Tuesday, May 28, 2024

ಪೊಲೀಸರ ಸೋಗಿನಲ್ಲಿ ವಾಹನ ತಪಾಸಣೆ ಮಾಡಿ 4.79 ಲಕ್ಷ ರೂ. ಲಪಟಾಯಿಸಿದ ಐವರನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.

ಕಿತ್ತೂರು:ಪೊಲೀಸರ ಸೋಗಿನಲ್ಲಿ ವಾಹನ ತಪಾಸಣೆ ಮಾಡಿ 4.79 ಲಕ್ಷ ರೂ. ಲಪಟಾಯಿಸಿದ ಐವರನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಕಿತ್ತೂರು ಸಮೀಪದ ಅಂಬಡಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ 4 ಜನ ಗಂಡಸರು ಮತ್ತು ಕಾರಿನ ಚಾಲಕ ಹೀಗೆ ಒಟ್ಟು ಐದು ಜನರು ಕೂಡಿ “ನಾವು ಪೊಲೀಸರು ನಿಮ್ಮ ಗಾಡಿಯನ್ನು ತಪಾಸಣೆ ಮಾಡಬೇಕು. ನೀವು ಗಾಡಿಯಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದಿರಿ ಎನ್ನುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿ ಮೋಸದಿಂದ ವಾಹನವನ್ನು ತಪಾಸಣಿ ಮಾಡಿದಂತೆ ನಟಿಸಿದ್ದಾರೆ. ನಂತರ ನೀವು ಕಿತ್ತೂರ ಠಾಣೆಗೆ ಬನ್ನಿರಿ ಎಂದು ಹೇಳಿ ಮೋಸ ಮಾಡಿ ಗಾಡಿಯಲ್ಲಿದ್ದ 4,79,250/ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿದ್ದರು.

ಈ ಕುರಿತು ಬೆಳಗಾವಿಯ ರಾಮತೀರ್ಥ ನಗರದ  ಅತಾವುಲ್ಲಾ ಮಹ್ಮದಹಯಾತ್ ಹೊನಗೇಕರ ದೂರು ಕೊಟ್ಟದ್ದು, ಕಿತ್ತೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 111/2022 ಕಲಂ: 419, 420 ಸ.ಕ 34 ಐಪಿಸಿ ನೇದ್ದಕ್ಕೆ ಪ್ರಕರಣ ದಾಖಲಾಗಿತ್ತು.

ಶಿವಾನಂದ ಕಟಗಿ ಡಿ.ಎಸ್.ಪಿ. ಬೈಲಹೊಂಗಲ ಮಾರ್ಗದರ್ಶನದಲ್ಲಿ ಕಿತ್ತೂರ ವೃತ್ತ ನಿರೀಕ್ಷಕ ಮಹಾಂತೇಶ ಎ. ಹೊಸಪೇಟೆ ಮತ್ತು ಹನಮಂತ’ ಎಲ್ ಧರ್ಮಟ್ಟಿ ಪಿ.ಎಸ್.ಐ, ಕೆ.ಎಂ.ಕಲ್ಲೂರ ಪಿ.ಎಸ್.ಐ, ಕಿತ್ತೂರು, ಪ್ರವೀಣ ಕೋಠಿ ಪಿಎಸ್‌ಐ ದೊಡವಾಡ ರವರ ತಂಡ ಪ್ರಕರಣದ ತನಿಖೆಯನ್ನು ಕೈಕೊಂಡು ಆರೋಪಿಗಳಲ್ಲಿ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಮೋಸ ಮಾಡಿ ತೆಗೆದುಕೊಂಡು ಹೋದ ಹಣದಲ್ಲಿ 70,000/- ರೂಪಾಯಿಯನ್ನು ಹಾಗೂ ಕೃತ್ಯಕ್ಕೆ ಬಳಸಿದ ಇಂಡಿಕಾ ಕಾರನ್ನು ಮತ್ತು ಎರಡು ಮೋಟರ್ ಸೈಕಲ್ ಹಾಗೂ ಆರೋಪಿಗಳಿಂದ ನಕಲಿ ಪ್ರೆಸ್ ಗುರುತಿನ ಚೀಟಿಯನ್ನು ತಯಾರಿಸಿ ಅದನ್ನು ಅಪರಾಧದಲ್ಲಿ ಬಳಕೆ ಮಾಡಿದ್ದು ಎರಡು ಗುರುತಿನ ಚೀಟಗಳನ್ನು ಜಪ್ಪು ಮಾಡಲಾಗಿದೆ.ಇನ್ನೂ ನಾಲ್ಕು ಜನರನ್ನು ಪತ್ತೆ ಮಾಡುವುದು, ಮೋಸ ಮಾಡಿದ ಉಳಿದ ಹಣವನ್ನು ಜಪ್ತು ಮಾಡುವುದು, ಅಪರಾಧ ಕೃತ್ಯದ ಸಮಯದಲ್ಲಿ ಬಳಸಿರುವ ಗುರುತಿನ ಚೀಟಗಳ ಬಗ್ಗೆ ತನಿಖೆ ಮುಂದುವರೆದಿದೆ.

ಬೆಳಗಾವಿಯವರಾದ ಜಾಕೀರಹುಶೇನ್ ಕಡಬುನ್ ಮನಿಯಾರ್, ಶಾಹಿಲಅಹ್ಮದ ಶಾಹಾಬುನ್ ತರಸಗಾರ, ನಹಿಮ ಮಹದಶಫಿ ಮುಲ್ಲಾ ಬೈಲಹೊಂಗಲದ ಸರ್ವೇಶ ಮೊಹನ ತುಡವೇಕರ, ಹಿರೇಬಾಗೇವಾಡಿಯ ಬಸವರಾಜ ಗುರಪ್ಪ ಪಾಟೀಲ ಬಂಧಿತ ಆರೋಪಿಗಳಾಗಿದ್ದಾರೆ.

ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎ.ಆರ್.ಭಾವನವರ ಎ.ಎಸ್.ಐ., ಜಿ.ಜಿ.ಹಂಪಣ್ಣವರ ಎ.ಎಸ್.ಐ., ಟಿ.ವಿ.ಸೋಮನಟ್ಟ ಎ.ಎಸ್.ಐ., ಎನ್.ಎ.ಚಂದರಗಿ, ಆರ್.ಎಸ್.ಶೀಲ, ಡಿ.ಎಮ್.ದರಗಾದ, ಎಮ್.ಎಮ್.ದ್ಯಾಮನಗೌಡರ, ಎಲ್.ಎಫ್.ಆಂಬಲವಾಡಿ, ಎಸ್.ಎ.ದಫೇದಾರ, ವಿ.ಐ.ಹಡಪದ, ಆರ್.ಎಸ್.ತೇಲ. ಬಿ.ಎ.ಅಗಸಿಮನಿ, ಎಸ್.ಎಚ್.ಹಾದಿಮನಿ, ಕೃಷ್ಣಾ ಭಜಂತ್ರಿ, ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಬೆಳಗಾವಿ ಎಸ್ಪಿ ಶ್ಲಾಘಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!