Saturday, July 27, 2024

ಪೌರ ಸನ್ಮಾನ ದೇಶದ ಇಡೀ ಹೆಣ್ಣುಮಕ್ಕಳಿಗೆ ತೋರಿದ ಸನ್ಮಾನ ಹಾಗೂ ಗೌರವ : ರಾಷ್ಟ್ರಪತಿ ದ್ರೌಪದಿ ಮುರ್ಮು

ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ ಮಾಡಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಹಾಪೌರ ಈರೇಶ ಅಂಚಟಗೇರಿ ಅವರು ರಾಷ್ಟ್ರಪತಿ ಅವರಿಗೆ ರೇಷ್ಮೆ ಶಾಲು, ಸಿದ್ಧಾರೂಢ ಸ್ವಾಮೀಜಿಯವರ ಬೆಳ್ಳಿ ಮೂರ್ತಿ, ಸಿದ್ಧಾರೂಢರ ಕುರಿತ ಪುಸ್ತಕ, ಧಾರವಾಡ ಪೇಡ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು, ಒರಿಸ್ಸಾದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹೆಣ್ಞುಮಗಳಿಗೆ ನೀವು ತೋರಿದ ಸನ್ಮಾನ, “ದೇಶದ ಇಡೀ ಹೆಣ್ಣುಮಕ್ಕಳಿಗೆ ತೋರಿದ ಸನ್ಮಾನ ಹಾಗೂ ಗೌರವವಾಗಿದೆ.” ಹುಬ್ಬಳ್ಳಿ-ಧಾರವಾಡ ವಿದ್ಯಾಕಾಶಿ, ಸಂಗೀತದ ನೆಲವಾಗಿದೆ. ಉತ್ತರ ಕರ್ನಾಟಕ ಬಸವೇಶ್ವರ, ಸಿದ್ಧರೂಢರ ಅಧ್ಯಾತ್ಮದ ತಾಣ ಇದಾಗಿದೆ ಎಂದರು.

ಹುಬ್ಬಳ್ಳಿ ಧಾರವಾಡ ಅವಳಿನಗರಗಳು ಕರ್ನಾಟಕ ಮಾತ್ರವಲ್ಲ,ಸಮಗ್ರ ಭಾರತದ ಸಾಂಸ್ಕೃತಿಕ, ಐತಿಹಾಸಿಕ ನಗರಗಳಾಗಿವೆ.ಉತ್ತರ ಕರ್ನಾಟಕದ ಈ ನಗರಗಳಲ್ಲಿ ಕನ್ನಡ,ಮರಾಠಿ ಭಾಷೆಗಳ ಅದ್ಭುತ ಸಂಗಮವಿದೆ.ಆಧ್ಯಾತ್ಮ,ಸಾಂಸ್ಕೃತಿಕ ,ಶೈಕ್ಷಣಿಕ ಮಾತ್ರವಲ್ಲ, ಆಧುನಿಕವಾಗಿಯೂ ಈ ನಗರಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ.ಉತ್ತರ ಕರ್ನಾಟಕವು ಸಾಂಸ್ಕೃತಿಕ, ಅಧ್ಯಾತ್ಮಿಕತೆ ಹಾಗೂ ಶೈಕ್ಷಣಿಕ ಸಾಧನೆ ಹಾಗೂ ಆಧುನಿಕ ಸೌಲಭ್ಯಗಳಿಂದ ದೇಶದಲ್ಲಿ ‌ಹೆಸರುವಾಸಿಯಾಗಿದೆ.ಪ್ರಾಚೀನ ಸಾಧನೆಯ ಜೊತೆಗೆ ಅಧುನಿಕತೆಯ ಅಭಿವೃದ್ದಿಗೆ ತೆರೆದುಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆತ್ಮನಿರ್ಭರ ಭಾರತ ಸಂಕಲ್ಪದ ಕಾಲವಿದು. ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದು, 2047ಕ್ಕೆ ಸ್ವಾತಂತ್ರ್ಯ ಶತಮಾನೋತ್ಸವ ವೇಳೆಗೆ, ಭಾರತ ಬಲಾಢ್ಯ ಹಾಗೂ ಪೂರ್ಣ ಆತ್ಮನಿರ್ಭರ ದೇಶವಾಗಿ ಹೊರಹೊಮ್ಮ ಬೇಕಾಗಿದೆ ಎಂದರು.

 

ಜಿಲ್ಲೆ

ರಾಜ್ಯ

error: Content is protected !!