Saturday, July 27, 2024

ಬೆಳಗಾವಿಯಲ್ಲಿ ಶಾಲಾ ಶಿಕ್ಷಕರಿಗೆ ನೀಡುವ ಅತ್ಯುತ್ತಮ ಪ್ರಶಸ್ತಿ ಆಯ್ಕೆಪಟ್ಟಿಯಲ್ಲಿ ಗೊಂದಲ: ಪ್ರಶಸ್ತಿ ಮಾರಾಟ ಆಗಿರುದಾಗಿ ಗುಸುಗುಸು ಚರ್ಚೆ

ಬೆಳಗಾವಿ(ಸೆ.05): ಒಳ್ಳೆಯ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಅವರಿಗೆ ಜಿಲ್ಲಾ ಆಡಳಿತ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಕರ ಕಚೇರಿ ವತಿಯಿಂದ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡುವ ಅತ್ಯುತ್ತಮ ಪ್ರಶಸ್ತಿ ಆಯ್ಕೆಪಟ್ಟಿಯಲ್ಲಿ ಗೊಂದಲ ಸೃಷ್ಠಿಯಾಗಿದೆ.

ಮಕ್ಕಳ ಭವಿಷ್ಯವನ್ನು ರೂಪಿಸುವ ಪಠ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತು, ದೂರದೃಷ್ಠಿ, ಕರುಣೆ, ಪ್ರೀತಿ, ವಿವೇಕ, ಮಾನವೀತೆಯನ್ನು ಬೋಧಿಸುವ ಮೂಲಕ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವ ಇಂದಿನ ದಿನವೇ ಶಿಕ್ಷಕರ ದಿನಾಚರಣೆ. ಈ ಸಂದರ್ಭದಲ್ಲಿ ಅಕ್ಷರ ಕಲಿಸುವ ಎಲ್ಲರಿಗೂ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ.

ಆದರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಅತ್ಯುತ್ತಮ ಪ್ರಶಸ್ತಿ ನೀಡುವ ಎರಡು ಆಯ್ಕೆಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರದಿದಾಡುತ್ತಿರುವುದರಿಂದ ಶಿಕ್ಷಕರು ಗೊಂದಲಕ್ಕಿಡಾಗಿದ್ದಾರೆ.ಒಂದು ಆಯ್ಕೆ ಪಟ್ಟಿಯಲ್ಲಿ 13 ಜನ ಶಿಕ್ಷಕರ ಹೆಸರುಗಳಿವೆ.ಇನ್ನೊಂದರಲ್ಲಿ 15 ಜನ ಶಿಕ್ಷಕರ ಹೆಸರುಗಳಿವೆ. ಎರಡು ಆಯ್ಕೆ ಪಟ್ಟಿಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಇದು ಶಿಕ್ಷಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಇದಲ್ಲದೆ ಪ್ರಶಸ್ತಿ ಮಾರಾಟ ಆಗಿರುವ ಬಗ್ಗೆ ಶಿಕ್ಷಕರ ವಲಯಲ್ಲಿ ಗುಸುಗುಸು ಚರ್ಚೆ ಕೇಳಿಬರುತ್ತಿದ್ದೆ. ಇದು ಆಯ್ಕೆ ಸಮಿತಿಯ ವೈಪಲ್ಯವೆ..?

ಅಕ್ಷರ ಕಲಿಸುವವರು ,ಅಧ್ಯಯನ ಮಾಡಲು ಮಾರ್ಗ ಸೂಚಿಸುವವರು,ಚಿಂತಿಸಲು ಪ್ರೇರೇಪಿಸುವವರು, ಅನ್ಯಾಯದ ವಿರುದ್ಧ ಸಿಡಿದೇಳಲು ಪ್ರೋತ್ಸಾಹಿಸುವವರು ,ಬದುಕು ರೂಪಿಸಿಕೊಳ್ಳಲು ಸಹಾಯ ಮಾಡುವವರು ಶಿಕ್ಷಕರು.ಸತ್ಯದ ಪರವಾಗಿ ಮಾತನಾಡಲು ಹೇಳಿ ಕೊಟ್ಟವರು,ದೇಶ ಭಕ್ತಿಯ ಪಾಠ ಮಾಡಿದವರು,ಮಾನವೀಯ ಮೌಲ್ಯಗಳನ್ನು ಬಿತ್ತಿದವರು,ಸಂವಿಧಾನ ಹಕ್ಕು – ಕರ್ತವ್ಯಗಳ ಬಗ್ಗೆ ಎಚ್ಚರಿಸಿದವರು ಶಿಕ್ಷಕರೇ ಅಲ್ಲವೇ… ಆದರೆ ಭ್ರಷ್ಟ ವ್ಯವಸ್ಥೆಯ ,ಆಯ್ಕೆ ಪ್ರಕ್ರಿಯೆ,ಅಕ್ರಮಗಳ ವಿರುದ್ಧ ನೀವೇ ಮೌನವಾದರೆ ಸಮಾಜದ ಭವಿಷ್ಯವೇನು.?

 

 

ಜಿಲ್ಲೆ

ರಾಜ್ಯ

error: Content is protected !!