Thursday, July 25, 2024

ಬೆಳಗಾವಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ ಹೆಬಳಿ ವಿರುದ್ಧ ಭ್ರಷ್ಟಾಚಾರದ ಆರೋಪ! ನೊಂದ ಶಿಕ್ಷಕರಿಂದ ಲೋಕಾಯುಕ್ತಕ್ಕೆ ದೂರು ಕೊಡಲು ಸಜ್ಜು.

ಬೆಳಗಾವಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಬೆಳಗಾವಿ ಜಿಲ್ಲಾ ಶಿಕ್ಷಕರ ಸಂಘದಲ್ಲಿ ಕೆಸರೆರಚಾಟ ಜೋರಾಗಿದ್ದೆ.ಬೆಳಗಾವಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ ಹೆಬಳಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದೆ.ಅಲ್ಲದೆ ಅಧಿಕಾರದ ದುರುಪಯೋಗದಿಂದ ಶಿಕ್ಷಕರ ವರ್ಗಾವಣೆ,ಬಡ್ತಿ ಕೊಡಿಸುವುದು,ಶಿಕ್ಷಕರನ್ನು ಅಮಾನತ್ತಿನಲ್ಲಿ ಇರಸುವುದು ಸೇರಿದಂತೆ ಹಲವಾರು ವಿಷಯದಲ್ಲಿ ಶಿಕ್ಷಕರಿಗೆ ಅನ್ಯಾಯ ಮಾಡುತ್ತಿರುವುದು ಶಿಕ್ಷಕರ ವಲಯದಲ್ಲಿ ಕೇಳಿಬರುತ್ತಿದ್ದೆ.ಮತ್ತು ಜಿಲ್ಲಾ ಸಂಘದ ಖಾತೆಯಿಂದ 1.40 ಲಕ್ಷ ರೂಪಾಯಿಗಳನ್ನು ಸ್ವತಃ ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದಾರಂತೆ.  ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ನಮ್ಮ ಪಾಡು ಎಂದು ಶಿಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು, ಬೆಳಗಾವಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ ಹೆಬಳಿ ಅವರ ಕಾರ್ಯವೈಕರಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ಒಂದು ಸಂದೇಶ ಹರಿದಾಡುತ್ತಿದೆ.ಅದು ಹೀಗಿದ. ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿಣಿಯಲ್ಲಿ ಅನೌಪಚಾರಿಕವಾಗಿ ಚರ್ಚೆ ಆದ NPS ಹೋರಾಟದ ಅಂಶವನ್ನು ಸಿ ಎಸ್  ಷಡಕ್ಷರಿ ಯವರು ಏನೋ ಮಾತಾಡಿಬಿಟ್ರು ಅಂತಾ ಅವರನ್ನು ವಿರೋಧಿಸುವ  ಕೆಲವೊಂದು ಶಿಕ್ಷಕ ಸಂಘದ ಪದಾಧಿಕಾರಿಗಳು ಚರ್ಚಿಸುವ ಮೊದಲು ಮಾನ್ಯ ಸಿ ಎಸ್ ಷಡಕ್ಷರಿಯವರು ಬೆಳಗಾವಿ ಜಿಲ್ಲಾ ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷರಾದ ಜಯಕುಮಾರ ಹೆಬಳಿ  ಮಾಡುತ್ತಿರುವ ಭ್ರಷ್ಟಾಚಾರವನ್ನು ಮನಗೊಂಡು ಆ ರೀತಿ ಹೇಳಿದ್ದಾರೆ ಅನ್ನುವದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಆ ಮಾತುಗಳು ಕೇವಲ ಜಯಕುಮಾರ್ ಹೆಬಳಿಗೆ ಮಾತ್ರ.ಶಿಕ್ಷಕರ ಸಂಘದ ಚುನಾವಣೆಯಲ್ಲಿ ಮಾನ್ಯ ಷಡಕ್ಷರಿಯವರ ಫೋಟೋ ಹಾಕಿಕೊಂಡು ಅಧಿಕಾರ ಪಡೆದು ಕೊಂಡಿದ್ದಾನೆ. ಈಗ ಅದನ್ನು ಮರೆತು ಮನ ಬಂದಂತೆ ಶಿಕ್ಷಕರನ್ನು ಸುಲಿಗೆ ಮಾಡುತ್ತಿದ್ದಾನೆ. ಬೆಳಗಾವಿ ಜಿಲ್ಲಾ ಶಿಕ್ಷಕರ ಸಂಘದಲ್ಲಿ ಹಗರಣಗಳ ಕಂತೆ ಕಂತೆ ನಡೆದದ್ದನ್ನು ನೆನಪಿಸಿಕೊಳ್ಳಿ.

