Tuesday, September 17, 2024

ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನು ಅಲ್ಲಾಡಿಸಿ,ಸ್ವತಂತ್ರ ತಂದುಕೊಟ್ಟವ ಮಹಾತ್ಮ ಗಾಂಧಿ

ಲೇಖಕರು: ಮಲ್ಲೇಶ ಹು ಹಳಕಟ್ಟಿ 

ಸುದ್ದಿ ಸದ್ದು ನ್ಯೂಸ್ : ಗಾಂಧೀಜಿ ಕಂಡ ಗ್ರಾಮಸ್ವರಾಜ ಸ್ವದೇಶಿ ವಸ್ತು ಬಳಕೆಯ ವಿಚಾರಗಳ ಮುಂದೆ ಇವತ್ತು ಹೇಳುವ ಸ್ವದೇಶಿ ಮಾತಿನ ಮುಖವಾಡಗಳು.

ಇವತ್ತು ನಾವುಗಳು ರಾಜಕೀಯ ವ್ಯಕ್ತಿಗಳ ಭಾಷಣಗಳಲ್ಲಿ ವಿದೇಶಿ ವಸ್ತು ಬಳಸಬಾರದು ಸ್ವದೇಶೀ ಮಂತ್ರ ಚುನಾವಣಾ ಸಮಯದಲ್ಲಿ ಮಾತ್ರ ಅಂದರೆ ಮುಖವಾಡದ ಬಹಿಷ್ಕಾರ ಇವತ್ತು ಇವರುಗಳು ವಿದೇಶಿ ವಸ್ತುಗಳ ಬಳಕೆಯ ದಾರಿಯನ್ನ ಎಷ್ಟೊ ದೂರ ಕ್ರಮಿಸಿದ್ದೆವಿ ಎಂದರೆ ಮರಳಿ ಬಾರದಷ್ಟು. ಆದರು ಸ್ವದೇಶಿ ವಸ್ತು ಬಳಸುವರು ಉಳದಿದ್ದಾರೆ ಅಂದರೆ ಅವರು ಗಾಂಧಿವಾದಿಗಳು ಮಾತ್ರ ಲೋಹಿಯಾ ವಾದಿ ಮಾತ್ರ ಅನ್ನಬಹುದೇನೊ ಅಪರೂಪ ಅಂತಾಹ ಮಹಿನಿಯರು ಅದರ ಬಗ್ಗೆ ಮಾತನಾಡಯವದಿಲ್ಲ ನಡೆಯುವರು ಮಾತ್ರ.

ಗಾಂಧಿಜೀ ಕನಸು ಬಹು‌ಮುಖದ ಸ್ವಾತಂತ್ರ ಚಳವಳಿ ಅದರಲ್ಲಿ ಕಾಣಬಹುದು ವಿದೇಶದಿಂದ ಬ್ರಿಟಿಷರು ಬಂದಿದ್ದು ವ್ಯಾಪಾರಕ್ಕಾಗಿ ಅಂದಾಗ ಸ್ವದೇಶಿ ಬಳಕೆಯಿಂದ ಅವರ ವ್ಯಾಪಾರಕ್ಕೆ ಹೊಡೆತ. ಸ್ವದೇಶಿ ಮೂಲ ಚರಕ ಅದರ ಸುತ್ತ ಅನ್ನಬಹುದು ಅದನ್ನ ಬಳಸುವ ಗಾಂಧೀವಾದಿಗಳು ಇವತ್ತು ಕೆಲವರು ಇದ್ದಾರೆ ಇತ್ತಿತ್ತಲಾಗಿ ಅದಕ್ಕು ಕುತ್ತ ಬರತಾಯಿದೆ. ಚರಕ ಮರೆಯದಂತೆ ಯುಗ ಯುಗ ದೂರ ತಲೆಮಾರಿಗೆ ಅದನ್ನ ಖಾದಿಯನ್ನ ಉಳಸಬೇಕು.

