Tuesday, May 28, 2024

ಹಿಂದೂ ಧರ್ಮ ಒಂದು ಧರ್ಮವಲ್ಲ, ಆದರೆ ಜೀವನ ವಿಧಾನ ! ಆ‌ರ್‌ಎಸ್‌ಎಸ್.ಮುಖ್ಯಸ್ಥ ಮೋಹನ್ ಭಾಗವತ್

ವದೆಹಲಿ(ಸೆ.26): ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೇಘಾಲಯದ ಶಿಲ್ಲಾಂಗ್‌ನಲ್ಲಿ  ಭಾನುವಾರ ಪ್ರತಿಷ್ಠಿತ ನಾಗರಿಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ ಹಿಮಾಲಯದ ದಕ್ಷಿಣ, ಹಿಂದೂ ಮಹಾಸಾಗರದ ಉತ್ತರ ಮತ್ತು ಸಿಂಧೂ ನದಿಯ ದಡದ ನಿವಾಸಿಗಳನ್ನು ಸಾಂಪ್ರದಾಯಿಕವಾಗಿ ಹಿಂದೂಗಳು  ಎಂದು ಕರೆಯುತ್ತಾರೆ. ಇಸ್ಲಾಂ ಧರ್ಮವನ್ನು ಹರಡಿದ ಮೊಘಲರು ಮತ್ತು ಕ್ರಿಶ್ಚಿಯನ್ ಧರ್ಮವನ್ನು ಹರಡುವ ಬ್ರಿಟಿಷ್ ಆಡಳಿತಗಾರರಿಗಿಂತ ಮುಂಚೆಯೇ ಹಿಂದೂಗಳು ಅಸ್ತಿತ್ವದಲ್ಲಿದ್ದರು. ಹಿಂದೂ ಧರ್ಮ ಒಂದು ಧರ್ಮವಲ್ಲ, ಆದರೆ ಜೀವನ ವಿಧಾನ ಎಂಬ ಸಂದೇಶ ನೀಡಿದ್ದಾರೆ.
ಹಿಂದೂವಾಗಲು ಧರ್ಮ ಬದಲಾಯಿಸಬೇಕಿಲ್ಲ
ಅಲ್ಲದೇ ಹಿಂದೂ ಎಂಬ ಪದವು ಭಾರತಮಾತೆಯ ಪುತ್ರರು, ಭಾರತೀಯ ಪೂರ್ವಜರ ವಂಶಸ್ಥರು ಮತ್ತು ಭಾರತೀಯ ಸಂಸ್ಕೃತಿಯ ಪ್ರಕಾರ ಬದುಕುವ ಎಲ್ಲರನ್ನೂ ಒಳಗೊಂಡಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ. ಒಬ್ಬ ಹಿಂದೂ ಆಗಲು ಧರ್ಮವನ್ನು ಬದಲಾಯಿಸುವ ಅಗತ್ಯವಿಲ್ಲ, ಏಕೆಂದರೆ ಭಾರತದಲ್ಲಿ ಎಲ್ಲರೂ ಹಿಂದೂಗಳು. ನಾವು ಹಿಂದೂಗಳು, ಹಿಂದೂ ಎಂಬುದಕ್ಕೆ ಯಾವುದೇ ನಿರ್ದಿಷ್ಟ ವ್ಯಾಖ್ಯಾನವಿಲ್ಲ, ಅದು ನಮ್ಮ ಗುರುತು. ಭಾರತೀಯ ಮತ್ತು ಹಿಂದೂ ಪದಗಳು ಸಮಾನಾರ್ಥಕ ಪದಗಳಾಗಿವೆ. ಭಾರತದಲ್ಲಿ ವಾಸಿಸುವ ಎಲ್ಲಾ ಜನರು ಗುರುತಿನ ದೃಷ್ಟಿಯಿಂದ ಹಿಂದೂಗಳು. ಇದು ಭೌಗೋಳಿಕ-ಸಾಂಸ್ಕೃತಿಕ ಗುರುತು. ಭಾರತವು ಪಾಶ್ಚಿಮಾತ್ಯ ಪರಿಕಲ್ಪನೆಯ ದೇಶವಲ್ಲ. ಇದು ಅನಾದಿ ಕಾಲದಿಂದಲೂ ಸಾಂಸ್ಕೃತಿಕ ನಾಡು. ವಾಸ್ತವವಾಗಿ, ಇದು ಜಗತ್ತಿಗೆ ಮಾನವೀಯತೆಯ ಪಾಠವನ್ನು ಕಲಿಸಿದ ದೇಶ ಎಂದಿದ್ದಾರೆ ಭಾಗವತ್.
ಏಕತೆಗಾಗಿ ಶ್ರಮಿಸಬೇಕು: ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ‘ಭಾರತದ ಏಕತೆಯೇ ಅದರ ಶಕ್ತಿ. ಭಾರತ ಹೇಳಿಕೊಳ್ಳುವ ವೈವಿಧ್ಯತೆಯು ಹೆಮ್ಮೆಯ ವಿಷಯವಾಗಿದೆ. ಇದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಭಾರತದ ವಿಶೇಷತೆ. ನಾವು ಯಾವಾಗಲೂ ಒಂದಾಗಿದ್ದೇವೆ. ಇದನ್ನು ಮರೆತಾಗ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ, ನಾವು ಒಂದಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ನಮ್ಮ ದೇಶವನ್ನು ಬಲಿಷ್ಠ ಮತ್ತು ಹೆಚ್ಚು ಸ್ವಾವಲಂಬಿಯನ್ನಾಗಿ ಮಾಡಬೇಕು. ಈ ಏಕತೆಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಭಾರತವು ಅನಾದಿ ಕಾಲದಿಂದಲೂ ಪ್ರಾಚೀನ ರಾಷ್ಟ್ರವಾಗಿದೆ. ಇಲ್ಲಿನ ಜನರು ನಾಗರಿಕತೆಯ ಧ್ಯೇಯ ಮತ್ತು ಮೌಲ್ಯಗಳನ್ನು ಮರೆತಿದ್ದರು ಇದೇ ಕಾರಣಕ್ಕೆ ಭಾರತವು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿತ್ತು ಎಂದಿದ್ದಾರೆ.
(news18)

ಜಿಲ್ಲೆ

ರಾಜ್ಯ

error: Content is protected !!