Monday, April 15, 2024

ಮದುಮಗನಿಗೆ ಮುತ್ತಿಟ್ಟ ನಾದನಿ! ವದುವಿನ ಶಾಕಿಂಗ್ ಪ್ರತಿಕ್ರಿಯೆ.ವೀಡಿಯೋ ನೋಡಿ

ಭಾರತದಲ್ಲಿ ಮದುವೆಗೆ ವಿಶೇಷ ಪ್ರಾಶಸ್ತ್ಯವಿದೆ. ಮದುವೆಗೂ ಮುನ್ನ ಅನೇಕ ಶಾಸ್ತ್ರಗಳು ನಡೆಯುತ್ತವೆ. ಮದುವೆ ಸಮಾರಂಭದ ಶಾಸ್ತ್ರಗಳು ಸ್ಥಳದಿಂದ ಸ್ಥಳಕ್ಕೆ, ಜಾತಿಯಿಂದ ಜಾತಿಗೆ, ಧರ್ಮದಿಂದ ಧರ್ಮಕ್ಕೆ ಭಿನ್ನವಾಗಿರುತ್ತದೆ.

ಕೆಲವೊಂದು ಕಡೆಗಳಲ್ಲಿ ಮದುವೆ ಶಾಸ್ತ್ರಗಳು ಒಂದು ವಾರದವರೆಗೂ ನಡೆಯುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಒಂದೇ ದಿನಕ್ಕೆ ಎಲ್ಲವೂ ಮುಗಿದು ಬಿಡುತ್ತದೆ. ಮದುವೆಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇವೆ. ಇತ್ತೀಚೆಗಷ್ಟೇ ಇಂತಹ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಮದುವೆಯ ವೇದಿಕೆಯಲ್ಲಿ ಕುಳಿತಿದ್ದ ವರನಿಗೆ, ನಾದಿನಿ ಎಲ್ಲರೆದುರೇ ಮುತ್ತಿಕ್ಕಿರುವ ದೃಶ್ಯ ಭಾರೀ ಸದ್ದು ಮಾಡಿದೆ.

ಈ ವಿಡಿಯೋ ನೋಡುವಾಗ, ಇಲ್ಲಿ ಫೋಟೋ ಸೆಷನ್ ನಡೆಯುತ್ತಿರುವಂತೆ ಕಾಣುತ್ತದೆ. ವಧು ವರನ ಪಕ್ಕದಲ್ಲಿ ಕುಳಿತಿರುವ ನಾದಿನಿ, ಫೋಟೋಗೆ ಪೋಸ್ ನೀಡುತ್ತಿದ್ದಾಳೆ. ಆದರೆ ಇದ್ದಕ್ಕಿದ್ದಂತೆ ಅದೇನಾಗುತ್ತದೆಯೋ, ವರನಿಗೆ ಚುಂಬಿಸಲು ಮುಂದಾಗುತ್ತಾಳೆ. ನಾದಿನಿಯ ಈ ಕೆಲಸದಿಂದ ತಬ್ಬಿಬ್ಬಾದ ವರ ನಾದಿನಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

ವರ ಕ್ಯಾಮೆರಾವನ್ನು ನೋಡುತ್ತಾ ಮದುವೆ ಪೋಟೋಗಳಿಗೆ ಪೋಸ್ ನೀಡುತ್ತಿರುವಾಗ, ನಾದಿನಿ ಈ ರೀತಿ ಇದ್ದಕ್ಕಿದ್ದಂತೆ ಬಲವಂತವಾಗಿ ಚುಂಬಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವರ ಕೂಡಾ ಈ ವರ್ತನೆಯಿಂದ ತೀರಾ ಮುಜುಗರಕ್ಕೊಳಗಾಗುತ್ತಾನೆ. ಅತಿಥಿಗಳು ಮತ್ತು ವಧು ಕೂಡಾ ಈ ದೃಶ್ಯವನ್ನು ನೋಡಿ ಬೆಕ್ಕಸ ಬೆರಗಾಗಿ ಹೋಗುತ್ತಾರೆ.

ಈ ವೀಡಿಯೊವನ್ನು Instagram ನಲ್ಲಿ ‘butterfly__mahi’ ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಇದುವರೆಗೆ ಸಾವಿರಾರು ಜನ ವೀಕ್ಷಿಸಿದ್ದಾರೆ.

 

 

 

 

 

 

 

ಕೃಪೆ:(Zeetv)

ಜಿಲ್ಲೆ

ರಾಜ್ಯ

error: Content is protected !!