Saturday, July 27, 2024

ಇಂದು ಸಚಿವರೊಬ್ಬರ ಅಕ್ರಮ ಬಯಲಿಗೆಳೆಯಲು ಮಾಜಿ ಸಿಎಂ ಎಚ್​ಡಿಕೆ ಸಜ್ಜು!

 ರಾಜ್ಯ ಸರ್ಕಾರದ ಸಚಿವರೊಬ್ಬರ ಅಕ್ರಮ ಬಯಲಿಗೆಳೆಯಲು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸಜ್ಜಾಗಿದ್ದು, ಇಂದು (ಗುರುವಾರ) ಅಧಿವೇಶನದಲ್ಲಿ ದಾಖಲೆಗಳನ್ನ ಬಿಡುಗಡೆ ಮಾಡಲಿದ್ದಾರೆ.

ಕಲಬುರಗಿ ನಗರದ ವಿಮಾನ ನಿಲ್ದಾಣದಲ್ಲಿ ಈ ಕುರಿತು ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಚ್​ಡಿಕೆ, ಯಾವ ಸಚಿವರು, ಯಾವ ಅಕ್ರಮ ಎಂಬುದೆಲ್ಲವನ್ನೂ ನಾಳೆ ಸದನದಲ್ಲಿ ಬಹಿರಂಗ ಮಾಡುವೆ.

ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ, ಹಿಟ್ ಆಂಡ ರನ್ ಅಲ್ಲ. ನನ್ನ ಬಗ್ಗೆ ಹಗುರವಾಗಿ ಮತ್ತು ಏಕವಚನದಲ್ಲಿ ಮಾತನಾಡಿರುವ ಆ ಸಚಿವರಿಗೆ ಇದು ನಮ್ಮ ಸ್ಯಾಂಪಲ್‌. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡುವೆ ಎಂದರು.

ಸಚಿವರೊಬ್ಬರು ನಿಯಮ ಉಲ್ಲಂಘಿಸಿ, ಅಧಿಕಾರ ದುರುಪಯೋಗ ಮಾಡಿಕೊಂಡು ಮಾಡಿರುವ ಅಕ್ರಮವನ್ನು ದಾಖಲೆ ಸಮೇತ ಬಯಲಿಗೆ ಎಳೆಯುವೆ ಎಂದು ಕುಮಾರಸ್ವಾಮಿ ಬಾಂಬ್ ಸಿಡಿಸಿದರು. ಇವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಜಿಲ್ಲೆ

ರಾಜ್ಯ

error: Content is protected !!