Saturday, July 27, 2024

ವಿಡಿಯೋ ವೈರಲ್ :ಸದನದಲ್ಲಿ ಬಿಜೆಪಿ ಶಾಸಕರುಗಳ ವಿಡಿಯೋ ಗೇಮ್, ಪಾನ್ ಮಸಾಲ ವಿವಾದ!

ಉತ್ತರ ಪ್ರದೇಶ: ಉತ್ತರ ಪ್ರದೇಶ ವಿಧಾನಸಭೆಯ ಮುಂಗಾರು ಅಧಿವೇಶನ ಸೆಪ್ಟೆಂಬರ್ 23 ರಂದು ಕೊನೆಗೊಂಡಿದೆ.ಮುಂಗಾರ ಆಧಿವೇಶನದಲ್ಲಿ ಸಮಾಜವಾದಿ ಪಕ್ಷ ಪಾದಯಾತ್ರೆ ನಡೆಸಿತು.ಯೋಗಿ ಆದಿತ್ಯನಾಥ ಸರ್ಕಾರವನ್ನು ಒಂದಲ್ಲ ಒಂದು ವಿಚಾರದಲ್ಲಿ ಎಸ್‌ಪಿ ಪಕ್ಷ ಗುರಿಯಾಗಿಸುತ್ತಿದೆ. ಸಮಾಜವಾದಿ ಪಕ್ಷ (ಎಸ್‌ಪಿ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎರಡು ಪ್ರತ್ಯೇಕ ವೀಡಿಯೊಗಳನ್ನು ಹಂಚಿಕೊಂಡಿದೆ. ಈ ವೀಡಿಯೋಗಳಲ್ಲಿ ಒಬ್ಬರು ಶಾಸಕರು ವಿಧಾನಸಭೆಯಲ್ಲಿ ಮೊಬೈಲ್ ನಲ್ಲಿ ಆಟ ಆಡುತ್ತಿದ್ದು, ಮತ್ತೊಬ್ಬರು ಪಾನ್ ಮಸಾಲಾ ತಿನ್ನುತ್ತಿರುವುದು ಕಂಡುಬಂದಿದೆ.

ಈ ವಿಡಿಯೋಗಳ ಮೂಲಕ ಸಮಾಜವಾದಿ ಪಕ್ಷ (ಎಸ್‌ಪಿ) ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸುತ್ತಿದೆ. ಸಾರ್ವಜನಿಕ ಸಮಸ್ಯೆಗಳಿಗೂ ಬಿಜೆಪಿ ಶಾಸಕರಿಗೂ ಯಾವುದೇ ಸಂಬಂಧವಿಲ್ಲ ಎಂದು ಟ್ವಿಟರ್‌ನಲ್ಲಿ ಬರೆಯಲಾಗಿದೆ. ಸಮಾಜವಾದಿ ಪಕ್ಷವು ತನ್ನ ಟ್ವಿಟರ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿ, ಬಿಜೆಪಿ ಶಾಸಕರು ಸದನದ ಘನತೆಯನ್ನು ಹಾಳು ಮಾಡುತ್ತಿದ್ದಾರೆ! ಸದನದಲ್ಲಿ ಮೊಬೈಲ್ ಗೇಮ್ ಆಡುತ್ತಿರುವ ಮಹೋಬದ ಬಿಜೆಪಿ ಶಾಸಕ, ತಂಬಾಕು ತಿನ್ನುತ್ತಿರುವ ಝಾನ್ಸಿಯ ಬಿಜೆಪಿ ಶಾಸಕ. ಇಂತಹ ಜನರಲ್ಲಿ ಜನರ ಸಮಸ್ಯೆಗಳಿಗೆ ಉತ್ತರವಿಲ್ಲ ಮತ್ತು ಇವರಿಗೆ ಸದನವು ಒಂದು ಮನರಂಜನೆಯ ಸ್ಥಳವಾಗಿದೆ. ಇದು ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡು ವಿಚಾರ ಎಂದು ಹೇಳಿದೆ.

ಅದೇ ಸಮಯದಲ್ಲಿ, ಎಸ್ಪಿ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಶಾಸಕರೊಬ್ಬರು ಪಾನ್ ಮಸಾಲ ತಿನ್ನುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಮೂಲಕ ಬಿಜೆಪಿ ಕ್ಯಾನ್ಸರ್‌ಗೆ ಪ್ರಚಾರ ನೀಡುತ್ತಿದೆ ಎಂದು ಎಸ್‌ಪಿ ಆರೋಪಿಸಿದ್ದಾರೆ. ಇದೀಗ ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ.

 

 

 

 

 

 

(ಕೃಪೆ:ಟಿವಿ9)

ಜಿಲ್ಲೆ

ರಾಜ್ಯ

error: Content is protected !!