ಕಳೆದ ಅವಧಿಯಲ್ಲಿ ಈ ಬಾರಿಯ ಶಿಕ್ಷಕರ ಸಂಘದ ಚುನಾವಣೆ ಮೊದಲು ಬೆಳಗಾವಿ ಗ್ರಾಮೀಣ ತಾಲೂಕು ವಂತಿಗೆ ಹಣ ಸುಮಾರು 2,80,000/ರೂ ಗಳನ್ನು ರಾಜ್ಯ ಸಂಘಕ್ಕೆ ಕೊಡದೇ ರಾಜ್ಯ ಸಂಘದ ಬೊಕ್ಕಸಕ್ಕೆ ಮಾಡಿದ ದ್ರೋಹವನ್ನು ನೆನಪಿಸಿಕೊಂಡ ಸನ್ಮಾನ್ಯ ಸಿ ಎಸ್ ಷಡಕ್ಷರಿಯವರು ಹೊಟ್ಟೆಪಾಡಿಗೆ ಎಂಬ ಪದವನ್ನು ಬಳಸಿರಬಹುದು ಅದೆಲ್ಲಾ ಜಯಕುಮಾರ್ ಹೆಬಳಿ ಎಂಬ ವ್ಯಕ್ತಿಯ ಕುರಿತಾಗಿಯೇ ವಿನಃ ಜಿಲ್ಲೆಯ ಸಮಸ್ತ ಶಿಕ್ಷಕರ /ನೌಕರರ ಕುರಿತಾಗಿ ಅಲ್ಲಾ ಎಂಬುದನ್ನು ಎಲ್ಲ ತಾಲೂಕು ಹಾಗೂ ಬೇರೆ ಬೇರೆ ಘಟಕಗಳ ಅಧ್ಯಕ್ಷರು ಅರಿಯಬೇಕು.

ಕಳೆದ ಅವಧಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ  ಭಡ್ತಿಯಲ್ಲಿ A.ದಿಂದ A ವಲಯಕ್ಕೆ ಕೊಡಲು ಬರುದಿಲ್ಲ ಎಂಬುದನ್ನು ಪ್ರತಿಯೊಬ್ಬರಿಗೂ ಗೊತ್ತಿದೆ ಅಲ್ಲವೆ? ಆದರೆ ಹಿಂದಿನ ಅವಧಿಯಲ್ಲಿ ಮನಸ್ಸಿಗೆ ಬಂದಂತೆ ತನ್ನ ಬೇಕಾದವರಿಗೆ A ವಲಯಕ್ಕೆ ಭಡ್ತೀಕೋಡಿಸಿ ಆ ಪ್ರಕರಣದಲ್ಲಿ ಹಣದ ಹೊಳೆಯನ್ನು ಹರಿಸಿದ್ದು ಅಮಾಯಕ ಶಿಕ್ಷಕರ ಮನಸ್ಸಿನಲ್ಲಿ ಇನ್ನೂ ಮಾಸಿಲ್ಲಾ.. ಈ ವರ್ಷ ಪ್ರ ಗು ಹುದ್ದೆಗೆ ಬಡ್ತಿ ಕೊಡುವಾಗ ಬೆಳಗಾವಿ ನಗರದ ಶಿಕ್ಷಕರ ಜೇಷ್ಠತಾ ಪಟ್ಟಿಯಲ್ಲಿ BEO ಸಿಬ್ಬಂದಿ ಮೇಲೆ ಒತ್ತಡ ಮಾಡಿ ಬೇರೆ ಜಿಲ್ಲೆಯಿಂದ ವರ್ಗವಾಗಿ ಬಂದ ತನಗೆ ಬೇಕಾದ ಶಿಕ್ಷಕರಿಗೆ ಸೇವೆಗೆ ಸೇರಿದ ದಿನಾಂಕ ಪರಿಗಣಿಸಿ ಬಡ್ತಿ ಕೊಡಿಸಿ ಬಹಳಷ್ಟು ಶಿಕ್ಷಕರಿಗೆ ಅನ್ಯಾಯ ಮಾಡಿದ್ದಾನೆ.

CRP, BRP, ಶಿಕ್ಷಕರ ಮರುನಿಯುಕ್ತಿಯಲ್ಲಿ ಹಣಕ್ಕೆ ಬೇಡಿಕೆ ಇಟ್ಟ ಆಡಿಯೋ ವೈರಲ್ ವಿಷಯ ಇನ್ನೂ ಜಿಲ್ಲೆಯ ಶಿಕ್ಷಕರಿಗೆ ನೆನಪಿದೆ,ಹಲವು ಶಿಕ್ಷಕರ ಅಮಾನತ್ತಿನಲ್ಲಿ ಕೈಯಾಡಿಸಿ ಆಯಕಟ್ಟಿನ ಸ್ಥಳಕ್ಕೆ ಮರುನಿಯುಕ್ತಿಗೊಳಿಸಲು ಲಕ್ಷ, ಲಕ್ಷ ರೂಪಾಯಿವರೆಗೆ ವಸೂಲಿ ಮಾಡಿ ಮೋಸಮಾಡಿದ್ದನ್ನು ಬಾಧೀತ ಶಿಕ್ಷಕರ ಬಾಯಿಯಿಂದ ಕೇಳಿದ್ದೇವೆ.ದಾಖಲೆಗಳೂ ಇವೆ.ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸಬೇಕಾಗುತ್ತದೆ ಅಂತಾ ಶಿಕ್ಷಕರಿಗೆ ಹೇಳಿ ಆ ಹೆಸರಿನಲ್ಲಿ ಬೇಕಾದಷ್ಟು ಹಣ ಪಡೆದದ್ದೂ ನೆನಪಿದೆ..

