Tuesday, May 28, 2024

ಸ್ವಾಮೀಜಿಗೆ ಒಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯನಾ?:ಎಚ್. ವಿಶ್ವನಾಥ್

ಮೈಸೂರು: ಚಿತ್ರದುರ್ಗದ ಎಸ್ಪಿಯನ್ನ ಸಸ್ಪೆಂಡ್ ಮಾಡಬೇಕು.ಸ್ವಾಮೀಜಿಗೆ ಒಂದು ನ್ಯಾಯ, ಜನಸಾಮಾನ್ಯರಿಗೆ ಒಂದು ನ್ಯಾಯನಾ? ಕಾನೂನು ಮೌನವಾಗಿ ಕುಳಿತರೆ  ಬೇರೆಯವರು ಇಂತಹ ಕೃತ್ಯ ಮಾಡಲು ಮುಂದಾಗುತ್ತಾರೆ. ಕಾನೂನಿಗೆ ಗೌರವ ಕೊಡಬೇಕು.ಚಿತ್ರದುರ್ಗದ ಮುರುಘಾ ಮಠಾಧೀಶ ಡಾ. ಶಿವಮೂರ್ತಿ ಶರಣರ ಮೇಲೆ ಬಂದಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುರುಘಾ ಮಠ ಗುರು ಪರಂಪರೆಯ ಇತಿಹಾಸ ಹೊಂದಿರುವ ಪ್ರಸಿದ್ಧ ಮಠ. ಹೀಗಾಗಿ ತಾತ್ಕಾಲಿಕವಾಗಿ ಸ್ವಾಮೀಜಿಗಳು ಪೀಠ ತ್ಯಜಿಸಲಿ ಅಂತ ಆಗ್ರಹಿಸಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ಆರೋಪ ಕೇಳಿ ಬಂದಿರುವುದು ವಿಷಾದದ ಸಂಗತಿ. ಸಿಎಂ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಅಂತ ಅವರು ಆಗ್ರಹಿಸಿದ್ದಾರೆ.

ಸ್ವಾಮೀಜಿಗಳ ರಕ್ಷಣೆಗೆ ಸಿಎಂ ಅಥವಾ ಯಡಿಯೂರಪ್ಪ ಅವರು ನಿಲ್ಲಬಾರದು. ವಿದ್ಯಾರ್ಥಿಗಳ ಪೈಕಿ ದಲಿತ ವಿದ್ಯಾರ್ಥಿಯೊಬ್ಬಳಿದ್ದಾಳೆ. ಹೀಗಾಗಿ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕು ಅಂತ ವಿಶ್ವನಾಥ್ ಆಗ್ರಹಿಸಿದ್ದಾರೆ

ದೇಶದಲ್ಲಿ ನಿರ್ಭಯಾ ಪ್ರಕರಣದ ಬಗ್ಗೆ ಜನರು, ಸಂಘ ಸಂಸ್ಥೆಯವರು  ಆಗ್ರಹ ಪಡಿಸಿದ ಬಳಿಕ 2012ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ. ಪೋಕ್ಸೋ ಕಾಯ್ದೆ ಬಲವಾಗಿ ನಮ್ಮ ಕೈಗೆ ಬಂದಿದೆ. ಇಂತಹ ಕಾಯ್ದೆಯಡಿ  ಗುರುಗಳು ನಿಂತಿದ್ದಾರೆ. ಈ ಕಾಯ್ದೆಯ ಜೊತೆಗೆ ಮಕ್ಕಳ ಅಪರಾಧಿಕರಣ ಹಾಗೂ ಎಸ್ಸಿಎಸ್ಟಿ ಪ್ರಕರಣದಲ್ಲಿ ದಾಖಲಾಗಬೇಕು. ನಮ್ಮ ನೆಲದ ಕಾನೂನಿನ ಪ್ರಕಾರ ದಾಖಲಾಗಬೇಕು ಅಂತ ಆಗ್ರಹಿಸಿದ್ದಾರೆ.

ಸ್ವಾಮಿಗಳು ಹಾಗೂ ಹೆಣ್ಣು ಮಕ್ಕಳ ಈ ಕೇಸ್ ನಲ್ಲಿ ಯಾರು ತಲೆ ಹಾಕಬಾರದು. ಪೋಕ್ಸೋ ದಾಖಲಾದ 24 ಗಂಟೆಯೊಳಗೆ ಅಪರಾಧಿಯಾಗುತ್ತಾನೆ. ಐಪಿಸಿ ಪ್ರಕಾರ ಬೇರೆ ಬೇರೆ ಕೇಸ್ ಗಳಾದರೆ  ಅಪಾದಿತ ಆಗುತ್ತಾನೆ. ಆದರೆ ಪೋಕ್ಸೋ ನಲ್ಲಿ ಅಪರಾಧಿ ಎಂದೇ ಪರಿಗಣಿಸಬೇಕು ಎಂದಿದೆ. ಅಪರಾಧಿಯನ್ನ ಅರೆಸ್ಟ್ ಮಾಡಬೇಕು ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದೆ. ನಾವುಗಳು ಮಧ್ಯೆ ಪ್ರವೇಶಿಸಿಬಾರದು ಅಂತ ವಿಶ್ವನಾಥ್ ಆಗ್ರಹಿಸಿದ್ದಾರೆ.

ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಲಿ:

ಹೋಮ್ ಮಿನಿಸ್ಟರ್, ಜಿಲ್ಲಾ ಎಸ್ಪಿ ಏನು ಮಾಡುತ್ತಿದ್ದಾರೆ.? ರಕ್ಷಣೆ ಮಾಡುವ ಕೆಲಸವನ್ನ ಯಾರು ಮಾಡಬಾರದು. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು ಎಂಬುದು ರಾಜ್ಯದ ಜನತೆಯ ಒಕ್ಕೊರಲು ಒತ್ತಾಯವಾಗಿದೆ. ಸ್ವಾಮೀಜಿ ಎಲ್ಲಾದರು ಹೋದರೆ ಪೊಲೀಸರು ಅವರನ್ನ ಬಹಳ ಗೌರವಯುತವಾಗಿ ಕರೆದುಕೊಂಡು ಬರುತ್ತಾರೆ. ಯಾರು ಅಪರಾಧ ಮಾಡಿದ್ದರೋ ಅವರ ಪರವಾಗಿ ನಾವಿದ್ದೇವೆ ಎಂದು ಹೇಳುತ್ತಿದ್ದಾರೆ ಅಂತ ಅವರು ಕಿಡಿಕಾರಿದ್ದಾರೆ.

ಸ್ವಾಮೀಜಿಗಳು ತಾತ್ಕಾಲಿಕವಾಗಿ ಪೀಠ ತ್ಯಜಿಸಲಿ:

ಚಿತ್ರದುರ್ಗದ ಎಸ್ಪಿಯನ್ನ ಸಸ್ಪೆಂಡ್ ಮಾಡಬೇಕು. ಕಾನೂನು ಮೌನವಾಗಿ ಕುಳಿತರೆ  ಬೇರೆಯವರು ಇಂತಹ ಕೃತ್ಯ ಮಾಡಲು ಮುಂದಾಗುತ್ತಾರೆ. ನಾಡಿನ  ಕಾನೂನಿಗೆ ಗೌರವ ಕೊಡಬೇಕು. ಜಗತ್ತಿನ ಅರಿವೇ ಇಲ್ಲದ ಮಕ್ಕಳ ಮೇಲೆ ಈ ಕೃತ್ಯವಾಗಿದೆ. ಸ್ವಾಮಿಗಳು  ತಮ್ಮ ಪೀಠವನ್ನ ತಾತ್ಕಾಲಿಕವಾಗಿ ತ್ಯಜಿಸಿ ಕಾನೂನಿನನ್ನ ಗೌರವಿಸಿ ಅಂತ ಮೈಸೂರಿನಲ್ಲಿ ಎಚ್ ವಿಶ್ವನಾಥ್ ಆಗ್ರಹಿಸಿದ್ದಾರೆ..

ವೋಟ್‌ಗಾಗಿ ರಾಜಕಾರಣಿಗಳು ಸುಮ್ಮನಾದ್ರಾ?

ಸ್ವಾಮೀಜಿಗೆ ಒಂದು ನ್ಯಾಯ, ಸಾಮಾನ್ಯ ಜನರಿಗೆ ಒಂದು ನ್ಯಾಯಾನಾ? ವೋಟ್ ಗಾಗಿ ಸಿದ್ರಾಮಯ್ಯ, ಯಡಿಯೂರಪ್ಪ ಬೊಮ್ಮಾಯಿ, ಕುಮಾರಸ್ವಾಮಿ ಸುಮ್ಮನಾದ್ರಾ ಅಂತ ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯ ಸಿಗಲೇಬೇಕು. ಹಾಗಾದ್ರೆ ಸರ್ಕಾರ ಪೋಕ್ಸೋ ಕಾಯ್ದೆಯನ್ನ ನಾವು ಒಪ್ಪಲ್ಲ ಎಂದು ಹೇಳಿಬಿಡಲಿ ಅಂತ ಅವರು ಖಾರವಾಗಿ ನುಡಿದಿದ್ದಾರೆ.

“ಪ್ರಧಾನಿಗೆ ಪತ್ರ ಬರೆಯುತ್ತೇನೆ”

ಈ ಬಗ್ಗೆ ಪ್ರಧಾನಮಂತ್ರಿಗೆ ಪತ್ರ ಬರೆಯುತ್ತೇನೆ. ಇಡೀ ರಾಜ್ಯದ ಮಾನಮರ್ಯಾದೆ  ಹೋಗ್ತಿದೆ. ವೋಟ್ ಗಾಗಿ ಸುಮ್ಮನಾಗಿಬಿಟ್ಟಿದ್ದೀರಲ್ಲ ಯಾಕೆ? ಚಿಂತಕರು, ಪ್ರಗತಿಪರರು ಏನು ಮಾಡುತ್ತಿದ್ದೀರಿ? ಮಕ್ಕಳ ಆಯೋಗ ಏನು ಮಾಡುತ್ತಿದೆ? ಈ ಘಟನೆಯಲ್ಲಿ ನ್ಯಾಯಸಿಗಲಿಲ್ಲವಾದರೆ 2023ರ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಅಂತ ಅವರು ಎಚ್ಚರಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!