ಈಸ್ಟ್ ಇಂಡಿಯ ಕಂಪನಿಯವರು ಭಾರತಕ್ಕೆ ಬಂದ ಅನಂತರ, ಇತರ ಎಲ್ಲ ಗೃಹಕೈಗಾರಿಕೆಗಳಂತೆ ಭಾರತದ ಕೈನೂಲು ಕೈಮಗ್ಗದ ಕೈಗಾರಿಕೆಗಳು ಮೂಲೆಗೆ ಬಿದ್ದುವು. ಲ್ಯಾಂಕಷೈರಿನ ಬಟ್ಟೆ ಗಿರಣಿಗಳ ಉದ್ಧಾರಕ್ಕಾಗಿ, ಬ್ರಿಟಿಷರು ಭಾರತವನ್ನು ತಮ್ಮ ಬಟ್ಟೆಗಳಿಗೆ ಗಿರಾಕಿ ಮಾಡಿಕೊಂಡರು. ಭಾರತದ ನೂಲುವವರನ್ನೂ ನೆಯ್ಗೆಯವರನ್ನೂ ಅತ್ಯಂತ ಕ್ರೂರವಾದ ರೀತಿಯಲ್ಲಿ ನಿರುದ್ಯೋಗಕ್ಕೆ ಸಿಲುಕಿಸಿ ಕೆಲವು ವೇಳೆ ಹಿಂಸೆ ಸಹ ಮಾಡಿ ಆ ಕಸಬನ್ನೂ ಅದನ್ನು ನಡೆಸುವವರನ್ನೂ ನಾಶಮಾಡಿಬಿಟ್ಟರು. ಇಂಗ್ಲೆಂಡಿನ ಬಟ್ಟೆಗಳು ಭಾರತದಲ್ಲಿ ಬಂದು ವಿಜೃಂಭಿಸತೊಡಗಿದುವು. ಭಾರತಕ್ಕೆ ಇಂಗ್ಲೆಂಡು, ವರ್ಷಕ್ಕೆ ಎಷ್ಟೊ ಕೋಟಿ ರೂಪಾಯಿಗಳ ಬಟ್ಟೆಗಳನ್ನು ಕಳುಹಿಸುತ್ತಿತ್ತು. ರಾಟೆ ದೇಶದಿಂದ ಕಣ್ಮರೆಯಾಯಿತು. ಮತ್ತದು ಬೆಳಕಿಗೆ ಬರುಲು ಗಾಂಧೀಯವರ ಅವತಾರವಾಗಬೇಕಾಯಿತು.

