Sunday, September 8, 2024

ಪ್ರೌಢಶಾಲಾ ಶಿಕ್ಷಕರ ಅ‌ಕ್ರಮ ನೇಮಕಾತಿ : FDA ಪ್ರಸಾದ್ ಸಸ್ಪೆಂಡ್

ಬೆಂಗಳೂರು: ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಐಡಿಯಿಂದ ಬಂಧನಕ್ಕೆ ಒಳಗಾಗಿರುವಂತ ಎಫ್ ಡಿಎ ಕೆ ಎಸ್ ಪ್ರಸಾದ್ ನನ್ನು ಅಮಾನತುಗೊಳಿಸಿ, ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದು, 2012-13 ಮತ್ತು 2014-15ನೇ ಸಾಲಿನ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಅಕ್ರಮ ನೇಮಕಾತಿಯ ಆರೋಪದ ಮೇರೆಗೆ ಬೆಂಗಳೂರು ವಿಭಾಗದ ಸಹ ನಿರ್ದೇಶಕರ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಕೆ ಎಸ್ ಪ್ರಸಾದ್ ಅವರನ್ನು ದಿನಾಂಕ 06-09-2022ರಂದು ಸಿಐಡಿ ಬಂಧಿಸಿದೆ ಎಂದು ಹೇಳಿದ್ದಾರೆ.

ಇನ್ನೂ ಸಿಐಡಿಯಿಂದ ಬಂಧಿಸಲ್ಪಟ್ಟಿರುವಂತ ಎಫ್ ಡಿಎ ಕೆ ಎಸ್ ಪ್ರಸಾದ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.‌

 

 

 

 

 

 

(ಕನ್ನಡ ನ್ಯೂಸ್)

ಜಿಲ್ಲೆ

ರಾಜ್ಯ

error: Content is protected !!