾಳೆ.
ಈ ವಿಷಯ ತಿಳಿದು ನಂತರ ಮಾಳವ ರುದ್ರಸರ್ಜನೇ ಮೃತ ಮಲ್ಲಪ್ಪ ದೇಸಾಯಿಯ ಪತ್ನಿ ಇರುವಲ್ಲಿಗೆ ಹೋಗಿ ತನ್ನ ಮನಸಿನಲ್ಲಿ ಇರುವ ವಿಷಯ (ಅಂದರೆ ವೀರಪ್ಪಗೌಡನನ್ನು ದತ್ತಕ ತೆಗೆದುಕೊಳ್ಳುವ ವಿಚಾರ) ತಿಳಿಸಿ ಅವರನ್ನು ಕಿತ್ತೂರಗೆ ಕರೆದುಕೊಂಡು ಬಂದು ವೀರಪ್ಪಗೌಡನಿಗೆ ಕಿತ್ತೂರು ಸಂಸ್ಥಾನಕ್ಕೆ ಪಟ್ಟಕಟ್ಟಿ ನೆಮ್ಮದಿಯ ನಿಟ್ಟುಸಿರು ಬೀಡುತ್ತಾನೆ.

ಲೇಖನ: ಮಹೇಶ ನೀಲಕಂಠ ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
9740313820.

ಜಿಲ್ಲೆ

ರಾಜ್ಯ

error: Content is protected !!