ಹಾತ್ಮ ಗಾಂಧೀಜಿ ಆಫ್ರಿಕದಲ್ಲಿ ತಮ್ಮ ಸತ್ಯಾಗರಹದ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾಗ, ಭಾರತೀಯರ ಅಸ್ವಾತಂತ್ರ್ಯಕ್ಕೂ ಆಫ್ರಿಕದಲ್ಲಿ ಭಾರತೀಯರ ಕಷ್ಟಗಳಿಗೂ ಆಧುನಿಕ ಯಂತ್ರನಾಗರಿಕತೆಯೇ ಮುಖ್ಯ ಕಾರಣವೆಂಬುದನ್ನು ತಿಳಿದರು ; ಪ್ರತಿಯೊಂದು ವಿಷಯದಲ್ಲಿಯೂ ಸ್ವಾವಲಂಬನೆ, ಸ್ವದೇಶಿ-ಇವು ಸ್ವಾತಂತ್ರ್ಯ ಹೋರಾಟಕ್ಕೆ ಅವಶ್ಯಕವೆಂದು ನಿರ್ಧರಿಸಿದರು. ಮುಖ್ಯವಾಗಿ ಆಹಾರ ಮತ್ತು ವಸ್ತ್ರಗಳ ವಿಷಯದಲ್ಲಿ ಸ್ವಾವಲಂಬನೆಗಾಗಿ ಪ್ರಯತ್ನಿಸತೊಡಗಿದರು. ರಾಟೆ ಎಂಬ ಉಪಕರಣವಿದೆಯೆಂದು ಅವರು ಕೇಳಿದ್ದುದಲ್ಲದೆ ಅದರ ವಿಷಯದಲ್ಲಿ ಹಿಂದೆ ಸ್ವರಾಜ್ಯದಲ್ಲಿ ಅದರ ಬಗ್ಗೆ 1905ರಲ್ಲಿಯೇ ಬರೆದಿದ್ದರು. ಆದರೆ ಅವರು 1915ರವರೆಗೆ ರಾಟೆಯನ್ನು ನೋಡಿರಲಿಲ್ಲ. ಆಫ್ರಿಕದಿಂದ ಭಾರತಕ್ಕೆ ಹಿಂದಿರುಗಿದ ಅನಂತರದ ಅವರ ಸ್ವದೇಶಿ ವೃತ್ತಕ್ಕೆ ಅನುಗುಣವಾಗಿ, ಕೈಮಗ್ಗದ ಬಟ್ಟೆಯನ್ನು ಧರಿಸುತ್ತಿದ್ದರು. ಆದರೆ ಅದಕ್ಕೆ ಬೇಕಾಗುವ ನೂಲು ಗಿರಣಿಗಳಲ್ಲಿ ತಯಾರಾಗುತ್ತಿತ್ತು. ಗಿರಣಿಗಳ ಮೇಲಿನ ಅವಲಂಬನೆಯನ್ನು ಬಿಡಬೇಕಾದರೆ ಅವರು ನೂಲುವ ರಾಟೆಯನ್ನು ಕಂಡುಹಿಡಿದು ಅದರಲ್ಲಿ ನೂಲು ಗಿರಣಿಗಳಲ್ಲಿ ತಯಾರಾಗುತ್ತಿತ್ತು. ಗಿರಣಿಗಳ ಮೇಲಿನ ಅವಲಂಬನೆಯನ್ನು ಬಿಡಬೇಕಾದರೆ ಅವರು ನೂಲುವ ರಾಟೆಯನ್ನು ಕಂಡುಹಿಡಿದು ಅದರಲ್ಲಿ ನೂಲು ತೆಗೆಯಬೇಕಾಗಿತ್ತು ; ಗಾಂಧೀಜಿ ಎರಡು ವರ್ಷಗಳ ಕಾಲ ದೇಶದಲ್ಲೆಲ್ಲ ರಾಟೆಗಾಗಿ ವಿಚಾರಿಸಿ, ಕೊನೆಗೆ ಬ್ರೋಚ್‍ನಲ್ಲಿ, ಗಂಗಾಬಹನ್ ಎಂಬುವರ ಮೂಲಕ ರಾಟೆಯನ್ನೂ ನೂಲುವವರನ್ನೂ ಪತ್ತೆ ಹಚ್ಚಿದರು. ರಾಟೆಯನ್ನು ಅವರು ಚರಕ ಎಂದು ಕರೆದರು. ಅನಂತರ ಚರಕ ಸ್ವದೇಶಿ, ಸ್ವರಾಜ್ಯಗಳ ಸಂಕೇತವಾಯಿತು. ಗಾಂಧೀಜಿಯವರ ದೃಷ್ಟಿಯಲ್ಲಿ ಚರಕ, ಖಾದಿ-ಇವು ಭಾರತದ ಆರ್ಥಿಕ ಮತ್ತು ಅಧ್ಯಾತ್ಮ ಜೀವನದ ಪುನಶ್ಚೇತನಕ್ಕೆ ಸಹಾಯಕವಾದ, ಉಪಕರಣಗಳು. ಅದೊಂದು ಬರಿಯ ಬಟ್ಟೆಯ ಪ್ರಶ್ನೆ ಮಾತ್ರವಲ್ಲ, ಖಾದೀ ಎಂಬುದು ಒಂದು ಜೀವನಕ್ರಮ. (ರಾಟೆ ಅಥವಾ ಚರಕದಲ್ಲಿ ಕೈಯಲ್ಲಿ ನೂತ ದಾರದಿಂದ ಕೈಮಗ್ಗದಲ್ಲಿ ನೆಯ್ದ ಬಟ್ಟೆಗೆ ಖಾದೀ ಅಥವಾ ಖದ್ದರ್ ಎಂದು ಹೆಸರು.) ಇದು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಒಂದು ಆಯುಧವೂ ಆಯಿತು. ಖಾದೀ ಸ್ವರಾಜ್ಯ ಚಳವಳಿಯ ದೊಡ್ಡ ಅಸ್ತ್ರವಾಯಿತು. ಬ್ರಿಟಿಷರು ಖಾದಿ ಧರಿಸುವುದನ್ನೂ ಒಂದು ರಾಜಕೀಯ ಅಪರಾಧ ಎಂಬ ದೃಷ್ಟಿಯಿಂದ ನೋಡುತ್ತಿದ್ದರು. ಗಾಂಧೀಜಿಯ ಮೇಲೆ, ಬ್ರಿಟಿಷ್ ಸರ್ಕಾರ ರಾಜದ್ರೋಹದ ಆಪಾದನೆಯನ್ನು ಹೊರಿಸಿ ಮೊಕದ್ದಮೆ ಹೂಡಿ ತಮ್ಮ ಕಸುಬು ಯಾವುದು ಎಂದು ಕೇಳಿದಾಗ ಅವರು ವ್ಯವಸಾಯ ಮತ್ತು ನೆಯ್ಗೆ ಎಂದು ಪ್ರತ್ಯುತರ್ತವಿತ್ತರು. ಗಾಂಧೀಜಿ ಮತ್ತು ಕಾಂಗ್ರೆಸ್ಸಿನವರು ದೇಶದಲ್ಲೆಲ್ಲ ಚರಕವನ್ನೂ ಖಾದಿಯನ್ನೂ ಪ್ರಚಾರ ಮಾಡಿ, ಅದರ ವ್ಯವಸ್ಥೆಗಾಗಿ ಅಖಿಲ ಭಾರತ ಚರಕ ಸಂಘ ಎಂಬುದನ್ನು ಸ್ಥಾಪಿಸಿದರು. ಪಂಡಿತ್ ಜವಹರ್‍ಲಾಲ್ ನೆಹರು ಖಾದೀ ಸ್ವಾತಂತ್ರ್ಯದ ಸಮವಸ್ತ್ರ ಎಂದು ಹೇಳಿದರು. ಭಾರತದ ರಾಷ್ಟ್ರಧ್ವಜದಲ್ಲಿ ಚರಕದ ಸಂಕೇತವನ್ನು ಸೇರಿಸಲಾಯಿತು, ಸ್ವಾತಂತ್ರ್ಯಾನಂತರ ಅದು ಚಕ್ರರೂಪದಲ್ಲಿ ಉಳಿದು ಬಂದಿದೆ.

