Saturday, July 27, 2024

ಮನೆಯಲ್ಲಿಯೇ ಕುಳಿತುಕೊಂಡು ಆಸ್ತಿ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು:ಸಚಿವ ಆರ್. ಅಶೋಕ್

ಬೆಂಗಳೂರು: ಆಸ್ತಿ ನೋಂದಣಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾವೇರಿ 2 ತಂತ್ರಾಂಶ ರೂಪಿಸಿದ್ದು, ನವೆಂಬರ್ 1 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಕಾವೇರಿ 2 ತಂತ್ರಾಂಶ ಜಾರಿ ಮಾಡಲಾಗಿದ್ದು, ಯಶಸ್ವಿಯಾಗಿದೆ.

ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಆಸ್ತಿ ನೋಂದಣಿಗೆ ಜನ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲಾಗುವುದು. ಕೇವಲ 5 ನಿಮಿಷದೊಳಗೆ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತಹ ಕಾವೇರಿ 2 ತಂತ್ರಾಂಶ ರೂಪಿಸಲಾಗಿದ್ದು, ಮನೆಯಲ್ಲಿಯೇ ಕುಳಿತುಕೊಂಡು ಆಸ್ತಿ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಜೊತೆ ದಾಖಲೆ ಸಲ್ಲಿಸಿದಲ್ಲಿ ಉಪ ನೊಂದನಾಧಿಕಾರಿಗಳು ಪರಿಶೀಲಿಸಿ ಅರ್ಜಿಯಲ್ಲಿ ತಪ್ಪಿದ್ದರೆ ಮಾಹಿತಿ ಮತ್ತು ಸಮಯ ನೀಡುತ್ತಾರೆ. ಅವುಗಳನ್ನು ಸರಿಪಡಿಸಿಕೊಂಡ ನಂತರ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಕಾವೇರಿ 2 ತಂತ್ರಾಂಶವು ಭೂಮಿ, ಇ- ಆಸ್ತಿ, ಇ- ಸ್ವತ್ತು ಎಲ್ಲದಕ್ಕೂ ಲಿಂಕ್ ಆಗಿದ್ದು, ಆಸ್ತಿ ನೋಂದಣಿಯಲ್ಲಿನ ವಂಚನೆ ಮತ್ತು ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ದಾಖಲೆಗಳನ್ನು ಡಿಜಿ ಲಾಕರ್ ಗೆ ರವಾನಿಸಲಾಗುತ್ತದೆ. ಸುರಕ್ಷತೆ ದೃಷ್ಟಿಯಿಂದ ಇದು ಒಳ್ಳೆಯ ಕ್ರಮವಾಗಿದೆ. ಬೇರೆಯವರು ದಾಖಲೆಗಳನ್ನು ದುರುಪಯೋಗ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಸಚಿವ ಅಶೋಕ್ ಹೇಳಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!