ಇವೆಲ್ಲವಕ್ಕೂ ಜಿಲ್ಲೆಯ ಯಾವುದೇ ತಾಲೂಕು ಅಧ್ಯಕ್ಷರು ಜವಾಬ್ದಾರರಲ್ಲಾ ಅದನ್ನು ನಡೆಸಿದ್ದು ಇದೇ ಜಯಕುಮಾರ್ ಹೆಬಳಿ ಒಬ್ಬನೇ ಎಂಬುದನ್ನು ನೆನಪಿಸಿಕೊಂಡು ಜಿಲ್ಲೆಯ ಶಿಕ್ಷಕರ ಸಂಘದ ಪದಾಧಿಕಾರಿಗಳು  ಶಿಕ್ಷಕರ ನಂಬಿಕೆಗೆ ಅರ್ಹರಾಗಲು ಪ್ರಯತ್ನಿಸಿರಿ.ಈ ಎಲ್ಲ ಭ್ರಷ್ಟಾಚಾರದ ಬಗ್ಗೆ ಸಮಕ್ಷಮ ಚರ್ಚೆ ಮಾಡಲು ನಾವು ಸಿದ್ದರಿದ್ದೇವೆ. ಬಹಳಷ್ಟು ವರ್ಷಗಳ ಇತಿಹಾಸ ಇರುವ ನಮ್ಮ ಶಿಕ್ಷಕರ ಸಂಘದಲ್ಲಿ ಇಂತಹ ಅಧ್ಯಕ್ಷರಿಂದ ಸಂಘಕ್ಕೆ ಕಪ್ಪು ಮಸಿ ಹಚ್ಚಿದಂತಾಗಿದೆ. ಇನ್ನು ಮುಂದಾದರೂ ನಮ್ಮ ಶಿಕ್ಷಕರ ಸಂಘವನ್ನು ಕಾಪಾಡಿಕೊಂಡು ಹೋಗೋಣ. ನಮಸ್ಕಾರಗಳು.

ಈ ಸಂದೇಶದಿಂದ ಎಚ್ಚತ್ತಕೊಂಡೊ ಅಥವಾ ಮನನೊಂದೊ ಅಥವಾ ಅಧಿಕಾರದದಿಂದಲೊ ಅಥವಾ ಉದ್ದೇಶ ಪೂರ್ವಕವಾಗಿಯೊ ನೊಂದ ಶಿಕ್ಷಕರ ಪರವಾಗಿ ಧ್ವನಿ ಎತ್ತುತ್ತಿರುವ ಪ್ರಾಮಾಣಿಕ ಕೆಲ ಶಿಕ್ಷಕರಿಗೆ ಬೆಳಗಾವಿ ಜಿಲ್ಲಾ ಸಂಘದ ಸಂಘಟನೆ ವಿರುದ್ಧ ಆಧಾರ ರಹಿತ ಭ್ರಷ್ಟಾಚಾರ ಆರೋಪ ಹಾಗು ವಿರೋಧಿ ಚಟುವಟಿಕೆ ಮಾಡುತ್ತಿದ್ದೇರಿ,ಆದ ಕಾರಣ ಸಂಘದ ಬೈಲಾ ಪ್ರಕಾರ ನಿಯಮ 4 (ಆಯ್)‌ ಉಪನಿಯಮದಡ್ಡಿ ಸದಸ್ಯತ್ವ ರಂದು ಮಾಡಬೇಕಾಗುತದೆ ಎಂದು ಬೆಳಗಾವಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ ಹೆಬಳಿ ಹಾಗು ಪ್ರಧಾನ ಕಾರ್ಯದರ್ಶಿ ರಮೇಶ ಗೋಣಿ ನೋಟಿಸ್‌ ಕಳುಹಿಸಿದ್ದಾರೆ.

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು
ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ಕೂಡಲಸಂಗಮದೇವಾ.

ಈ ನೋಟಿಸ್‌ ಬಹಿರಂಗವಾದ ಬೆನ್ನಲೆ ಬಸವಣ್ಣನವರ ಈ ವಚನ ಇಲ್ಲಿ ಅತ್ಯಂತ ಪ್ರಸ್ತುತವಾಗಿದೆ ಎಂದು ಶಿಕ್ಷಕರ ವರ್ಗದಲ್ಲಿ ಮಾತುಗಳು ಕೇಳಿಬರುತ್ತಿವೆ.ಅಧ್ಯಕ್ಷ ಜಯಕುಮಾರ ಹೆಬಳಿ ವಿರುದ್ಧ ಅನ್ಯಾಯಕ್ಕೆ ಒಳಗಾದ ನೊಂದ ಶಿಕ್ಷಕರು ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.  

 

 

 

          

ಜಿಲ್ಲೆ

ರಾಜ್ಯ

error: Content is protected !!