ಚರಕ ಎಂಬುದು ಬಹಳ ಸುಲಭವಾದ ಉಪಕರಣ. ಹಿಂದಲ ಕಾಲದ ಚರಕ ದೊಡ್ಡದಾದ ಒಂದು ಚಕ್ರವಾಗಿತ್ತು. ಈಚೆಗೆ ಗಾಂಧೀಜಿ ಹೊಸದಾಗಿ ಬಳಕೆಗೆ ತಂದ ಮೇಲೆ, ಅದನ್ನು ಸಾಬರಮತಿ ಚರಕ ಎಂದು ಕರೆದರು. ಅನಂತರ ಅದರ ಮತ್ತೊಂದು ರೂಪವೇ ಸೇವಾಗ್ರಾಮ ಚರಕವೆಂದಾಯಿತು. ಇತ್ತಿತ್ತಲಾಗಿ ಅದಕ್ಕೆ ಹೈಟೆಕ್ ಟಚ್ ಮಾಡಮಾಡಿದ್ದಾರೆ. ಒಂದು ಕಡೆಯಿಂದ ಇನ್ನೊಂದು ಕಡೆ ಒಯುವಂತೆ ಮಾಡಿದ್ದಾರೆ ಗಾಂಧೀಜಿ ಬಹುಮುಖದ ದಾರ್ಶನಿಕ ನಡೆದರೆ ನಮಗೆಲ್ಲ ಸರಳತೆ ದಾರಿ ಅವರ ನಡೆ.

 

ಜಿಲ್ಲೆ

ರಾಜ್ಯ

error: Content is protected !!