Saturday, May 25, 2024

ಇಬ್ಬರು ಗಂಡಂದಿರ ಮುದ್ದಿನ ಹಂಡತಿ! ಒಬ್ಬಳನ್ನೇ ವಿವಾಹವಾದ ಗಂಡಂದಿರ ನಡುವೆ ಫೈಟ್

ಚಿಕ್ಕಮಗಳೂರು: ಒಬ್ಬಳನ್ನೇ ಮದುವೆಯಾದ ಇಬ್ಬರು ಗಂಡಂದಿರು ಜಗಳವಾಡಿಕೊಂಡಿದ್ದು, ಒಬ್ಬ ಮತ್ತೊಬ್ಬನನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಮೊದಲ ಪತಿಯನ್ನು ಹತ್ಯೆ ಮಾಡಲು ಯತ್ನಿಸಿದ ಎರಡನೇ ಪತಿ ಮತ್ತು ಆತನ ಸಹಚರರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ಸಿಪಿಸಿ ಕಾಲೋನಿಯ ದಿನಸಿ ವ್ಯಾಪಾರಿ ಮೋಹನ್ ರಾಮ್(ಮೊದಲ ಪತಿ) ಅವರನ್ನು ಅಪಹರಿಸಿದ್ದ ಬೆಂಗಳೂರಿನ ಓಂಪ್ರಕಾಶ್(ಎರಡನೇ ಪತಿ) ಮತ್ತು ಆತನ ಸಹಚರರಾದ ಶೈಲೇಂದ್ರ, ಪ್ರದೀಪ, ದಲ್ಲಾರಾಮ್, ಜಿತೇಂದ್ರ, ಶಂಕರ ಪಾಟೀಲ, ದಿನೇಶ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

 

ಮೋಹನ್ ರಾಮ್ 5 ವರ್ಷಗಳ ಹಿಂದೆ ರಾಜಸ್ಥಾನದ ಮಂಜುಳಾ ಅವರನ್ನು ಜೋದಪುರದಲ್ಲಿ ಪ್ರೀತಿಸಿ ಮದುವೆಯಾಗಿ ಕಡೂರಿಗೆ ಕರೆದುಕೊಂಡು ಬಂದಿದ್ದರು. ಎರಡು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದ ಮಂಜುಳಾ ಗಂಡನೊಂದಿಗೆ ಬರಲು ಒಪ್ಪಿರಲಿಲ್ಲ. ಇದರಿಂದ ಬೇಸತ್ತ ಮೋಹನ್ ರಾಮ್ ಸುಮ್ಮನಾಗಿದ್ದಾರೆ.

ಇತ್ತೀಚೆಗೆ ಮಂಜುಳಾ ಹರಿಯಾಣದ ಓಂ ಪ್ರಕಾಶ್ ನನ್ನು ಮದುವೆಯಾಗಿರುವುದು ಗೊತ್ತಾಗಿ ಮೋಹನ್ ರಾಮ್ ಮಂಜುಳಾಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಓಂ ಪ್ರಕಾಶ್ ತನ್ನ ಸಹಚರರೊಂದಿಗೆ ಆಗಸ್ಟ್ 28ರಂದು ಕಡೂರಿಗೆ ಬಂದು ಕಾರಿನಲ್ಲಿ ರಾತ್ರಿ ಮೋಹನ್ ರಾಮನನ್ನು ಅಪಹರಿಸಿದ್ದಾರೆ. ಕಾರಿನಲ್ಲಿಯೇ ಕೊಲೆ ಮಾಡಲು ಯತ್ನಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕಾರ್ ಚೇಸ್ ಮಾಡಿಕೊಂಡು ಹೋಗುವಾಗ ಮತಿಘಟ್ಟ ಸಮೀಪ ಕಾರ್ ಕೆಟ್ಟು ನಿಂತಿದೆ. ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿ ಮೋಹನ್ ರಾಮನನ್ನು ರಕ್ಷಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!