Wednesday, September 18, 2024

15ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಆಯ್ಕೆ

ಬೆಳಗಾವಿ ಸೆ.19: ಚಿಕ್ಕೋಡಿಯಲ್ಲಿ ಜರುಗಲಿರುವ ನಿಯೋಜಿತ 15 ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಚಿಕ್ಕೋಡಿ ತಾಲೂಕಿನ ಚಿಂಚಣಿಯ ಅಲ್ಲಮಪ್ರಭು ಸಿದ್ದ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳನ್ನು ಒಕ್ಕೋರಲಿನಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕಾರಿ ಸಮಿತಿ ಸದಸ್ಯರನ್ನೋಳಗೊಂಡಂತೆ ಎಲ್ಲಾ ತಾಲೂಕಾ ಅಧ್ಯಕ್ಷರಗಳ ನಿಯೋಗ ಚಿಂಚಣಿಯ ಅಲ್ಲಮಪ್ರಭು ಸಿದ್ದ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಚಿಕ್ಕೋಡಿಯಲ್ಲಿ ಜರುಗಲಿರುವ 15 ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡ ಪರಮಪೂಜ್ಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳನ್ನು ಸತ್ಕರಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಅವರು ಗಡಿಭಾಗದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ತತ್ವದಡಿ ಭಾಷೆ ಸಾಹಿತ್ಯದ ಅಪ್ರತಿಮ ಸೇವೆ ಸಲ್ಲಿಸುತ್ತಾ ಧರ್ಮದ ಕಾರ್ಯದೊಂದಿಗೆ ಕನ್ನಡ ಬಾಷೆಯ ಸೇವೆಯನ್ನು ವಿಶಿಷ್ಠವಾಗಿ ಮಾಡುತ್ತಿರುವ ಶ್ರೀಗಳು ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಕನ್ನಡ ಸಾಹಿತ್ಯ ಪರಿಷತ್ ಮತ್ತು ಇಡೀ ಕನ್ನಡ ನಾಡಿಗೆ ಸಂದ ಗೌರವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಈ ವೇಳೆ ಚಿಕ್ಕೋಡಿ ತಾಲೂಕಾ ಕಸಾಪ ಅಧ್ಯಕ್ಷ ಡಾ. ಸುರೇಶ ಉಕ್ಕಲಿ,ನಿಪ್ಪಾಣಿ ತಾಲೂಕಾ ಕಸಾಪ ಅಧ್ಯಕ್ಷ ಈರಣ್ಣ ಶಿರಗಾವಿ, ರಾಮದುರ್ಗ ತಾಲೂಕಾ ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ, ಅಥಣಿ ತಾಲೂಕಾ ಅಧ್ಯಕ್ಷ ಎಂ. ಜಿ. ಕನಶೆಟ್ಟಿ ಮಾತನಾಡಿದರು. 

ಈ ಸಂಧರ್ಭದಲ್ಲಿ  ಕನ್ನಡ ಸಾಹಿತ್ಯ ಪರಿಷತ್ ನ ವಿವಿಧ ತಾಲೂಕಿನ ಅಧ್ಯಕ್ಷರುಗಳಾದ ಪ್ರಕಾಶ ಅವಲಕ್ಕಿ, ಡಾ. ಸುರೇಶ ಉಕ್ಕಲಿ, ಶ್ರೀಮತಿ ಭಾರತಿ ಮಗದುಮ್, ಈರಣ್ಣ ಶಿರಗಾವಿ, ಎಂ. ಈ. ಕನಶೆಟ್ಟಿ, ಡಾ. ಸಂಜಯ ಶಿಂದಿಹಟ್ಟಿ, ಪಾಂಡುರಂಗ ಜಟಗನ್ನವರ, ಜಿಲ್ಲಾ ಗೌರವ ಕರ್ಯದರ್ಶಿ ಎಂ. ವೈ. ಮೆಣಶಿನಕಾಯಿ, ಕಿರಣ ಸಾವಂತನವರ, ಶಿವಾನಂದ ತಲ್ಲೂರ, ಆಕಾಶ್ ಥಬಾಜ, ವಿರಭದ್ರ ಅಂಗಡಿ, ಎ. ಹೆಚ್. ಅಂಟಗುಡಿ, ಬಿ. ವೈ ಶಿವಾಪೂರ ಸೇರಿದಂತೆ  ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!