Saturday, July 20, 2024

ಕಿತ್ತೂರಲ್ಲಿ ಮಕ್ಕಳ ಕಳ್ಳರೆಂಬ ಸಂಶಯ: ಮೂವರು ಬಂಧನ

ನ್ನಮ್ಮನ ಕಿತ್ತೂರು :ತಾಲ್ಲೂಕಿನ ಮರಿಗೇರಿ ಗ್ರಾಮದಲ್ಲಿ ಶನಿವಾರ ಮಕ್ಕಳ ಕಳ್ಳತನ ಮಾಡಲು ಯತ್ನಿಸಿದರು ಎಂಬ ಸಂಶಯದಿಂದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇವರೊಂದಿಗೆ ಇದ್ದ ಇನ್ನೂ ಮೂವರು ಪರಾರಿಯಾಗಿದ್ದಾರೆ.

ರಗ್ಗು, ಬೆಡ್ ಸೀಟ್, ಪ್ಲಾಸ್ಟಿಕ್ ಬುಟ್ಟಿಗಳನ್ನು ಮಾರಲು ಆರು ಜನ ವಾಹನದಲ್ಲಿ ಬಂದಿದ್ದರು. ರಸ್ತೆ ಬದಿ ಸೈಕಲ್ ಓಡಿಸುತ್ತಿದ್ದ ಬಾಲಕನನ್ನು ವಾಹನದಲ್ಲಿ ಹತ್ತಿಸಿಕೊಳ್ಳಲು ಯತ್ನಿಸಿದರು. ಇದರಿಂದ ಕಿರುಚಿದ 12 ವರ್ಷದ ಬಾಲಕ ಮನೆಗೆ ಓಡಿದ. ಇದನ್ನು ಕಂಡು ಊರಿನ ಜನ ಗುಂಪಾಗಿ ಸೇರಿದರು. ಜನಸಂದಣಿ ಕಂಡು ಮೂವರು ಪರಾರಿಯಾದರು. ಕೈಗೆ ಸಿಕ್ಕ ಮೂವರನ್ನು ಜನ ಪೊಲೀಸರಿಗೆ ಒಪ್ಪಿಸಿದರು.

ಆದರೆ, ತಾವು ಉತ್ತರ ಪ್ರದೇಶದಿಂದ ವ್ಯಾಪಾರ ಮಾಡುತ್ತ ಊರೂರು ಅಲೆಯುವುದಾಗಿ ಆರೋಪಿಗಳು ಹೇಳಿದ್ದಾರೆ. ತನ್ನನ್ನು ಎಳೆದುಕೊಂಡು ಹೋಗಲು ಯತ್ನಿಸಿದರು ಎಂದು ಬಾಲಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ರಾತ್ರಿಯವರೆಗೂ ಈ ಬಗ್ಗೆ ಪ್ರಕರಣ ದಾಖಲಿಸಿರಲಿಲ್ಲ. ಈ ಘಟನಾವಳಿಯ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

 

 

 

ಜಿಲ್ಲೆ

ರಾಜ್ಯ

error: Content is protected !!